"ಭೀಮ" ನಾಗಿ ಬರುತ್ತಿದ್ದಾರೆ ದುನಿಯಾ ವಿಜಯ್* .
"ಭೀಮ" ನಾಗಿ ಬರುತ್ತಿದ್ದಾರೆ ದುನಿಯಾ ವಿಜಯ್* .
ಪ್ರಥಮ ನಿರ್ದೇಶನದ "ಸಲಗ" ಚಿತ್ರದ ಮೂಲಕ ಜನಮನ ಗೆದ್ದಿರುವ ದುನಿಯಾ ವಿಜಯ್, ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ಅಣಿಯಾಗಿದ್ದಾರೆ. ನೈಜಘಟನೆ ಆಧಾರಿತ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ "ಭೀಮ" ಎಂದು ಹೆಸರಿಡಲಾಗಿದೆ.
ದುನಿಯಾ ವಿಜಯ್ ಈ ಚಿತ್ರದಲ್ಲಿ ನಿರ್ದೇಶನದೊಂದಿಗೆ ನಾಯಕನಾಗೂ ಅಭಿನಯಿಸುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವ ರಾಜಕುಮಾರ್ ಅಭಿನಯದ "ಭೈರಾಗಿ" ಚಿತ್ರವನ್ನು ನಿರ್ಮಿಸುತ್ತಿರುವ ಕೃಷ್ಣ ಸಾರ್ಥಕ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
"ಸಲಗ" ಚಿತ್ರದ ವಿತರಕ ಜಗದೀಶ್ ಗೌಡ ಅವರು ಸಹ ಕೃಷ್ಣ ಸಾರ್ಥಕ್ ಅವರೊಂದಿಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. "ಟಗರು" ಖ್ಯಾತಿಯ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ. ಮಹಾಶಿವರಾತ್ರಿಯ ಶುಭದಿನದಂದು "ಭೀಮ" ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.
Recent comments