Skip to main content
ಓಟಿಟಿಯಲ್ಲಿ ಬರುತ್ತಿದೆ "ಹೆಲ್ಪ್".

ಓಟಿಟಿಯಲ್ಲಿ ಬರುತ್ತಿದೆ "ಹೆಲ್ಪ್".

ಓಟಿಟಿಯಲ್ಲಿ ಬರುತ್ತಿದೆ "ಹೆಲ್ಪ್".

ಓಟಿಟಿಯಲ್ಲಿ ಬರುತ್ತಿದೆ "ಹೆಲ್ಪ್".

ಬಾಲ್ಯ ಸ್ನೇಹಿತನಿಗೆ ಸಿಂಪಲ್ ಸುನಿ ಹಾರೈಕೆ ಸಾಮಾನ್ಯನ ಜೀವನದಲ್ಲಾಗುವ ಏರಿಳಿತಗಳನ್ನಿಟ್ಟುಕೊಂಡು 'ಹೆಲ್ಪ್' ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಜೆರಿನ್ ಚಂದನ್. ಏಪ್ರಿಲ್ 27ರಂದು ಈ ಕಿರುಚಿತ್ರ ಬಿಡುಗಡೆಗೆ ಸಿದ್ದವಾಗಿದೆ.ಇದೇ ಪ್ರಥಮ ಬಾರಿಗೆ ಕನ್ನಡ ಕಿರುಚಿತ್ರವೊಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. 

ಕಿರುಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕ್ಲಾಸ್ ರೂಮ್ ಕಥೆಗಳು ಅರ್ಥಗರ್ಭಿತವಾಗಿತ್ತು. ಕಥೆ ಸಂದೇಶಗಳನ್ನು ತಲುಪಿಸಲು ಇದು ಸೂಕ್ತ ವೇದಿಕೆ ಎನಿಸಿತು. ಹೀಗಾಗಿ, ಈ ಮಾಧ್ಯಮವನ್ನು ಬಳಸಿಕೊಂಡು ಜೀವನದ ಏರಿಳಿತಗಳನ್ನು ತೋರಿಸಲು ಈ ಕಿರುಚಿತ್ರದ ಮೂಲಕ ಪ್ರಯತ್ನಿಸಿದ್ದೇನೆ ಎಂದ ನಿರ್ದೇಶಕ ಜೆರಿನ್ ಚಂದನ್, ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಸಿನಿಮಾವೊಂದನ್ನು ನಿರ್ದೇಶಿಸುವುದಾಗಿ ಹೇಳಿದರು.

ಓಟಿಟಿಯಲ್ಲಿ ಬರುತ್ತಿದೆ "ಹೆಲ್ಪ್".

ಉತ್ತಮ ಸಂದೇಶವಿರುವ ಚಿತ್ರವನ್ನು ಮಾಡಿದ್ದೇವೆ. "ಹೆಲ್ಪ್" ಯಾವುದೇ ಕಾರಣಕ್ಕೂ ಕಿರುಚಿತ್ರ ಅನಿಸುವುದಿಲ್ಲ. ಸಿನಿಮಾ ರೀತಿಯಲ್ಲೇ ಮಾಡಿದ್ದೇವೆ. ಮೂವತ್ತು ನಿಮಿಷ ಕಳೆಯುವುದೇ ಗೊತ್ತಾಗದ ಹಾಗೆ ನಿರ್ದೇಶಕರು ಈ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಏಪ್ರಿಲ್ 27 ರಂದು ಓಟಿಟಿಯಲ್ಲಿ ಈ ಕಿರುಚಿತ್ರ ಬಿಡುಗಡೆಯಾಗುತ್ತಿದೆ. 20 ರ ನಂತರ ಈ ಕಿರುಚಿತ್ರದ ಪ್ರದರ್ಶನ ಏರ್ಪಡಿಸುತ್ತೇವೆ. ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ. ನಾನು ಸಹ ಇದರಲ್ಲಿ ಒಂದು ಪಾತ್ರ ಮಾಡಿದ್ದೇನೆ ಎಂದರು ನಿರ್ಮಾಪಕ ಆದಿತ್ಯ.

ನಿರ್ದೇಶಕ ಜೆರಿನ್ ಅವರ ಜೊತೆ ಶಾಲೆಯಲ್ಲಿ ಕಳೆದ ಸವಿನೆನಪುಗಳನ್ನು ನೆನಪಿಸಿಕೊಂಡರು ನಿರ್ದೇಶಕ ಸಿಂಪಲ್ ಸುನಿ. ನನ್ನ ಮೊದಲ ಚಿತ್ರ "ಸಿಂಪಲಾಗೊಂದು ಲವ್ ಸ್ಟೋರಿ " ಚಿತ್ರದಲ್ಲಿ ಜೆರಿನ್ ಎಂಬ ಪಾತ್ರ‌ ಬರುತ್ತದೆ. ಆ ಹೆಸರಿಡಲು ನನ್ನ ಈ ಗೆಳೆಯನೆ ಸ್ಪೂರ್ತಿ. ಈಗ "ಹೆಲ್ಪ್" ಎಂಬ ಕಿರುಚಿತ್ರ ಮಾಡಿದ್ದಾನೆ. "ಹೆಲ್ಪ್" ಎಂದರೆ ಈ ಕ್ಷಣಕ್ಕೆ ನೆನಪಾಗುವುದು ಪುನೀತ್ ಸರ್. ಅವರು ಮಾಡಿರುವ ಸಹಾಯ ಎಲ್ಲರಿಗೂ ಸ್ಪೂರ್ತಿ.

ಜೆರಿನ್ ಅವರಿಂದ ಇನ್ನೂ ಉತ್ತಮ ಚಿತ್ರಗಳು ಮೂಡಿಬರಲಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಸಿಂಪಲ್ ಸುನಿ ಹಾರೈಸಿದರು. ಕಿರುಚಿತ್ರದಲ್ಲಿ ನಟಿಸಿರುವ ವಿನಯ್ ನಾಗೇಶ್ ರಾವ್ ಹಾಗೂ ಛಾಯಾಗ್ರಾಹಕ ರಾಜಕುಮಾರ್ "ಹೆಲ್ಪ್" ಬಗ್ಗೆ ಮಾತನಾಡಿದರು. ಅಭಿಜಿತ್, ಬಿ.ಸುರೇಶ್, ವೀಣಾ ಸುಂದರ್ , ಡಿ.ಎನ್. ಆದಿತ್ಯ, ನಿಶಾ ಸೇರಿದಂತೆ ಅನೇಕರು "ಹೆಲ್ಪ್" ನಲ್ಲಿ ನಟಿಸಿದ್ದಾರೆ.ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.