ಡಿಸೆಂಬರ್ 17ರಂದು ಓಟಿಟಿಯಲ್ಲಿ "ಕನ್ನಡಿಗ" ನ ಆಗಮನ.
ಡಿಸೆಂಬರ್ 17ರಂದು ಓಟಿಟಿಯಲ್ಲಿ "ಕನ್ನಡಿಗ" ನ ಆಗಮನ.
*ಡಾ||ರವಿಚಂದ್ರ. ವಿ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಬಿ.ಎಂ.ಗಿರಿರಾಜ್ ನಿರ್ದೇಶನ.* ಕ್ರೇಜಿಸ್ಟಾರ್ ಡಾ||ರವಿಚಂದ್ರ.ವಿ ನಾಯಕರಾಗಿ ನಟಿಸಿರುವ "ಕನ್ನಡಿಗ" ಚಿತ್ರ ಡಿಸೆಂಬರ್ 17ರಂದು ಜೀ ಸಿನಿಮಾ ಕನ್ನಡ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಪೀರಿಯಡ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು "ಜಟ್ಟ", "ಮೈತ್ರಿ" ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶಿಸಿದ್ದಾರೆ. ರಚನೆ ಕೂಡ ಗಿರಿರಾಜ್ ಅವರದೆ. ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್.ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಡಾ||ರವಿಚಂದ್ರ.ವಿ, ಪಾವನ, ಜೀವಿಕ, ಜಮ್ಮಿ ಅಲ್ಟರ್, ಬಾಲಾಜಿ ಮನೋಹರ್, ರಾಕ್ ಲೈನ್ ವೆಂಕಟೇಶ್, ಶೃಂಗ, ಮೈತ್ರಿ ಜಗ್ಗ ಮುಂತಾದವರು "ಕನ್ನಡಿಗ" ಚಿತ್ರದಲ್ಲಿ ಅಭಿನಯಿಸಿದ್ದಾರೆ.
Recent comments