Skip to main content
ಭಾರತಿ ಶೆಟ್ಟಿ ಫಿಲಂಸ್ ಗೆ ಪ್ರತಿಷ್ಠಿತ "ಕರ್ನಾಟಕ ಬ್ಯುಸಿನೆಸ್ ಅವಾರ್ಡ್ಸ್".

ಭಾರತಿ ಶೆಟ್ಟಿ ಫಿಲಂಸ್ ಗೆ ಪ್ರತಿಷ್ಠಿತ "ಕರ್ನಾಟಕ ಬ್ಯುಸಿನೆಸ್ ಅವಾರ್ಡ್ಸ್".

ಭಾರತಿ ಶೆಟ್ಟಿ ಫಿಲಂಸ್ ಗೆ ಪ್ರತಿಷ್ಠಿತ "ಕರ್ನಾಟಕ ಬ್ಯುಸಿನೆಸ್ ಅವಾರ್ಡ್ಸ್".

Kannada

ಮಹಿಳೆಯರು ಈಗ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ನಂತರ ವಿದೇಶದಲ್ಲಿ ನೆಲೆಸಿರುವ ಭಾರತಿ ಶೆಟ್ಟ ಅವರು ವಿದೇಶದಲ್ಲಿ ಜಾಹೀರಾತು ಸಂಸ್ಥೆ ನಡೆಸುತ್ತಿದ್ದಾರೆ. ಅವರ ಸಂಸ್ಥೆಗೆ ಉತ್ತಮ ಹೆಸರಿದೆ. ಹುಟ್ಟಿದ ಊರಿನ ಮೇಲೆ ಅಪಾರ ವಿಶ್ವಾಸ ಹೊಂದಿರುವ ಭಾರತಿ ಶೆಟ್ಟಿ ಅವರಿಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ. ಹಾಗಾಗಿ ಭಾರತಿ ಶೆಟ್ಟಿ ಫಿಲಂಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಆ ಸಂಸ್ಥೆಯ ಮೊದಲ ಚಿತ್ರವಾಗಿ ಕಿರಣ್ ರಾಜ್ ನಾಯಕರಾಗಿ ನಟಿಸಿರುವ " ಬಡ್ಡೀಸ್" ಚಿತ್ರವನ್ನು ನಿರ್ಮಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಇಂತಹ ಕಾರ್ಯಗಳಿಗೆ ಉತ್ತೇಜಿಸಲು ಕೊಡಲಾಗುವ ಪ್ರತಿಷ್ಠಿತ "ಕರ್ನಾಟಕ ಬ್ಯುಸಿನೆಸ್ ಅವಾರ್ಡ್ಸ್" ಈ ಬಾರಿ ಭಾರತಿ ಶೆಟ್ಟಿ ಫಿಲಂಸ್ ಸಂಸ್ಥೆಗೆ ಸಂದಿದೆ. ಇತ್ತೀಚೆಗೆ ಭಾರತಿ ಶೆಟ್ಟಿ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.