ಕೇವಲ ಮನೋರಂಜನ ಕಾರ್ಯಕ್ರಮಕ್ಕೆ ಸೀಮಿತವಾದ ಯುವಕ -ಯುವತಿಯರು ಪರಿಸರ ದಿನಾಚರಣೆ ಕೇವಲ ತೊರ್ಪಡಿಕೆಗಲ್ಲ. ಎನ್ ಉದಯ ಸಾಹುಕಾರ
ಲಯನ್ಸ್ ಕ್ಲಬ್ ಸಿರವಾರ ವತಿಯಿಂದ ಸಸಿ ನೆಡುವ ಕಾರ್ಯಕ್ರಮ.

ಸಿರವಾರ :ಪರಿಸರ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಆಫ್ ಸಿರವಾರ ಹಾಗೂ ಪಟ್ಟಣ ಪಂಚಾಯತ ಕಾರ್ಯಾಲಯ ಸಿರವಾರ ಮತ್ತು ಸಾಮಾಜಿಕ ಅರಣ್ಯ ವಲಯ ಮಾನವಿ ಇವರುಗಳ ಸಹಯೋಗದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲೂಕಿನ ಬಯಲು ಆಂಜನೇಯ ದೇವಸ್ಥಾನ ಸಿರವಾರ ಸ್ಥಳದಿಂದ ಮೇನ್ ರೋಡ್ ಡಿವೈಡ್ರ್ ಸಸಿನೆಡುವ ಜಾಗದಲ್ಲಿ ದೇವದುರ್ಗ ಕ್ರಾಸ್ - ಕೇಂದ್ರ ಬಸ್ ಸ್ಟಾಂಡ್ ವರೆಗೂ ಸಸಿಗಳನ್ನು ನೆಡುವುದರ ಮೂಲಕ ಮಾದರಿ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಮನೋರಂಜನ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾದ ಯುವಕ - ಯುವತಿ ಪರಿಸರ ದಿನಾಚರಣೆ ಕೇವಲ ತೊರ್ಪಡಿಕೆಗಲ್ಲ. ಶ್ರೀ ಎನ್ ಉದಯ ಸಾಹುಕಾರ.
ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ತಾಲೂಕಿನ ಲಯನ್ಸ್ ಕ್ಲಬ್ ಸಂಚಾಲಕರದ ಶ್ರೀ ಏನ್ ಉದಯ ಸಾಹುಕಾರ್ ಇವರು ಮಾತನಾಡುತ್ತ, ಪ್ರಸ್ತುತ ದಿನಮಾನಗಳಲ್ಲಿ ಪರಿಸರದಲ್ಲಿ ಉಂಟಾಗುತ್ತೀರುವ ಪರಿಸರ ಮಾಲಿನ್ಯ, ವಿಷಪೂರಿತ ಆಹಾರ ಪದ್ಧತಿ ಆಮ್ಲಜನಕದ ಕೊರತೆಗಳಂತ ಅಘಾತಕಾರಿ ಬದಲಾವಣೆಗಳ ಬಗ್ಗೆ ಕಳವವನ್ನು ವ್ಯಕ್ತ ಪಡಿಸುತ್ತ, ಜೊತಗೆ ಪರಿಸರ ದಿನಾಚರಣೆಯನ್ನು ಕೇವಲ ತೋರ್ಪಡಿಕೆಗೆ ಆಚರಣೆಮಾಡುವುದಲ್ಲ ಬದಲಿಗೆ ಮುಂದಿನ ಪೀಳಿಗಿಗೆ ಮಾದರಿ ಯಾಗುವ ರೀತಿಯಲ್ಲಿ ಗಿಡ ಮರಗಳನ್ನು ಬೆಳೆಸುವುದರೊಂದಿಗೆ ಪರಿಸದ ಬಗ್ಗೆ ಜಾಗೃತಿಯನ್ನು ಮುಡಿಸಬೇಕು ಎಂದು ಹೇಳಿದರು.
ಇಂದು ಸಾಮಾಜಿಕ ವಲಯದಲ್ಲಿ ಯುವಕ-ಯುವತಿಯರು ಮತ್ತು ಸಾಮನ್ಯ ಜನರು ತಮ್ಮನ್ನು ತಾವು ಕೇವಲ ಮನೋರಂಜನ ಮತ್ತು ರಾಜಕೀಯ ಕಾರ್ಯಕ್ರಮಗಳಂತಹ ಸಮಾರಂಭಗಳಿಗೆ ಸೀಮಿತ ಗೊಳಿಸಿಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.ಇನ್ನೂ ಮುಂದಿನ ದಿನಮಾನಗಳಲ್ಲಾದರೂ ಎಚೆತ್ತುಕೊಂಡು ಪರಿಸ ಸಂರಕ್ಷಣೆಯಅಂತಹ ಉಪಯುಕ್ತ ಕಾರ್ಯಕ್ರಮದ ಕಡೆ ಗಮನ ಹರಿಸಿ ಬೇಕಾಗಿದೆ ಎಂದು ಹೇಳುತ್ತ ಸಿರವಾರ ತಾಲೂಕನ್ನು ಮಾದರಿ ತಾಲೂಕನ್ನಾಗಿಸೋಣ ಎಂದು ಕರೆ ಕೊಟ್ಟರು.
ಇದೇ ಸಂದರ್ಭದಲ್ಲಿ ಮುಂಗಾರು ಸಿರಿ ಸಂಪಾದ ಸಂಸ್ಕೃತಿ ಹಬ್ಬ ರಾಯಚೂರು ಸಮಾಜ ಸೇವೆ ಪ್ರಶಸ್ತಿಗೆ ಭಾಜನರಾದ ಸಂಜೀವಿನಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಜ್ಞಾನ ಮಿತ್ರ ಇವರಿಗೆ ಸನ್ಮಾನಿಸಿ ಗೌವವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಉದಯ ಸಾಹುಕಾರ ಮತ್ತು ಲಯನ್ಸ್ ಕ್ಲಬ್ ಆಫ್ ಸಿರವಾರದ ಪದಾಧಿಕಾರಿಗಳು ಮತ್ತು ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀ ವೈ ಎನ್ ಭೂಪನಗೌಡ ಉಪಾಧ್ಯಕ್ಷರಾದ ಶ್ರೀ ಮತಿ ಲಕ್ಸ್ಮಿ ಅದ್ಯಾಪ್ಪ ತಾಲೂಕಿನ, ಸಿರವಾರ ಪೊಲೀಸ್ ಠಾಣೆಯ ಪಿ ಸ್ ಐ ಯವರಾದ ಅಮರೇಗೌಡ, ಶ್ರೀ ಶಿವಶರಣ ಅರಕೇರಾ ,ಶ್ರೀ ನರಸಿಂಹ ರಾವ್ ಕುಲಕರ್ಣಿ ಮತ್ತು ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಜಿಯಾಗಿದ್ದರು.
Recent comments