ನನ್ನ ಸಹೋದರ ಯೂಸಫ್ ಪಠಾಣ್ ಯಾವಾಗಲೂ ಗೇಮ್ ವಿನ್ನರ್: ಇರ್ಫಾಣ್ ಪಠಾಣ್
ನನ್ನ ಸಹೋದರ ಯೂಸಫ್ ಪಠಾಣ್ ಯಾವಾಗಲೂ ಗೇಮ್ ವಿನ್ನರ್: ಇರ್ಫಾಣ್ ಪಠಾಣ್

ನವದೆಹಲಿ: ಒಂದು ಅವಧಿಯಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್ಮನ್ ಎಂಬ ಹೆಸರು ಮಾಡಿದ್ದ ಯೂಸಫ್ ಪಠಾಣ್ ಅವರು ಗುರುವಾರ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ. ಆ ಮೂಲಕ ಯೂಸಫ್ ಪಠಾಣ್ ಅವರ ಐಪಿಎಲ್ ಬಾಗಲು ಸಂಪೂರ್ಣ ಬಂದ್ ಆಯಿತು. ಇರ್ಫಾಣ್ ಪಠಾಣ್ ಹಾಗೂ ಯೂಸಫ್ ಪಠಾಣ್ ಅವರು ಭಾರತ ತಂಡದಲ್ಲಿ ಹೆಚ್ಚು ಅವಧಿ ಆಡುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ, ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆದ ತಮ್ಮ ಸಹೋದರನ ಬಗ್ಗೆ ಇರ್ಫಾಣ್ ಪಠಾಣ್ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. " ಯೂಸಫ್ ಪಠಾಣ್ ಯಾವಾಗಲೂ ಗೇಮ್ ವಿನ್ನರ್ ಮತ್ತು ಇಂಥ ಸಣ್ಣಪುಟ್ಟ ಏರಿಳಿತಗಳು ಅವರ ವೃತ್ತಿ ಜೀವನವನ್ನು ವ್ಯಾಖ್ಯಾನಿಸುವುದಿಲ್ಲ," ಎಂದು ತಮ್ಮ ಸಹೋದರ ಯುಸೂಪ್ ಪಠಾಣ್ ಅವರ ಬೆನ್ನಿಗೆ ಇರ್ಫಾಣ್ ಪಠಾಣ್ ನಿಂತಿದ್ದಾರೆ.

ವೃತ್ತಿ ಜೀವನದ 174 ಐಪಿಎಲ್ ಪಂದ್ಯಗಳಾಡಿರುವ ಯೂಸಫ್ ಪಠಾಣ್ ಅವರು ಕೋಲ್ಕತಾದಲ್ಲಿ ಗುರುವಾರ ಮುಕ್ತಾಯಾಗಿದ್ದ 13ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದರು. ಆದರೆ, ಅವರನ್ನು ಯಾವುದೇ ತಂಡ ಖರೀದಿಸುವಲ್ಲಿ ಆಸಕ್ತಿ ತೋರಲಿಲ್ಲ. ಕಳೆದ 2018 ಮತ್ತು 2019 ರ ಆವತ್ತಿಯಲ್ಲಿ ಯೂಸಫ್ ಪಠಾಣ್ ಅವರು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಆದರೆ, 2020ರ ಆವೃತ್ತಿಯ ಹರಾಜಿಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡ ಅವರನ್ನು ಬಿಡುಗಡೆ ಮಾಡಿತ್ತು. ಐಪಿಎಲ್ ವೃತ್ತಿ ಜೀವನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಹೆಚ್ಚು ಅವಧಿ ಸವೆಸಿದ್ದಾರೆ. 2011 ರಿಂದ 2017ರವರೆಗೂ ಕೆಕೆಆರ್ ಫ್ರಾಂಚೈಸಿಯಲ್ಲೇ ಉಳಿದಿದ್ದರು. 2012 ಮತ್ತು 2014 ರಲ್ಲಿ ಕೋಲ್ಕತಾ ಚಾಂಪಿಯನ್ ಆಗಿತ್ತು. ಐಪಿಎಲ್ ವೃತ್ತಿ ಜೀವನದಲ್ಲಿ ಇವರು 142.97 ಸ್ಟ್ರೈಕ್ ರೇಟ್ನೊಂದಿಗೆ 2,,241 ರನ್ ಹಾಗೂ ಎಕಾನಮಿ 7.40ರೊಂದಿಗೆ 42 ವಿಕೆಟ್ ಪಡೆದಿದ್ದಾರೆ.
Recent comments