Skip to main content
ಆಸ್ಟ್ರೀಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತಮತಿ “ ಆಯ್ಕೆ.

ಆಸ್ಟ್ರೀಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತಮತಿ “ ಆಯ್ಕೆ.

ಆಸ್ಟ್ರೀಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತಮತಿ “ ಆಯ್ಕೆ.

ಆಸ್ಟ್ರೀಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತಮತಿ “ ಆಯ್ಕೆ.

ಇಂಚರ ಪುಟ್ಟಣ್ಣ ಪ್ರೋಡಕ್ಷನ್ಸ್ ನ ಪುಟ್ಟಣ್ಣನವರು ನಿರ್ಮೀಸಿ, ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ “ ಅಮೃತ ಮತಿ “ ಕನ್ನಡ ಚಿತ್ರವು ಆಸ್ಟ್ರೀಯಾ ದೇಶದ ಅಂತರರಾಷ್ಟ್ರೀಯಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.ಈಗ ಕೊರೊನಾ ಸಂಕಷ್ಟದ ಸಮಯವಾದ್ದರಿಂದ ಮೊದಲಿಗೆ ಅನ್ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ಆಯೋಜಿಸಲಾಗಿದ್ದು ಇದು ಜುಲೈ22 ರಿಂದ ಆಗಸ್ಟ್ 5ರವರೆಗೆ ನಡೆಯಲಿದೆ.ಹೀಗೆ ಆನ್ ಲೈನ್ ಸ್ಕ್ರೀನಿಂಗ್ ಮಾಡಲ್ಪಟ್ಟ ಚಿತ್ರಗಳು ಸ್ಪರ್ದಾಕಣದಲ್ಲೂ ಇದ್ದು ಫಲಿತಾಂಶವನ್ನು ಆನಂತರ ಪ್ರಕಟಿಸಿ ನೇರ ಪ್ರತ್ಯಕ್ಷ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಹೀಗಾಗಿ ”ಅಮೃತ ಮತಿ “ ಚಿತ್ರವು ಸ್ಪರ್ದಾಕಣಕ್ಕೂ ಆಯ್ಕೆಯಾಗಿದೆ.

ಆಸ್ಟ್ರೀಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತಮತಿ “ ಆಯ್ಕೆ.

“ಅಮೃತ ಮತಿ “ ಚಿತ್ರವು 13ನೇ ಶತಮಾನದಲ್ಲಿ ಕನ್ನಡದ ಖ್ಯಾತಿ ಕವಿ ಜನ್ನ ಬರೆದ “ ಯಶೋಧರ ಚರಿತೆ” ಕಾವ್ಯವನ್ನು ಆಧರಿಸಿದೆ.ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನ ಮಾಡಿ ಮರುಸೃಷ್ಟಿಮಾಡಲಾಗಿದೆ. ‘ಅಮೃತಮತಿ” ಪಾತ್ರದಲ್ಲಿ ಖ್ಯಾತ ನಟಿ ಹರಿಪ್ರಿಯಾ ಅವರು ಅಭಿನಯಿಸಿದ್ದು,ಅವರಿಗೆ “ನೋಯ್ಡಾ ವಿಶ್ವ ಚಿತ್ರೋತ್ಸವ’ದಲ್ಲಿ ಈ ಪಾತ್ರಾಭಿನಯಕ್ಕೆ “ ಶ್ರೇಷ್ಟ ನಟಿ “ ಪ್ರಶಸ್ತಿ ಬಂದಿದ್ದನ್ನು ಇಲ್ಲಿ ನೆನೆಯಬಹುದು.

ಆಸ್ಟ್ರೀಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತಮತಿ “ ಆಯ್ಕೆ.

ಯಶೋಧರನ ಪಾತ್ರದಲ್ಲಿ ಬಹು ಭಾಷಾನಟ ಕಿಶೋರ್ ಅಭಿನಯಿಸಿದ್ದು ಉಳಿದ ತಾರಾಗಣದಲ್ಲಿ ಸುಂದರರಾಜ್’ ಪ್ರಮೀಳಾ ಜೋಷಾಯ್.ತಿಲಕ್, ಸುಪ್ರಿಯಾರಾವ್,ವತ್ಸಲಾ,ಮೋಹನ್,ಅಂಬರೀಶ್ ಸಾರಂಗಿ,ಭೂಮಿಕಾ ಲಕ್ಷ್ಮೀನಾರಯಣ್ ಇದ್ದಾರೆ.ಸುರೇಶ್ ಅರಸು ಸಂಕಲನ ,ನಾಗರಾಜ ಆದವಾನಿ ಛಾಯಗ್ರಹಣ,ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.