Skip to main content
ಕೋಲಾರದಲ್ಲಿ  "ಉಸಿರೇ ಉಸಿರೇ".

ಕೋಲಾರದಲ್ಲಿ "ಉಸಿರೇ ಉಸಿರೇ".

ಕೋಲಾರದಲ್ಲಿ "ಉಸಿರೇ ಉಸಿರೇ".

Kannada

" ಉಸಿರೇ ಉಸಿರೇ" ಎಂದ ತಕ್ಷಣ ನೆನಪಾಗುವುದು ಕಿಚ್ಚ ಸುದೀಪ. ಅವರಿಂದಲೇ ಆರಂಭವಾದ ಚಿತ್ರ "ಉಸಿರೇ ಉಸಿರೇ". ಸಿಸಿಎಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ನಡೆಯುತ್ತಿದೆ.

ರಾಜೀವ್, ನಾಯಕಿ ಶ್ರೀಜಿತ, ತಾರಾ ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಸಾಯಿಕುಮಾರ್, ಬ್ರಹ್ಮಾನಂದಂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಟ ಅಲಿ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಕೋಲಾರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು, ಕೋಲಾರ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. N ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಿ.ಎಂ.ವಿಜಯ್ ನಿರ್ದೇಶಿಸುತ್ತಿದ್ದಾರೆ.

ಕಥೆ, ಚಿತ್ರಕಥೆ ಕೂಡ ವಿಜಯ್ ಅವರದೆ‌ ಸುಮಧುರ ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.ಕೆ.ಎಂ.ಪ್ರಕಾಶ್ ಈ ಚಿತ್ರದ ಸಂಕಲನಾರರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.