Skip to main content
ಹ್ಯಾಂಡ್ ಲೂಮ್ ವಾಯೇಜ್ ಪ್ರದರ್ಶನ ಕಾರ್ಯಕ್ರಮ

ಹ್ಯಾಂಡ್ ಲೂಮ್ ವಾಯೇಜ್ ಪ್ರದರ್ಶನ ಕಾರ್ಯಕ್ರಮ.

ಇಂದಿನಿಂದ ಐದು ದಿನ ಕೈಮಗ್ಗ ಪರಂಪರೆ ಉತ್ತೇಜಿಸುವ "ಹ್ಯಾಂಡ್‌ಲೂಮ್‌ ವಾಯೇಜ್" ಪ್ರದರ್ಶನ ಕಾರ್ಯಕ್ರಮ

ಹ್ಯಾಂಡ್ ಲೂಮ್ ವಾಯೇಜ್

ನವೆಂಬರ್ 2019 ಬೆಂಗಳೂರು:ವಿಮೋರ್‌ ತನ್ನ 45 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇಂದಿನಿಂದ ಐದು ದಿನಗಳ ಕಾಲ "ಹ್ಯಾಂಡ್‌ಲೂಮ್‌ ವಾಯೇಜ್" ಶೀರ್ಷಿಕೆಯ ಕೈಮಗ್ಗ ಉಡುಪುಗಳ ಪ್ರದರ್ಶನವನ್ನು ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಏರ್ಪಡಿಸಲಾಗಿದೆ. ಕೈಮಗ್ಗವು ಭಾರತದಲ್ಲಿ ಶ್ರೀಮಂತ ಪರಂಪರೆ ಹೊಂದಿದೆ. ಈ ಪರಂಪರೆಯನ್ನು ವಿಮೋರ್ ಹ್ಯಾಂಡ್‌ಲೂಮ್‌ ಸಂಸ್ಥೆ ಮುಂದುವರೆಸಿಕೊಂಡು ಬಂದಿದ್ದು, 45 ವರ್ಷಗಳನ್ನು ಪೂರೈಸಿದೆ. ಇದರ ಸಂಭ್ರಮಾಚರಣೆಯ ಅಂಗವಾಗಿ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಕೈಗಮಗ್ಗ ಮೇಳದ ರೀತಿಯಲ್ಲಿ ಪ್ರದರ್ಶನ ಇಡಲಾಗಿದೆ.

ಹ್ಯಾಂಡ್ ಲೂಮ್ ವಾಯೇಜೆ

ನೇಯ್ಗೆ ಸಂಪ್ರದಾಯಗಳು ಮತ್ತು ನೇಯ್ಗೆ ಮಾಡುವ ಕೈಗಳ ಜೀವನಶೈಲಿ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಆಳವಾಗಿ ತೆಗೆದುಕೊಳ್ಳಲು ಇಚ್ಚಿಸುವ ವೀಕ್ಷಕರಿಗೆ ಮಾಹಿತಿ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಷಿನ್‌ಗಳ ಮೂಲಕ ಉಡುಪು ತಯಾರಿಸುತ್ತಿರುವುದರಿಂದ ಕೈಮಗ್ಗ ನಶಿಸುವ ಹಾದಿ ಹಿಡಿದೆ. ಇದರ ಸಂರಕ್ಷಣೆಯಲ್ಲಿ ಸಮುದಾಯಗಳು ಹೇಗೆ ಕೈಜೋಡಿಸಬೇಕೆಂಬುದರ ಬಗ್ಗೆಯೂ ಈ ಐದು ದಿನದ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸುವ ಸಂವಾದಾತ್ಮಕ ಜ್ಞಾನ-ಹಂಚಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಹ್ಯಾಂಡ್‌ಲೂಮ್‌ಗಳು ಶತಮಾನಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಹಿಯಾಗಿ ನಿಂತಿವೆ, ನಮ್ಮ ದೇಶದ ವೈವಿಧ್ಯತೆಯನ್ನು ತೋರಿಸುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೈಮಗ್ಗ ಉದ್ಯಮ ಮತ್ತು ಕುಶಲಕರ್ಮಿಗಳ ಸಮೂಹಗಳು ಶೀಘ್ರವಾಗಿ ಕ್ಷೀಣಿಸುತ್ತಿವೆ. ದೊಡ್ಡ ಕೈಗಾರಿಕೆಗಳು ಮತ್ತು ಆಧುನಿಕ ಪವರ್‌ಲೂಮ್‌ಗಳೊಂದಿಗೆ ಸ್ಪರ್ಧಿಸುತ್ತಿರುವ ಸಾಂಪ್ರದಾಯಿಕ ನೇಕಾರರಿಗೆ ಕನಿಷ್ಠ ಮಾರ್ಗದರ್ಶನ ಮತ್ತು ಮಾರ್ಗದರ್ಶನದೊಂದಿಗೆ, ಕೈಮಗ್ಗಗಳನ್ನು ಬಲಪಡಿಸುವ ಮತ್ತು ಕುಶಲಕರ್ಮಿಗಳನ್ನು ಸಶಕ್ತಗೊಳಿಸುವ ಪ್ರಯತ್ನಗಳು ಕಡಿಮೆಯಾಗುತ್ತಿವೆ. ಬೆರಳೆಣಿಕೆಯಷ್ಟು ಜನರು ಈ ಉದ್ಯಮದ ಸ್ಥಿತಿಯನ್ನು ಕ್ರಮೇಣ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿಮೋರ್ ಕೈಮಗ್ಗ ಪ್ರತಿಷ್ಠಾನದ ಸಹ ಸಂಸ್ಥಾಪಕ ಪವಿತ್ರ ಮುದ್ದಯಾ ಹೇಳಿದರು. “45 ವರ್ಷಗಳಲ್ಲಿ, ವಿಮೋರ್‌ನಲ್ಲಿ ನಾವು ಕೈಮಗ್ಗಗಳ ಪುನರುಜ್ಜೀವನ ಮತ್ತು ಸಂರಕ್ಷಣೆಗೆ ಮಾತ್ರವಲ್ಲ, ಜೀವನೋಪಾಯವನ್ನು ಸಬಲೀಕರಣಗೊಳಿಸುವ ಮತ್ತು ಉಳಿಸಿಕೊಳ್ಳುವಲ್ಲಿ ಸಹಾಯ ಮಾಡಲು ರಾಷ್ಟ್ರದಾದ್ಯಂತದ ನೇಕಾರರೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ್ದೇವೆ.

