Skip to main content
ದೆವ್ವಗಳಿಂದ ನಿರ್ಮಾಣವಾದ ಭಾರತದ  ದೇವಾಲಯ.

ದೆವ್ವಗಳಿಂದ ನಿರ್ಮಾಣವಾದ ಭಾರತದ ಏಕೈಕ ದೇವಾಲಯ ಇದು.

ದೆವ್ವಗಳಿಂದ ನಿರ್ಮಾಣ ವಾದ ದೇವಾಲಯ. 

ದೇವಾಲಯ

ಈ ಪ್ರಪಂಚದಲ್ಲಿ ದೇವಾಯಲಗಳು ನಿರ್ಮಾಣ ಆಗಿರೋದು ಭಕ್ತರಿಂದ ಅಥವಾ ಧಾನಿಗಳಿಂದ ಇಲ್ಲಾ ರಾಜ ಮಹಾರಾಜರಿಂದ ನಿರ್ಮಾಣ ಆಗಿರುತ್ತೆ ಅನ್ನೊದು ಎಲ್ಲರಿಗೂ ಗೊತ್ತಿರುತ್ತೆ..ಆದ್ರೆ ಇಲ್ಲೊಂದು ಊರಿನಲ್ಲಿ ದೆವ್ವಗಳೇ ದೇವಾಲಯವನ್ನ ನಿರ್ಮಾಣ ಮಾಡಲಾಗಿದೆ ಅಂತೆ..ಅದೆಲ್ಲಿ ಅಂತ ಹೇಳ್ತೀವಿ ಮುಂದೆ ಓದಿ.

ಹೌದು ಭಾರತ ದೇಶದಲ್ಲಿ ಲಕ್ಷಾಂತರ ದೇವಾಲಯಗಳು ನಮ್ಗೆ ನೋಡಲು ಕಾಣ ಸಿಗುತ್ತೆ ಆ ದೇವಾಲಯಗಳನ್ನ ಸಮಾಜದ ದೊಡ್ಡ ದೊಡ್ಡ ‌ಶ್ರೀಮಂತರು, ಋಷಿಮುನಿಗಳು ರಾಜ ಮಹಾರಾಜರು ನಿರ್ಮಾಣ ಮಾಡಿರುತ್ತಾರೆ ಅನ್ನೊದನ್ನ ಕೇಳಿರುತ್ತೇವೆ..ಆದ್ರೆ ಇಂಥವರಿಂದ ನಿರ್ಮಾಣವಾಗದೆ ಇರೋ ದೇವಾಲಹೊಂದು ಭಾರತದಲ್ಲಿ ಇದೆ, ಅದ್ರಲ್ಲೂ ನಮ್ಮ ಕರ್ನಾಟಕದಲ್ಲೇ ಇದೆ ಅನ್ನೊದು ಇನ್ನೊಂದು ವಿಶೇಷ, ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ ದೇವಾಲಯದ ವಿಶೇಷತೆ, ದೇವಾಲಯ ಹಿಂದಿನ ಸ್ವಾರಸ್ಯಕರ ಕತೆ, ಹಾಗೂ ರೋಚಕತೆಯನ್ನ ಹೊಂದಿದೆ.ಅಂದ ಹಾಗೆ ಈ ದೇವಾಲಯ ಇರೋದು ದೇವನಹಳ್ಳಿ ತಾಲೂಕಿನ ಬೊಮ್ಮಾವರ ಎಂಬ ಊರಿನಲ್ಲಿ ಈ ವಿಶಿಷ್ಟ ದೇವಾಲಯವಿದೆ. ಆ ದೇವಾಲಯದ ಹೆಸರೇ ಶ್ರೀ ಸುಂದರೇಶ್ವರ ದೇವಾಲಯ ಮತ್ತೆ ನಿಮಗೆ ಗೊತ್ತಿರಲಿ ಈ ದೇವಾಲಯ ದೇವತೆಗಳಿಂದ ಆಗಲಿ, ಮಾನವರಿಂದ ಆಗಲಿ ನಿರ್ಮಾಣ ಆಗಿಲ್ಲ ಬದಲಾಗಿ ದೆವ್ವಗಳಿಂದ ಅನ್ನೋದು ನಂಬಿಕೆ ಹಾಗೂ ಸ್ಥಳ ಪುರಾಣ ಇದು ನಿಮಗೆ‌ ಆಶ್ಚರ್ಯ ಆದ್ರು ಕೂಡ ಇಲ್ಲಿನ‌ ಸ್ಥಳ ಪುರಾಣದ ಕೆಲವು ಕುರುಹುಗಳು ನಿಜ ಅನ್ನಿಸುತ್ತೆ, ಅಂದಹಾಗೆ ಇಲ್ಲಿನ ದೇವಾಲಯವನ್ನ ದೆವ್ವಗಳೇ ಯಾಕೆ ನಿರ್ಮಿಸಿದ್ವು ಅಂತ ಇತಿಹಾಸವನ್ನ ಹುಡುಕುತ್ತಾ ಹೋದ್ರೆ ನಮಗೆ ಕಾಣ ಸಿಗೋದು ಸುಮಾರು ೬೦೦ ವರ್ಷಗಳ ಹಿಂದೆ ಈ ಊರು ದೆವ್ವಗಳ ಊರಾಗಿತ್ತು ಎಂಬುದು ಇತಿಹಾಸ ಹೇಳುತ್ತೆ

ನಿರ್ಮಾಣವಾದ ದೇವಾಲಯ.

