Skip to main content
ಏಕದಿನ ಶ್ರೇಯಾಂಕ  ಅಗ್ರ ಸ್ಥಾನದಲ್ಲೇ ಮುಂದುವರೆದ ವಿರಾಟ್ ,ಬುಮ್ರಾ

ಏಕದಿನ ಶ್ರೇಯಾಂಕ ಅಗ್ರ ಸ್ಥಾನದಲ್ಲೇ ಮುಂದುವರೆದ ವಿರಾಟ್ ,ಬುಮ್ರಾ

ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ

ವಿರಾಟ್

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಅವರು ಮೊದಲು ಹಾಗೂ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಜತೆಗೆ, ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಅವರು ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಭಾರತ 2-1 ಅಂತರದಲ್ಲಿ ಏಕದಿನ ಸರಣಿಯಲ್ಲಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಅಲಂಕರಿಸಿದರೆ, ರೋಹಿತ್ ಶರ್ಮಾ ಎರಡನೇ ಸ್ಥಾನ ಪಡೆದಿದ್ದಾರೆ.

ಮೂರೂ ಪಂದ್ಯಗಳ ವಿರಾಟ್ 183 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 171 ರನ್ ಗಳಿಸಿದ ರೋಹಿತ್ ಶರ್ಮಾ ಎರಡನೇ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದರು. ಸರಣಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 119 ರನ್ ಗಳಿಸಿದರು. ವಿರಾಟ್ ಕೊಹ್ಲಿ 886 ಅಂಕಗಳು ಹಾಗೂ ರೋಹಿತ್ ಶರ್ಮಾ 868 ಅಂಕಗಳನ್ನು ಪಡೆದಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಅವರು 829 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಆಸೀಸ್ ವಿರುದ್ಧ ಎರಡು ಇನಿಂಗ್ಸ್‌ ಗಳಲ್ಲಿ 170 ರನ್ ಗಳಿಸಿದ್ದ ಶಿಖರ್ ಧವನ್ ಏಳು ಸ್ಥಾನಗಳಲ್ಲಿ ಏರಿಕೆ ಕಂಡು 15ನೇ ಸ್ಥಾನಕ್ಕೆೆ ಜಿಗಿದಿದ್ದಾರೆ. ಮೂರನೇ ಪಂದ್ಯದಲ್ಲಿ ಭುಜದ ಗಾಯದಿಂದಾಗಿ ಅವರು ಬ್ಯಾಟಿಂಗ್ ಆಡಿರಲಿಲ್ಲ. ಕೆ.ಎಲ್ ರಾಹುಲ್ ಮೂರೂ ಪಂದ್ಯಗಳಿಂದ 146 ರನ್ ಗಳಿಸಿದ್ದರು. ಇದರ ನೆರವಿನಿಂದ ಅವರು 21 ಸ್ಥಾಾನಗಳಲ್ಲಿ ಏರಿಕೆ ಕಂಡು50ನೇ ಸ್ಥಾನ ಪಡೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಆಸ್ಟ್ರೇಲಿಯಾ ಸರಣಿಗೆ ತಂಡಕ್ಕೆೆ ಮರಳಿದ ಜಸ್ಪ್ರಿತ್ ಬುಮ್ರಾ ಅವರು 764 ಅಂಕಗಳೊಂದಿಗೆ ಬೌಲಿಂಗ್ ವಿಭಾಗದಲ್ಲಿ ಅಗ್ರ ಸ್ಥಾಾನದಲ್ಲಿ ಮುಂದುವರಿದಿದ್ದಾರೆ.

ಬುಮ್ರಾ

ನ್ಯೂಜಿಲೆಂಡ್ ನ ಎಡಗೈ ವೇಗಿ ಟ್ರೆೆಂಟ್ ಬೌಲ್ಟ್‌, ಅಫ್ಘಾನಿಸ್ತಾನದ ಮುಜೀಬ್ ಉರ್ ರಹಮನ್, ದಕ್ಷಿಣ ಆಫ್ರಿಿಕಾದ ಕಗಿಸೋ ರಬಾಡ ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದ ರವೀಂದ್ರ ಜಡೇಜಾ ಬೌಲಿಂಗ್ ಶ್ರೇಯಾಂಕದಲ್ಲಿ ಎರಡು ಸ್ಥಾನಗಳಲ್ಲಿ ಏರಿಕೆ ಕಂಡು 27ನೇ ಸ್ಥಾನ ಪಡೆದಿದ್ದಾರೆ.

ಅಲ್ಲದೇ, ಬ್ಯಾಟಿಂಗ್ ನಲ್ಲಿ 45 ರನ್ ಗಳಿಸಿದ್ದರು. ಆಲ್‌ರೌಂಡರ್ ಶ್ರೇಯಾಂಕದಲ್ಲಿ ಅವರು 10ನೇ ಸ್ಥಾನ ಪಡೆದಿದ್ದಾರೆ. ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ 229 ರನ್ ಗಳಿಸಿದ ಸ್ಟೀವನ್ ಸ್ಮಿತ್ ಕೊನೆಯ ಪಂದ್ಯದಲ್ಲಿ 131 ರನ್ ಸಿಡಿಸಿದ್ದರು.ಅವರು ನಾಲ್ಕು ಸ್ಥಾನಗಳಲ್ಲಿ ಏರಿಕೆ ಕಂಡು 23ನೇ ಸ್ಥಾನಕ್ಕೆೆ ತೃಪ್ತಿಪಟ್ಟುಕೊಂಡಿದ್ದಾರೆ.

ಸಹ ಆಟಗಾರರಾದ ಡೇವಿಡ್ ವಾರ್ನರ್ ಆರನೇ ಹಾಗೂ ನಾಯಕ ಆ್ಯರೋನ್ ಫಿಂಚ್ 10ನೇ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್ ಅಲೆಕ್ಸ್‌ ಕ್ಯಾರಿ 31ನೇ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಐದು ವಿಕೆಟ್ ಪಡೆದಿದ್ದ ಸ್ಪಿನ್ನರ್ ಆ್ಯಡಂ ಝಂಪಾ 20ನೇ ಸ್ಥಾನಗಳಲ್ಲಿ ಏರಿಕೆ ಕಂಡು 37ನೇ ಸ್ಥಾನಕ್ಕೇರಿದ್ದಾರೆ. ಕೇನ್ ರಿಚರ್ಡ್‌ಸನ್ ಅವರು 77 ರಿಂದ 65ಕ್ಕೇರಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.