ವಿಮೋರ್ ಕೈ ಮಗ್ಗ

ಕುಶಲಕರ್ಮಿಗಳೊಂದಿಗಿನ ಸಂಬಂಧವನ್ನು ಸಾರ್ವಜನಿಕರಿಗೆ ತೆರೆದುಕೊಳ್ಳಲು ಹಲವು ಅವಕಾಶಗಳನ್ನು ಹಾಗೂ ಉದ್ಯೋಗವನ್ನು ನೇಕಾರರಿಗೆ ನೀಡಲಾಗಿದೆ ಎಂದರು. ಭಾರತದಲ್ಲಿ ಕೈಮಗ್ಗಗಳ ಪೋಷಣೆಯನ್ನು ಉತ್ತೇಜಿಸುವ ಆಂದೋಲನವನ್ನು ಈ ಐದು ದಿನದ ಕಾರ್ಯಕ್ರಮದಲ್ಲಿ ಮಾಡಲಾಗುತ್ತದೆ. ಇದಕ್ಕೆ ಜೊತೆಯಾಗಿ ನೇಕಾರರು, ವಿನ್ಯಾಸಕರು, ಉದ್ಯಮಿಗಳು ಮತ್ತು ಅಭಿಜ್ಞರು ತಮ್ಮ ಅಭಿಪ್ರಾಯ ಹಾಗೂ ವಿಚಾರ ಮಂಧನ ಮಾಡಲಿದ್ದಾರೆ ಎಂದರು .

ವಿಮೋರ್

ಐದು ದಿನಗಳ ಕಾರ್ಯಕ್ರಮದಲ್ಲಿ ಡಾ. ಜಯರಾಜ್, ಹೆಸರಾಂತ ಸುಸ್ಥಿರ ನೇಕಾರರಾದ ಶ್ರೀ ಸಿ.ಶೇಖರ್, ಶಿಕ್ಷಣತಜ್ಞ ಪ್ರತಿಮಾ ಮಾರಿಯಾ, ಗುಂಜನ್ ಜೈನ್, ಸ್ಥಾಪಕ ಮತ್ತು ವಿನ್ಯಾಸಕ, ವೃಕ್ಷ ಸೇರಿದಂತೆ ಉದ್ಯಮದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಕಾರ್ಯಸೂಚಿಯಲ್ಲಿ ಕೈಮಗ್ಗ, ಜವಳಿ ಮತ್ತು ನೇಯ್ಗೆಯ ಐತಿಹಾಸಿಕ ವಿಕಾಸದ ಕುರಿತಾದ ಮಕ್ಕಳ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ, ಕೈಮಗ್ಗದ ಕಥೆ ಹೇಳುವ ಕಾರ್ಯಕ್ರಮವೂ ಇರಲಿದೆ. ಜೊತೆಗೆ ನೃತ್ಯ ಕಾರ್ಯಕ್ರಮ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರಗಯಕ್ರಮವೂ ಜರುಗಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.