Skip to main content
ಸೈನಾ ,ಸಿಂದು ಕ್ವಾಟರ್ ಫೈನಲ್ಗೆ .

ಮಲೇಷ್ಯಾ ಮಾಸ್ಟರ್ಸ್ : ಕ್ವಾಟರ್ ಪೈನಲ್ಗೆ ಸೈನಾ ,ಸಿಂಧು .

ಮಲೇಷ್ಯಾ ಮಾಸ್ಟರ್ಸ್: ಕ್ವಾರ್ಟರ್ ಫೈನಲ್‌ಗೆ ಸೈನಾ, ಸಿಂಧು

ಪಿ ವಿ ಸಿಂಧು

ಕೌಲಾಲಂಪುರ: ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಕ್ವಾಟರ್ ಫೈನಲ್ ತಲುಪಿದ್ದಾರೆ. ಆದರೆ, ಪುರುಷರ ವಿಭಾಗದಲ್ಲಿ ಸಮೀರ್ ವರ್ಮಾ ಹಾಗೂ ಎಚ್.ಎಸ್ ಪ್ರಣಯ್ ಅವರು ಸೋಲು ಅನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಗುರುವಾರ 38 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪ್ರೀ ಕ್ವಾಟರ್ ಫೈನಲ್ಸ್ ಹಣಾಹಣಿಯಲ್ಲಿ ಸೈನಾ ನೆಹ್ವಾಲ್ ಅವರು 25-23, 21-12 ಅಂತರದಲ್ಲಿ ಥಾಯ್ಲೆಂಡ್ ನ ಎನ್ ಸಿ ಯಂಗ್ ವಿರುದ್ಧ ಗೆದ್ದು ಅಂತಿಮ ಎಂಟರ ಘಟ್ಟಕ್ಕೆೆ ಲಗ್ಗೆೆ ಇಟ್ಟಿದ್ದಾರೆ. ಮತ್ತೊಂದು ಮಹಿಳೆಯರ ಸಿಂಗಲ್ಸ್ ಅಂತಿಮ 16ರ ಹಂತದ ಪಂದ್ಯದಲ್ಲಿ ಪಾರಮ್ಯ ಮೆರೆದ ಒಲಿಂಪಿಕ್‌ಸ್‌ ಬೆಳ್ಳಿ ಪಶಸ್ತಿ ವಿಜೇತೆ ಪಿ.ವಿ ಸಿಂಧು ಅವರು ವಿಶ್ವದ 19ನೇ ಅಯಾ ಒಹೊರಿ ವಿರುದ್ಧ 21-19, 21-15 ಅಂತರದಲ್ಲಿ ಗೆದ್ದು ಕ್ವಾಟರ್ ಫೈನಲ್ ಗೆ ತಲುಪಿದರು. 2019ರ ವರ್ಷದಲ್ಲಿ ನೀರಸ ಪ್ರದರ್ಶನ ತೋರಿದ್ದ ಸೈನಾ ನೆಹ್ವಾಲ್ 2020ರ ವರ್ಷದಲ್ಲಿ ಕ್ವಾಟರ್ ಫೈನಲ್ ತಲುಪುವ ಮೂಲಕ ಶುಭಾರಂಭ ಮಾಡಿದ್ದು, ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.

ಸೈನ್ ನೆಹವಾಲ್

ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಕರೋಲಿನ್ ಮರಿನ್ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಸಮೀರ್ ವರ್ಮಾ ಅವರು ಮಲೇಷ್ಯಾ ಆಟಗಾರ ಲೀ ಝೀ ಜಿಯಾ ಅವರ ವಿರುದ್ಧ 19-21, 20-22 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದರು. ಎರಡೂ ಗೇಮ್ ಗಳಲ್ಲಿ ಭಾರಿ ಫೈಪೋಟಿ ನೀಡಿದ ಭಾರತದ ಆಟಗಾರ ಕೊನೆಯಲ್ಲಿ ಸಣ್ಣ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.