Skip to main content

"ಡೋಸ್" ಕೊಡಲು ಸಿದ್ದರಾದ ಉತ್ಸಾಹಿ ಯುವಕರು.

"ಡೋಸ್" ಕೊಡಲು ಸಿದ್ದರಾದ ಉತ್ಸಾಹಿ ಯುವಕರು.

Kannada

"ಡೋಸ್" ಚಿತ್ರ ಅತ್ಯಂತ ಉತ್ಸಾಹಿ ಯುವ ತಂಡವೊಂದರ ವಿಶಿಷ್ಟ ಆಲೋಚನೆ. ತಮ್ಮದೇ ಆದ ರೀತಿಯಲ್ಲಿ ಹೊಸದೊಂದು ಕಥಾ ಪ್ರಪಂಚವನ್ನು ಸಿನಿರಸಿಕರಿಗೆ ಕಟ್ಟಿಕೊಡುವ ಪ್ರಯತ್ನವನ್ನು "ಡೋಸ್" ಸಿನಿಮಾ ತಂಡ ಮಾಡಲು ಹೊರಟಿದೆ.

" ಸೀತಮ್ಮನ ಮಗ" ನಿಗಾಗಿ ಹಾಡಿದರು "ಸರಿಗಮಪ" ದ ಮೆಹಬೂಬ್ ಸಾಬ್.

" ಸೀತಮ್ಮನ ಮಗ" ನಿಗಾಗಿ ಹಾಡಿದರು "ಸರಿಗಮಪ" ದ ಮೆಹಬೂಬ್ ಸಾಬ್.

Kannada

"ಸರಿಗಮಪ" ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ಮೆಹಬೂಬ್ ಸಾಬ್ ಅವರು "ಸೀತಮಮ್ಮನ ಮಗ" ಚಿತ್ರಕ್ಕಾಗಿ ಯತಿರಾಜ್ ಬರೆದಿರುವ " ಸೀತೆಯೆಂಬ ಹೆಸರಲ್ಲೇನೋ ದೋಷವುಂಟು..ಯುಗಗಳೇ ಕಳೆದರೂನು ಲೋಪವುಂಟು" ಎಂಬ ಅಮ್ಮನ ಕುರಿತಾದ ಭಾವುಕ ಗೀತೆಯನ್ನು ಹಾಡಿದ್ದಾರೆ. ವಿನುಮನಸು ಸಂಗೀತ ನೀಡಿರುವ ಈ ಹಾಡಿನ ಧ್ವನಿಮುದ್ರಣ ರೇಣು ಸ್ಟುಡಿಯೋದಲ್ಲಿ ನಡೆಯಿತು.

ಏಷ್ಯಾ ಸ್ಟಾರ್ ಗಾಲಾದಲ್ಲಿ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್

ಏಷ್ಯಾ ಸ್ಟಾರ್ ಗಾಲಾದಲ್ಲಿ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್.

Kannada

ಪ್ಯಾಶನ್ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿರುವ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಕನ್ನಡದ ಪ್ರತಿಭೆ ಫಾರೆವರ್ ನವೀನ್ ಕುಮಾರ್. ತಮ್ಮ ವಿಭಿನ್ನ, ವಿಶಿಷ್ಟ ವಿನ್ಯಾಸಗಳಿಂದ ಮನೆಮಾತಾಗಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದದುಕೊಂಡಿರುವ, ಫಾರೆವರ್ ನವೀನ್ ಕುಮಾರ್, ಸದಾ ಹೊಸತನದ ಮೂಲಕ ಫ್ಯಾಶನ್ ಇವೆಂಟ್ ಎದುರುಗೊಳ್ಳುತ್ತಿದ್ದಾರೆ.

ಸೆನ್ಸಾರ್ ಮುಂದೆ "ರಾಜಮಾರ್ತಾಂಡ".

ಸೆನ್ಸಾರ್ ಮುಂದೆ "ರಾಜಮಾರ್ತಾಂಡ".

Kannada

ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಸದ್ಯದಲ್ಲೇ ತೆರೆಗೆ.

ಚಿಕ್ಕವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು ನಮ್ಮನೆಲ್ಲಾ ಅಗಲಿದ ಚಿರಂಜೀವಿ ಸರ್ಜಾ ಅಭಿನಯದ " ರಾಜಮಾರ್ತಾಂಡ" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಚಿರಂಜೀವಿ ಸರ್ಜಾ ಅವರ ಸಾವಿನ ಮುಂಚೆಯೇ ಚಿತ್ರೀಕರಣ ಪೂರ್ತಿಯಾಗಿತ್ತು. ಹಾಗಾಗಿ ಅವರು ಚಿತ್ರೀಕರಣ ಮುಗಿಸಿದ್ದ ಕೊನೆಯ ಚಿತ್ರ ಅನ್ನಬಹುದು.‌

Subscribe to FILIMI TALK