ಅದ್ದೂರಿಯಾಗಿ ಮೂಡಿ ಬರುತ್ತಿದೆ *ಶುಗರ್ ಫ್ಯಾಕ್ಟರಿ* ಟೈಟಲ್ ಸಾಂಗ್.
ಅದ್ದೂರಿಯಾಗಿ ಮೂಡಿ ಬರುತ್ತಿದೆ *ಶುಗರ್ ಫ್ಯಾಕ್ಟರಿ* ಟೈಟಲ್ ಸಾಂಗ್.
![Kannada new film](/sites/default/files/inline-images/IMG-20210929-WA0085.jpg)
*ಚಂದನ್ ಶೆಟ್ಟಿ* ಗಾಯನಕ್ಕೆ ಮೂವರು ನಾಯಕಿಯರೊಂದಿಗೆ ಹೆಜ್ಜೆ ಹಾಕಿದ *ಡಾರ್ಲಿಂಗ್ ಕೃಷ್ಣ.* *ಬಾಲಮಣಿ ಪ್ರೊಡಕ್ಷನ್ಸ್* ಲಾಂಛನದಲ್ಲಿ *ಗಿರೀಶ್ ಆರ್* ನಿರ್ಮಿಸುತ್ತಿರುವ,*ದೀಪಕ್ ಅರಸ್* ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ *"ಶುಗರ್ ಫ್ಯಾಕ್ಟರಿ"* ಚಿತ್ರದ *ಟೈಟಲ್ ಸಾಂಗ್* ನ ಚಿತ್ರೀಕರಣ ಬೆಂಗಳೂರಿನ ಹೆಸರಾಂತ ಪಬ್ ನಲ್ಲಿ ನಡೆಯುತ್ತಿದೆ.
![Kannada new film](/sites/default/files/inline-images/IMG-20210929-WA0086.jpg)
ಈ ಹಾಡನ್ನು *ಚಂದನ್ ಶೆಟ್ಟಿ* ಅವರೆ ಬರೆದು ಹಾಡಿದ್ದಾರೆ. ನಾಯಕ *ಡಾರ್ಲಿಂಗ್ ಕೃಷ್ಣ* ಚಿತ್ರದ ಮೂವರು ನಾಯಕಿಯರಾದ *ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪ ಶೆಟ್ಟಿ* ಅವರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
*ಧನಂಜಯ್* ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. *"ಶುಗರ್ ಫ್ಯಾಕ್ಟರಿ"* ಯ ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಾಡುಗಳ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ *"ಶುಗರ್ ಫ್ಯಾಕ್ಟರಿ"* ತೆರೆಗೆ ಬರಲು ಸಿದ್ದವಾಗಲಿದೆ. *ಬಾಲಮಣಿ* ಪ್ರೊಡಕ್ಷನ್ಸ್ ಲಾಂಛನದಲ್ಲಿ *ಗಿರೀಶ್* ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. *ಕಫಿರ್ ರಫಿ* ಸಂಗೀತ ನಿರ್ದೇಶನ ಹಾಗೂ *ಸಂತೋಷ್ ರೈ ಪಾತಾಜೆ* ಛಾಯಾಗ್ರಹಣ ಈ ಚಿತ್ರಕ್ಕಿದೆ.
Recent comments