Skip to main content
"ರಾಣ"ನ ಹಾಡಿಗೆ ಹೆಜ್ಜೆ ಹಾಕಲಿರುವ ರಾಗಿಣಿ

"ರಾಣ"ನ ಹಾಡಿಗೆ ಹೆಜ್ಜೆ ಹಾಕಲಿರುವ ರಾಗಿಣಿ

"ರಾಣ"ನ ಹಾಡಿಗೆ ಹೆಜ್ಜೆ ಹಾಕಲಿರುವ ರಾಗಿಣಿ.

"ರಾಣ"ನ ಹಾಡಿಗೆ ಹೆಜ್ಜೆ ಹಾಕಲಿರುವ ರಾಗಿಣಿ

ಶ್ರೇಯಸ್ಸ್ ಕೆ ಮಂಜು ಅಭಿನಯದ "ರಾಣ" ಚಿತ್ರದ ಹಾಡೊಂದಕ್ಕೆ ನಟಿ ರಾಗಿಣಿ ಹೆಜ್ಜೆ ಹಾಕಲಿದ್ದಾರೆ. ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಈ ಹಿಂದೆ "ವಿಕ್ಟರಿ" ಚಿತ್ರಕ್ಕಾಗಿ ಶಿವುಭೇರ್ಗಿ ಅವರು ಬರೆದಿದ್ದ "ಯಕ್ಕ ನಿನ್ನ ಮಗಳು ನನಗೆ" ಹಾಡು ಈಗಲೂ ಜನಪ್ರಿಯವಾಗಿದೆ. ಈ ಹಾಡಿನಲ್ಲೂ ರಾಗಿಣಿ ಅಭಿನಯಿಸಿದ್ದರು. ಈಗ "ರಾಣ" ಚಿತ್ರಕ್ಕೂ ಶಿವು ಭೇರ್ಗಿ ಅವರು ಸೂಪರ್ ಡೂಪರ್ ಹಿಟ್ ಆಗುವ ಹಾಡೊಂದನ್ನು ಬರೆದಿದ್ದು, ರಾಗಿಣಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. . ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

"ರಾಣ"ನ ಹಾಡಿಗೆ ಹೆಜ್ಜೆ ಹಾಕಲಿರುವ ರಾಗಿಣಿ

ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ "ರಾಣ" ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.