Skip to main content
ಚಿತ್ರನಟಿ ಡಾ.ಪೂಜಾ ರಮೇಶ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ನವೆಂಬರ್-1 ರಿಂದ ಅಭಿಯಾನ ಆರಂಭ - ಮಾರುತಿ ಬಡಿಗೇರ.

ಚಿತ್ರನಟಿ ಡಾ.ಪೂಜಾ ರಮೇಶ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ನವೆಂಬರ್-1 ರಿಂದ ಅಭಿಯಾನ ಆರಂಭ - ಮಾರುತಿ ಬಡಿಗೇರ.

ಚಿತ್ರನಟಿ ಡಾ.ಪೂಜಾ ರಮೇಶ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ನವೆಂಬರ್-1 ರಿಂದ ಅಭಿಯಾನ ಆರಂಭ - ಮಾರುತಿ ಬಡಿಗೇರ. ಹೆಬ್ರಿ, ಆಗುಂಬೆ ಸರ್ಕಾರಿ ಶಾಲೆಯಿಂದ ಆರಂಭ.

ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿಂದ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿಹೊಗುತ್ತಿವೆ. ಅವುಗಳನ್ನು ಜೀವಂತವಾಗಿಡಲು ಇದೇ ನವೆಂಬರ್-1 ರಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಸಂತ ಲಕ್ಷ್ಮೀ ಫೌಂಡೆಷನ್ ಅಧ್ಯಕ್ಷರಾದ ಚಿತ್ರನಟಿ ಡಾ. ಪೂಜಾ ರಮೇಶ ಅವರ ಸಾರಥ್ಯದಲ್ಲಿ ಒಂದು ತಿಂಗಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಮಾರುತಿ ಬಡಿಗೇರ ಪತ್ರಿಕ ಗೋಷ್ಠಿಯಲ್ಲಿ ಹೇಳಿದ್ದಾರೆ.

ಚಿತ್ರನಟಿ ಡಾ.ಪೂಜಾ ರಮೇಶ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ನವೆಂಬರ್-1 ರಿಂದ ಅಭಿಯಾನ ಆರಂಭ - ಮಾರುತಿ ಬಡಿಗೇರ.

ನಮ್ಮ ರಾಜ್ಯದ ಕರಾವಳಿ ತೀರ, ಮಲೆನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಸಂಖ್ಯೆ ಕೊರೆತೆ, ಶಾಲಾ ಕೊಠಡಿಗಳ ಕೊರೆತೆ, ಶಿಕ್ಷಕರ ಕೊರೆತೆ, ಶೌಚಾಲಯಗಳು ಇಲ್ಲ, ಶುದ್ದ ಕುಡಿಯುವ ನೀರು ಇಲ್ಲ, ಶಾಲೆಗೆ ಹೋಗಲು ರಸ್ತೆಗಳು ಇಲ್ಲ. ಈ ಎಲ್ಲಾ ಸಮಸ್ಯೆಗಳಿಂದ ರಾಜ್ಯದಲ್ಲಿ ಈಗಾಗಲೇ 1200 ಸರಕಾರಿ ಶಾಲೆಗಳು ಮುಚ್ಚಿಹೊಗಿವೆ. ಅದರಲ್ಲಿ ವಿಶೇಷವಾಗಿ ಮಲೆನಾಡಿನ ಉಡುಪಿ ಜಿಲ್ಲೆಯಲ್ಲಿ 63 ಶಾಲೆಗಳು ಮುಚ್ಚಿವೆ. ಈ ಭಾಗದಲ್ಲಿ ಮಕ್ಕಳ ಸಂಖ್ಯೆ ಕೊರೆತೆ ಇದೆ, ಯಾಕೆಂದರೆ ಖಾಸಗಿ ಶಾಲೆಗಳ ದಬ್ಬಾಳಿಕೆಯಿಂದಾಗಿ ಇಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿವೆ. ಹೆಬ್ರಿ ಪಟ್ಟಣದಲ್ಲಿ ಇರುವ ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 7 ಮಕ್ಕಳಿದ್ದು, ಮುಂದಿನ ವರ್ಷ ಈ ಶಾಲೆ ಮುಚ್ಚುವ ಹಂತದಲ್ಲಿ ಇದೆ. ಆದ್ದರಿಂದ ಈ ಶಾಲೆಯಿಂದಲೇ ರಾಜ್ಯ ಮಟ್ಟದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಅಭಿಯಾನವನ್ನು ಕನ್ನಡ ರಾಜ್ಯೋತ್ಸವ ದಿನದಂದು ಡಾ. ಪೂಜಾ ರಮೇಶ ರವರಿಂದ ಚಾಲನೆಗೊಳ್ಳಲಿದೆ. ಜೊತೆಗೆ ಅಂದು ಇಂದಿರಾನಗರದಲ್ಲಿ ಇರುವ ನಿವಾಸಿಗಳಿಗೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕೆಂದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು.

ಶಾಂತಿನಿಕೇತನ ಯುವ ವೃಂದ ಹೆಬ್ರಿ ಇವರು ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಳ್ಳುತ್ತೇವೆ ಎಂದು ಮುಂದೆ ಬಂದಿರುವುದು ಶ್ಲಾಘನೀಯ. ನಮ್ಮ ರಾಜ್ಯದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು 20945 ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು 21865 ಒಟ್ಟು 42810 ಶಾಲೆಗಳು ಇರುತ್ತವೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಗುಂಬೆ ಹತ್ತಿರ ಇರುವ ಕೌರಿಹಕ್ಲು ಗ್ರಾಮದ ಸರಕಾರಿ ಶಾಲೆಯು ಈಗಾಗಲೇ ಮುಚ್ಚಿಗೆ. ಇಲ್ಲಿಗೂ ನಮ್ಮ ತಂಡ ಬೇಟಿ ಕೊಡಲಿದೆ. ಇದು ಅಲ್ಲದೆ ರಾಜ್ಯ ಬಂಡಿಪುರ, ನಾಗರಹೊಳೆ, ಅಭಯಾರಣ್ಯದಲ್ಲಿ ಇರುವ ಮಾವುತರ ಮಕ್ಕಳಿಗೆ ಶಾಲಾ ಕಿಟ್‍ಗಳನ್ನು ನೀಡಿ ಶಾಲೆಗೆ ಬರುವಂತೆ ಜಾಗೃತಿ ಮೂಡಿಸಲಾಗುವುದು. ಗಡಿಭಾಗದ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬೀದರ್, ಚಾಮರಾಜನಗರ, ರಾಯಚೂರು ಈ ಭಾಗದಲ್ಲಿ ಇರುವ ಸರ್ಕಾರಿ ಶಾಲೆಗಳ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಗಮನ ತರುವುದು ಪಾಲಕರಲ್ಲಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಜಾಗೃತಿ ಮೂಡಿಸುವ ಅಭಿಯಾನ ಅಗಿರುತ್ತದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.