ದೀಪಾವಳಿಗೆ ಬರಲಿದೆ *"ಮುಗಿಲ್ ಪೇಟೆ"*
ದೀಪಾವಳಿಗೆ ಬರಲಿದೆ *"ಮುಗಿಲ್ ಪೇಟೆ".
ಅದ್ದೂರಿಯಾಗಿ ಮೂಡಿಬಂದಿದೆ *ಮನು ರವಿಚಂದ್ರನ್* ಅಭಿನಯದ ಚಿತ್ರ.
ಕ್ರೇಜಿಸ್ಟಾರ್ *ರವಿಚಂದ್ರನ್* ಅವರ ಪುತ್ರ *ಮನು* ನಾಯಕನಾಗಿ ನಟಿಸಿರುವ *"ಮುಗಿಲ್ ಪೇಟೆ"* ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ. ಚಿತ್ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ. *"ಮುಗಿಲ್ ಪೇಟೆ* " ಅದ್ದೂರಿಯಾಗಿ ಮೂಡಿಬಂದಿದ್ದು, ಸಿನಿರಸಿಕರಿಗೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಲಿದೆ. ಈ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. *ಮನು* ಅವರಿಗೆ ನಾಯಕಿಯಾಗಿ *ಕಯಾದು ಲೋಹರ್* ನಟಿಸಿದ್ದಾರೆ. *ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು* ಹೀಗೆ ಹೆಸರಾಂತ ಕಲಾವಿದರು *"ಮುಗಿಲ್ ಪೇಟೆ"* ಯಲ್ಲಿ ಅಭಿನಯಿಸಿದ್ದಾರೆ.
*ಭರತ್ ಎಸ್ ನಾವುಂದ* ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು *ಮೋತಿ ಮೂವೀ ಮೇಕರ್ಸ್* ಲಾಂಛನದಲ್ಲಿ *ರಕ್ಷಾ ವಿಜಯ್ ಕುಮಾರ್* ನಿರ್ಮಿಸಿದ್ದಾರೆ. ಈ ಹಿಂದೆ "ಅಡಚಣೆಗಾಗಿ ಕ್ಷಮಿಸಿ" ಚಿತ್ರ ನಿರ್ದೇಶಿಸಿದ್ದ ಭರತ್ ಅವರಿಗೆ ಇದು ಎರಡನೇ ಚಿತ್ರ. ಆರು ಸುಮಧುರ ಹಾಡುಗಳಿರುವ ಈ ಚಿತ್ರಕ್ಕೆ *ಶ್ರೀಧರ್ ವಿ ಸಂಭ್ರಮ್* ಸಂಗೀತ ನೀಡಿದ್ದಾರೆ. *ರವಿವರ್ಮ (ಗಂಗು)* ಅವರ ಛಾಯಾಗ್ರಹಣ *"ಮುಗಿಲ್ ಪೇಟೆ"* ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. *ಅರ್ಜುನ್ ಕಿಟ್ಟು* ಸಂಕಲನ, *ಡಾ||ರವಿವರ್ಮ, ವಿಜಯ್* ಸಾಹಸ ನಿರ್ದೇಶನ, *ಹರ್ಷ, ಮುರಳಿ , ಮೋಹನ್* ನೃತ್ಯ ನಿರ್ದೇಶನ, ಹಾಗೂ *ಸತೀಶ್* ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ *ಹನುಮಂತು* ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
Recent comments