ಕನ್ನಡ ರಾಜ್ಯೋತ್ಸವಕ್ಕೆ ಜೇಂಕಾರ ಮ್ಯೂಸಿಕ್ ಕೊಡುಗೆ
ಸೋಜುಗದ ಕಸ್ತೂರಿ ಕನ್ನಡ ಕನ್ನಡ ರಾಜ್ಯೋತ್ಸವಕ್ಕೆ ಜೆಂಕಾರ್ ಮ್ಯೂಸಿಕ್ ಕೊಡುಗೆ.
ನಮ್ಮ ತಾಯಿಯಷ್ಟೇ ತಾಯಿನಾಡನ್ನು ಪ್ರೀತಿಸುವ ಕನ್ನಡಿಗರು ನಾವು. ನವಂಬರ್ ೧ ನಮಗೆ ದೊಡ್ಡ ಹಬ್ಬ . ಅದೇ ಕನ್ನಡ ರಾಜ್ಯೋತ್ಸವ . ಈ ಶುಭ ಸಂದರ್ಭದಲ್ಲಿ ಮ್ಯೂಸಿಕ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ
ಜೆಂಕಾರ್ ಮ್ಯೂಸಿಕ್* *ಸೋಜುಗದ ಕಸ್ತೂರಿ ಕನ್ನಡ* ಎಂಬ ಸುಂದರ ಹಾಡನ್ನು ಬಿಡುಗಡೆ ಮಾಡಿದೆ ಜೆಂಕಾರ್ ಯೂಟ್ಯೂಬ್ ಚಾನಲ್ ನಲ್ಲಿ. ಖ್ಯಾತ ಗಾಯಕ *ಅಜಯ್ ವಾರಿಯರ್* ನಟಿಸಿ, ಹಾಡಿರುವ ಈ ಹಾಡನ್ನು ಜಿಮ್ ಶಿವು ಬರೆದಿದ್ದಾರೆ.
*ಯುವರಾಜ್* ಸಂಗೀತ ನೀಡಿದ್ದಾರೆ. ನಿರ್ದೇಶನ ಹಾಗೂ ಸಂಕಲನದ ಜವಾಬ್ದಾರಿ *ಮೋಹನ್ ಕಾಮಾಕ್ಷಿ* ಅವರದು. ಶ್ರೀರಂಗಪಟ್ಟಣದ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡನ್ನು *ಸುನೀತ್ ಹಲಗೇರಿ* ತಮ್ಮ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ. ಈಗಾಗಲೇ ಬಿಡುಗಡೆಯಾಗಿರು ಈ ಹಾಡಿಗೆ ಒಳ್ಳೆಯ ಪ್ರಶಂಸೆ ದೊರಕಿದೆ.
ಸದ್ಯದಲ್ಲೇ ಸಾಕಷ್ಟು ವಿಡಿಯೋ ಹಾಡುಗಳು *ಜೆಂಕಾರ್ ಮ್ಯೂಸಿಕ್* ಮೂಲಕ ಬಿಡುಗಡೆಯಾಗಲಿದೆ.
Recent comments