ಆಗ ಈ ಊರಿನ ಜನರಿಗೆ ದೆವ್ವಗಳು ತುಂಬಾನೆ ಕಾಟ ಕೊಡ್ತಾ ಇರ್ತಾವಂತೆ ಆ ಬಚ್ಚಯ್ಯ ಎಂಬ ಮಾಂತ್ರಿಕ‌ ದೆವ್ವಗಳಿಂದ ಜನರನ್ನ ರಕ್ಷಣೆ ‌ಮಾಡೋದಕ್ಕೆ ಈ ದೇವಾಲಯವನ್ನ ನಿರ್ಮಾಣ ಮಾಡ್ತಾನೆ, ನಂತರ ಅಲ್ಲಿರು ದೆವ್ವಗಳು ಒಂದೇ ರಾತ್ರಿಯಲ್ಲಿ ಆ ದೇವಾಲಯವನ್ನ ದ್ವಂಸ ಮಾಡ್ತಾವೆ, ನಂತರ ಇದರಿಂದ ಕೆರಳಿದ ಆ ಮಾಂತ್ರಿಕಾ ಎಲ್ಲಾ ದೆವ್ವಗಳ‌ ಕೂದಲನ್ನ ಕತ್ತರಿಸಿ ತನ್ನ ಬಳಿ‌‌‌ ಇಟ್ಟುಕೊಳ್ಳುತ್ತಾನೆ, ಬಳಿಕ‌ ಆ ದೆವ್ವಗಳೆಲ್ಲಾ ನಮ್ಮ ಕೂದಲನ್ನ ನಮಗೆ ವಾಪಸ್ ಕೊಡಿ ಅಂತ‌ ಕೇಳಿದಾಗ ಆ ಮಾಂತ್ರಿಕ ನೀವು ಕೆಡವಿರುವ ದೇವಾಲಯವನ್ನ ಮತ್ತೆ ನಿರ್ಮಾಣ ಮಾಡಿ ಆ ಬಳಿಕ ನಿಮ್ಮ ಕೂದಲು ಹಾಗೂ ನಿಮ್ಮನ್ನ ಬಿಡುಗಡೆ ಮಾಡುತ್ತೇವೆ ಅಂತ ಹೇಳ್ತನೆ ಬಳಿಕ ಆ ದೆವ್ವಗಳೆಲ್ಲಾ ಸೇರಿ ನಿರ್ಮಾಣ ಮಾಡ್ತಾವೆ ಅಂದಹಾಗೆ ಈ ದೇವಾಲಯಕ್ಕೆ ಬೇರೆ ದೇವಾಲಯಕ್ಕೆ ಇದ್ದಹಾಗೆ ಗೋಪುರವಿಲ್ಲ, ಹಾಗೂ ದೇವರ ವಿಗ್ರಹವೂ ಇಲ್ಲ ಬದಲಾಗಿ ಇಲ್ಲಿ ಬರೀ ದೆವ್ವಗಳ ವಿಗ್ರಹಗಳೇ ಇಲ್ಲಿ ಇವೆ

ದೇವಾಲಯ.

.ಶತಮಾನಗಳಿಂದಲೂ ಆ ದೇವಾಲಯ ಇತ್ತಾದ್ರು ಕೂಡ ಅಲ್ಲಿ ಯಾವುದೇ ದೇವರ ವಿಗ್ರಹ ಗಳನ್ನ ಅಲ್ಲಿ ಪ್ರತಿಷ್ಠಾಪನೆ ಮಾಡಿರಲ್ಲಿಲ್ಲ. ನಂತರ ಈ ಊರಿನಲ್ಲಿ ಭೀಕರ ಬರಗಾಲ ಬಂದಾಗ ಈ ದೇವಾಲಯ ಬಳಿ ಬಾವಿ ತೋಡಿದಾಗ ಅಲ್ಲಿ ಒಂದು ೮ ಅಡಿ ಉದ್ದದ ಶಿವಲಿಂಗ ಸಿಕ್ಕಿತಂತೆ ಆ ಲಿಂಗವನ್ನ ದೇವಾಲಯ ದಲ್ಲಿ ಇಟ್ಟು ಈಗ ಪೂಜೆ ಮಾಡಲಾಗುತ್ತಿದೆ

ಹಾಗೂ ಯಾರಿಗಾದ್ರು ದೆವ್ವ ಇದೆ ಅಂದ್ರೆ ಈ ದೇವಾಲಯದಲ್ಲಿ ಬಂದು ಪೂಜೆ ಮಾಡಿಸಿದ್ರೆ ವಾಸಿ ಆಗತಂತೆ..ಒಂದತು ಸತ್ಯ ಇಲ್ಲಿ ದೇವಾಲಯ ಇರೊದಂತು ಸತ್ಯ, ಇತಿಹಾಸದಲ್ಲಿ ಹೇಳಿರೋದು ಕೂಡ ಸತ್ಯ ಇದನ್ನ ನಂಬೋದು ಬಿಡೋದು ನಿಮಗೆ ಬಿಟ್ಟ ವಿಚಾರ. *ದೆವ್ವಗಳಿಂದ ನಿರ್ಮಾಣವಾದ ಭಾರತದ ಏಕೈಕ ದೇವಾಲಯ ಇದು.!*

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.