Skip to main content
ಆಸ್ಟ್ರೇಲಿಯಾ ಕಾಳ್ಗಿಚ್ ಸಂತ್ರಸ್ತರ ಪರ ನಿಂತ ಜೊಕೊವಿಚ್

ಆಸ್ಟ್ರೇಲಿಯಾ ಕಾಳ್ಗಿಚ್ ಸಂತ್ರಸ್ತರ ಪರ ನಿಂತ ಜೊಕೊವಿಚ್

25 ಸಾವಿರ ಡಾಲರ್ ನೀಡಿ ಆಸ್ಟ್ರೇಲಿಯಾ ಕಾಳ್ಗಿಚ್ಚಿ ಸಂತ್ರಸ್ತರ ಪರ ನಿಂತ ಜೊಕೊವಿಚ್ 

ಜೊಕೊವಿಚ್

ನವದೆಹಲಿ: ಹಿಂದೆಂದೂ ಕಂಡಿರದ ಕಾಳ್ಗಿಚ್ಚಿಗೆ ಆಸ್ಟ್ರೇಲಿಯಾ ತತ್ತರಿಸಿದೆ. ಲೆಕ್ಕಕ್ಕೆ ಸಿಗದಷ್ಟು ಸಕಲ ಜೀವಿಗಳು ಹಾಗೂ ಅರಣ್ಯ ಬೆಂಕಿಗೆ ಸುಟ್ಟು ಕರಕಲಾಗಿದೆ. ಈ ದುರ್ಘಟನೆಗೆ ವಿಶ್ವದಾದ್ಯಂತ ಸ್ಟಾರ್ ಕ್ರೀಡಾಪಟುಗಳ ಹೃದಯ ಮಿಡಿದಿದೆ. ಕಾಳ್ಗಿಚ್ಚು ಪರಿಹಾರ ನಿಧಿಗೆ ಹಣ ನೀಡಲು ಮುಂದೆ ಬಂದಿದ್ದಾರೆ. ವಿಶ್ವದ ಎರಡನೇ ಶ್ರೇಯಾಂಕಿತ ಹಾಗೂ ಸರ್ಬಿಯಾ ಟೆನಿಸ್ ದಂತಕತೆ ನೊವಾಕ್ ಜೊಕೊವಿಚ್ ಅವರು ಮರಿಯಾ ಶರಪೋವಾ ಅವರ ಒತ್ತಾಯಕ್ಕೆ ಮಣಿದು 25,000 ಡಾಲರ್ ಮೊತ್ತವನ್ನು ಕಾಳ್ಗಿಚ್ಚು ಪರಿಹಾರ ನಿಧಿಗೆ ದಾನ ಮಾಡುವ ಮೂಲಕ ಕಾಳ್ಗಿಚ್ಚಿಗೆ ತುತ್ತಾಗಿರುವ ಆಸ್ಟ್ರೇಲಿಯಾ ಜನತೆಯ ಪರ ನಿಂತಿದ್ದಾರೆ.

ಜೊಕೊವಿಚ್ ಮರಿಯಾ ಶರಪೋವಾ

“ಕಾಳ್ಗಿಚ್ಚಿಗೆ ತತ್ತರಿಸಿರುವ ಆಸ್ಟ್ರೇಲಿಯಾದ ಸಮುದಾಯಗಳಿಗೆ ನೆರವಾಗುವ ದೃಷ್ಠಿಯಿಂದ ಮರಿಯಾ ಶರಪೋವಾ ಅವರ ಜತೆ 25,000 ಡಾಲರ್ ಪರಿಹಾರ ನಿಧಿಗೆ ನೀಡುತ್ತೇನೆ,” ಎಂದು ನೊವಾಕ್ ಜೊಕೊವಿಚ್ ಟ್ವೀಟ್ ಮಾಡಿದ್ದಾರೆ. “ಕಳೆದ 15 ವರ್ಷಗಳಿಂದ ಆಸ್ಟ್ರೇಲಿಯಾ ನನ್ನ ತವರು ದೇಶವಾಗಿದೆ. ಕಾಳ್ಗಿಚ್ಚಿನಿಂದ ಭೂಮಿ ನಾಶ, ಸುಂದರ ಕುಟುಂಬಗಳು ಹಾಗೂ ಅಪಾರ ಸಂಖ್ಯೆಯ ವನ್ಯ ಜೀವಿಗಳಿಗೆ ಮಾರಕವಾಗಿ ಪರಿಗಣಿಸಿದೆ. ಇದೆಲ್ಲವನ್ನೂ ಗಮನಿಸುತ್ತಿದ್ದೇನೆ.

ನಾನು 25,000 ಡಾಲರ್ ಕಾಳ್ಗಿಚ್ಚು ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ನೊವಾಕ್ ಜೊಕೊವಿಚ್ ನೀವು ನನ್ನೊಂದಿಗೆ ಕೈ ಜೋಡಿಸಬಹುದಾ? ಎಂದು ಶರಪೋವಾ ಟ್ವೀಟ್ ಮಾಡಿದ್ದರು. ಆಸ್ಟ್ರೇಲಿಯಾ ಬುಷ್ ಲ್ಯಾಂಡ್ ನಲ್ಲಿ ಉದ್ಭವವಾಗಿರುವ ಕಾಳ್ಗಿಚ್ಚಿನಲ್ಲಿ 23 ಮಂದಿ ಸಾವಿಗೀಡಾಗಿದ್ದು, 6 ದಶಲಕ್ಷ ಹೆಕ್ಟೇರ್ ಅರಣ್ಯ ಸುಟ್ಟು ಕರಕಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಕಾಳ್ಗಿಚ್ಚಿನಲ್ಲಿ ತೊಂದರೆಗೆ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕ್ರಿಸ್ ಲೀನ್, ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಡಿ ಆರ್ಸಿ ಶಾರ್ಟ್ ಅವರು ಬಿಬಿಎಲ್ ನಲ್ಲಿ ಬಾರಿಸುವ ಪ್ರತಿಯೊಂದು ಸಿಕ್ಸರ್ ನ 250 ಡಾಲರ್ ಮೊತ್ತವನ್ನು ಕಾಳ್ಗಚ್ಚಿನಲ್ಲಿ ಹೋರಾಡುತ್ತಿರುವ ಸಿಬ್ಬಂದಿಗೆ ನೀಡುವುದಾಗಿ ಘೋಷಿಸಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.