Skip to main content
ಅಗ್ರ 10 ಆಟಗಾರರ ಪಟ್ಟಿ ಪ್ರವೇಶಿಸಿದ ಸ್ಟೀವನ್ ಸ್ಮಿತ್

ಆಸ್ಟ್ರೇಲಿಯಾದ ಅಗ್ರ 10 ಆಟಗಾರರ ಪಟ್ಟಿ ಪ್ರವೇಶಿಸಿದ ಸ್ಟೀವನ್ ಸ್ಮಿತ್

ಆಸ್ಟ್ರೇಲಿಯಾದ ಅಗ್ರ 10 ಆಟಗಾರರ ಪಟ್ಟಿ ಪ್ರವೇಶಿಸಿದ ಸ್ಟೀವನ್ ಸ್ಮಿತ್

ಸ್ಟೀವನ್ ಸ್ಮಿತ್

ಮೆಲ್ಬೋರ್ನ್,: ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಹಿರಿಯ ಬ್ಯಾಟ್ಸ್‌ಮನ್‌ ಸ್ಟೀವನ್ ಸ್ಮಿತ್ ಅವರು ಟೆಸ್ಟ್‌ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸೀಸ್ ನ ಅಗ್ರ 10 ಆಟಗಾರರ ಪಟ್ಟಿಗೆ ಗುರುವಾರ ಸೇರ್ಪಡೆಯಾಗಿದ್ದಾರೆ. ಇಲ್ಲಿನ, ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಪ್ರಥಮ ಇನಿಂಗ್ಸ್ ನಲ್ಲಿ ಸ್ಮಿತ್ ಈ ಸಾಧನೆಗೆ ಭಾಜನರಾಗಿದ್ದಾರೆ.

ಅರ್ಧ ಶತಕ ಸಿಡಿಸುವ ಮೂಲಕ ದೀರ್ಘಾವಧಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ಅಗ್ರ 10 ಆಟಗಾರರ ಪಟ್ಟಿಗೆ ಪ್ರವೇಶ ಮಾಡಿದ್ದಾರೆ. ಪ್ರಥಮ ಇನಿಂಗ್ಸ್ ನ 51ನೇ ಓವರ್ ನಲ್ಲಿ ಸ್ಮಿತ್ 7,110 ರನ್ ಗಳಿಸಿ ಮಾಜಿ ಟೆಸ್ಟ್ ತಂಡದ ನಾಯಕ ಗ್ರೆಗ್ ಚಾಪೆಲ್ ಅವರನ್ನು ಹಿಣದಿಕ್ಕಿದರು. ಆ ಮೂಲಕ 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದಾರೆ. ಇವರು 168 ಪಂದ್ಯಗಳಿಂದ 13,378 ರನ್ ಗಳಿಸಿದ್ದಾರೆ. ಅಲಾನ್ ಬಾರ್ಡರ್ (11,174 ರನ್, 156 ಪಂದ್ಯಗಳು), ಸ್ಟೀವ್ ವಾ (10,927 ರನ್, 168 ಪಂದ್ಯಗಳು) ಹಾಗೂ ಮೈಕಲ್ ಕ್ಲಾರ್ಕ್ (8,643 ರನ್, 115 ಪಂದ್ಯಗಳು) ಇವರು ಪಾಂಟಿಂಗ್ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಸ್ಥಾನ ಪಡೆದಿದ್ದಾರೆ.

ಒಟ್ಟಾರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತ ತಂಡದ ಮಾಜಿ ಆಟಗಾರ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನ ಪಡೆದಿದ್ದಾರೆ. ಇವರು 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.