Skip to main content
​ಕೊರೋನಾ ಯುದ್ಧ ಗೆದ್ದ ರಾಯಚೂರು .!!ಪೊಲೀಸ್ ಅಧಿಕಾರಿಗೆ ಆರತಿ ಬೆಳಗಿ ಸನ್ಮಾನ .

​ಕೊರೋನಾ ಯುದ್ಧ ಗೆದ್ದ ರಾಯಚೂರು .!!ಪೊಲೀಸ್ ಅಧಿಕಾರಿಗೆ ಆರತಿ ಬೆಳಗಿ ಸನ್ಮಾನ .

ಕೊರೋನಾ ಯುದ್ಧ ಗೆದ್ದ ರಾಯಚೂರು.!! ಪೊಲೀಸ್ ಅಧಿಕಾರಿಗೆ ಆರತಿ ಬೆಳಗಿ ಸನ್ಮಾನ .

Raichur

ರಾಯಚೂರು :ಇಡೀ ವಿಶ್ವವೇ ಈ ಕೊರೋನಾ ಮಹಾಮಾರಿಗೆ ತತ್ತರಿಸಿಹೋಗಿದೆ.ಇದರ ವಿರುದ್ಧದ ಹೋರಾಟಕ್ಕೆ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ.ಇಂತಹ ಸಮಯದಲ್ಲಿ ಜನರ ಕಷ್ಟ ಒಂದೇಡೆಯಾದರೇ ,ನಮ್ಮ ಜೀವ ರಕ್ಷಣೆಗೆ ತಮ್ಮ ಜೀವವನ್ನೇ ಲೆಕ್ಕಿಸದೇ ಹೋರಾಡಿದ ಮತ್ತು ಹೋರಾಡುತ್ತಿರುವಂತಹ, ಪೊಲೀಸ್ ಅಧಿಕಾರಿಗಳು, ಡಾಕ್ಟರ್, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು,ಮುಖ್ಯವಾಗಿ ಆಡಳಿತ ಅಧಿಕಾರಿಗಳನ್ನು ನಾವು ನೇನಪಿಸಿಕೊಳ್ಳಬೇಕು . ಅಂದಹಾಗೆ ಇವರಿಗೂ ಕೂಡ ಕುಟುಂಬ,ಮಕ್ಕಳು,ಜೀವನ ಅನ್ನೋದು ಇರುತ್ತಲ್ಲವೇ.? ಹಿಗಿದ್ದರು ತಮ್ಮ ಜಾವಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುತ್ತಿರುವುದು ಶ್ಲಾಘನಿಯ.ಇಂತವರಿಗಾಗಿ ನಾವು ಏನಾದ್ರು ಅಭಿನಂದನೆ ಸಲ್ಲಿಸುವುದು ಒಳಿತಲ್ಲವೇ.? ಕಲಾಸಂಕುಲ ಸಂಸ್ಥೆಯವತಿಯಿಂದ

Raichur sp

ಡಾ .ವೇದಮೂರ್ತಿಯವರಿಗೆ ಆರತಿ ಬೆಳಗಿ ಸನ್ಮಾನ ಮಾಡಲಾಯಿತು .

Raichur

ಅಂದಹಾಗೆ ಇದುಒಂದು ವಿಶೇಷ ವಿಭಿನ್ನ "ಕೊರೋನಾ ವಿರುದ್ಧ ನಮ್ಮನ್ನು ಉಳಿಸಿದ" ದೇವರುಗಳಿಗೆ ಸನ್ಮಾನದ ಕಾರ್ಯಕ್ರಮ ಅಂದರೂ ತಪ್ಪಾಗಲಾರದು.ಇಂದು ರಾಯಚೂರಿನಲ್ಲಿ "ಕೊರೋನಾ" ವಿರುದ್ಧ ಹೋರಾಟದಲ್ಲಿ ಜನರ ಜೀವ ರಕ್ಷಣೆಮಾಡಿ,ಇದುವರೆಗೂ ನಮ್ಮ ರಾಯಚೂರಿನಲ್ಲಿ ಒಂದು ಕೊರೋನಾ ಕೇಸ್ ಸೃಷ್ಟಿ ಯಾಗಲು ಬಿಡದೆ ಹಗಲಿರುಳು ಶ್ರಮಿಸಿ, ಕಾನೂನತ್ಮಕವಾಗಿ ಜನರಿಗೆ ಯಾವುದೇ ತೊಂದರೆಗಳುಯಾಗದ ರೀತಿಯಲ್ಲಿ ನಮ್ಮನ್ನು ಕಾಪಾಡಿದ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಡಾ ಸಿ ಬಿ ವೇದಮೂರ್ತಿ ಜಿಲ್ಲಾ ಪೊಲೀಸ್ ವರಿಷ್ಠಅಧಿಕಾರಿಗಳು ಇವರಿಗೆ ಕಲಾಸಂಕುಲ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮತಿ ರೇಖಾಬಡಿಗೇರ ಇವರು ಆರತಿ ಬೆಳಗಿ ಸನ್ಮಾನ ಮಾಡುವ ಮೂಲಕ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸಿದರು .

Raichur

ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಾರುತಿ ಬಡಿಗೇರ್ ಇವರು ಮಾತನಾಡಿ ಇಂತಹ ಮಹಾನ್ ಸೇವೆಮಾಡಿರುವ ಮತ್ತು ನಮ್ಮ ರಕ್ಷಣೆ ಮಾಡಿರುವ ಕಲಿಯುಗದ ದೇವರುಗಳಿಗೆ ಪೂಜೆ ಮಾಡಿ ಸನ್ಮಾನ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.ಆದರೆ ಈ ಕೊರೋನಾ ವಿರುದ್ಧದ ಹೋರಾಟ ನಿರಂತರವಾದರೂ ಸದ್ಯದ ಪರಿಸ್ಥಿತಿಯಲ್ಲಿ ನಾವು ಸೇಫ್ . ಅಲ್ಲದೇ ಈ ಕಾರ್ಯದಲ್ಲಿ ನಿರಂತರದ ಹೋರಾಟದಲ್ಲಿ ಶ್ರಮಿಸುತ್ತಿರುವ ಇಂತಹವರಿಗೆ ಸ್ಫೂರ್ತಿ ನೀಡಿದಂತೆ ಆಗುತ್ತದೆ. ಮುಂದೆ ಇನ್ನೂ ಲಾಕ್ ಡೌನ್ ಮುಗಿಯುವ ಸಮಯ ಇದ್ದೂದರಿಂದ ನಾವು ಮನೆಯಲ್ಲಿ ಇದ್ದು ಸಂಪೂರ್ಣ ಬೆಂಬಲ ನೀಡಬೇಕಾಗಿದೆ .ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರು ,ಶ್ರೀ ಮತಿ ಸುಜಾತಾ ಅಮರೇ ಗೌಡ ,ಸದ್ಯಸ್ಯರಾದ ,ವಿರೇಶ್ ಮೇದಾರ್ ,ಗ್ರೀನ್ ರಾಯಚೂರು ರಾಜೇಂದ್ರ ,ದಂಡಪ್ಪ ಬಿರಾದಾರ್ ಇನ್ನಿತರರು ಭಾಗಿಯಾಗಿದ್ದರು .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.