Skip to main content
​    ​​    ​ಲಾಕ್ ಡೌನ್ ನಂತರ 'ಮುಂದುವರೆದ ಅಧ್ಯಾಯ'

ಲಾಕ್ ಡೌನ್ ನಂತರ 'ಮುಂದುವರೆದ ಅಧ್ಯಾಯ'

ಲಾಕ್ ಡೌನ್ ನಂತರ 'ಮುಂದುವರೆದ ಅಧ್ಯಾಯ'

Lokdown

ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ನಿರ್ಮಾಣವಾಗಿರುವ, ಬಾಲು ಚಂದ್ರಶೇಖರ್ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ 'ಮುಂದುವರೆದ ಅಧ್ಯಾಯ' ಚಿತ್ರ ಲಾಕ್ ಡೌನ್ ಮುಗಿದ್ದು ಚಿತ್ರ ಬಿಡುಗಡೆಗೆ ಅನುಮತಿ ಸಿಕ್ಕ ಕೂಡಲೆ ತೆರೆಗೆ ಬರಲಿದೆ. ಲಾಕ್ ಡೌನ್ ಪೂರ್ವದಲ್ಲೇ ಸೆನ್ಸಾರ್ ಗೆ ಅಪ್ಲೈ ಮಾಡಿದ್ದು, ಸೆನ್ಸಾರ್ ಮಂಡಳಿ ಕಾರ್ಯ ನಿರ್ವಹಿಸಲು ಆರಂಭಿಸಿದ ಕೂಡಲೆ ನಮ್ಮ ಚಿತ್ರವನ್ನು ವೀಕ್ಷಿಸುವ ಭರವಸೆಯಿದೆ ಎನ್ನುತ್ತಾರೆ ನಿರ್ದೇಶಕರು

Lokdown effect

.. ಈಗಾಗಲೇ ಸಿದ್ದವಾಗಿರುವ ಚಿತ್ರವನ್ನು ಇತ್ತೀಚೆಗೆ ಮಂಜರಿ ಸ್ಟುಡಿಯೋದಲ್ಲಿ ನಾಯಕ ಆದಿತ್ಯ, ನಿರ್ದೇಶಕ ಬಾಲು ಚಂದ್ರಶೇಖರ್, ಹಿನ್ನೆಲೆ ಸಂಗೀತ ನೀಡಿರುವ ಅನೂಪ್ ಸೀಳಿನ್, ಸಂಗೀತ ನೀಡಿರುವ ಜಾನಿ - ನಿತಿನ್, ಛಾಯಾಗ್ರಾಹಕ ದಿಲೀಪ್ ಚಕ್ರವರ್ತಿ, ಸಂಕಲನಕಾರ ಶ್ರೀಕಾಂತ್ ಮತ್ತು ಎಫೆಕ್ಟ್ ರಜನ್ ಅವರು ವೀಕ್ಷಿಸಿದ್ದಾರೆ. ಚಿತ್ರ ನೋಡಿ ಅಪಾರ ಸಂತಸಪಟ್ಟಿರುವ ಚಿತ್ರತಂಡ, ಲಾಕ್ ಡೌನ್ ಮುಗಿದ್ದು ಯಾವಾಗ ನಮ್ಮ ಚಿತ್ರ ತೆರೆಗೆ ಬರುತ್ತದ್ದೊ ಎಂಬ ಕಾತುರದಲಿದ್ದಾರೆ... ಈಗಾಗಲೇ ಬಿಡುಗಡಯಾಗಿರುವ ಚಿತ್ರದ ಟೀಸರ್ ಹಾಗೂ ಟ್ರೇಲರ್ ನೋಡುಗರ ಮನ ಗೆದ್ದಿದೆ.. ಆದಿತ್ಯ, ಆಶಿಕ ಸೋಮಶೇಖರ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಸಂದೀಪ್ ಕುಮಾರ್, ಚಂದನ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.