Skip to main content
ಬಡ ಕುಟುಂಬದ ಪುಟ್ಟ ಮಗುವಿಗೆ ಆಸರೆಯಾದ ಎಸ್ .ಪಿ .ಶ್ರೀ ವೇದಮೂರ್ತಿ .

ಬಡ ಕುಟುಂಬದ ಪುಟ್ಟ ಮಗುವಿಗೆ ಆಸರೆಯಾದ ಎಸ್ .ಪಿ .ಶ್ರೀ ವೇದಮೂರ್ತಿ .

ಕಣ್ಣು ಮತ್ತು ಕಿವಿ ಕೇಳಿಸದ ಬಡ ಕುಟುಂಬದ ಪುಟ್ಟ ಮಗುವಿಗೆ ಆಸರೆ ಯಾದ ರಾಯಚೂರಿನ ಎಸ್ .ಪಿ ಶ್ರೀ ವೇದಮೂರ್ತಿ .

Raichur

ರಾಯಚೂರು:ನಮಗೆಲ್ಲ ತಿಳಿದಿರೋ ಹಾಗೆ ರಾಯಚೂರಿನ ಖಡಕ್,ಸ್ನೇಹ ಜೀವಿ ಪರಿಸರ ಕಾಳಜಿ ಹೊಂದಿರುವ ಜಿಲ್ಲೆಯ ಹೆಸರಾಂತ ಪೊಲೀಸ್ ಅಧಿಕಾರಿಯಾದ ಎಸ್.ಪಿ .ಶ್ರೀ ವೇದಮೂರ್ತಿ ಯವರು ಮತ್ತೊಮ್ಮೆ ಸಾಮಾಜಿಕ ಕಾರ್ಯಮಾಡುವ ಮೂಲಕ ಸುದ್ದಿಯಾಗಿದ್ದಾರೆ. ವಿಷಯ ಏನಪ್ಪಾ ಅಂದ್ರೆ ರಾಯಚೂರು ಜಿಲ್ಲೆಯ ಯರಮರಸ್ನ ಗ್ರಾಮದ ಬಡ ಕುಟುಂಬದಲ್ಲಿ‌ ಜನಿಸಿದ ನಾಲ್ಕು ವರ್ಷದ ಪುಟ್ಟ ಮಗುವಿಗೆ ಕಣ್ಣು ಮತ್ತು ಕಿವಿ ಕೆಳಿಸದೆ ಇದ್ದುದರಿಂದ ಈ ಮಗುವನ್ನು ಆಸ್ಪತ್ರೆಗೆ ತೋರಿಸುವಷ್ಟು ಹೆತ್ತವರ ಕುಟುಂಬ ತೀರಾ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದುದನ್ನು ಅರಿತ ಶ್ರೀ ವೇದಮೂರ್ತಿಯವರು,ಈ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಆಸರೆಯಾಗಿದ್ದಾರೆ .

ಈ ಕುಟುಂಬದ ಸದ್ಯಸರು ಶ್ರೀ ವೇದಮೂರ್ತಿಯವರನ್ನು ಸಹಾಯ ಅರಸಿ ಕಾರ್ಯಲಯಕ್ಕೆ ಬಂದು ತಮ್ಮ ಅಳಲನ್ನು ತೊಡಿಕೊಂಡಾಗ ಅವರು ಮನ ಕರಗಿ ಮಗುವಿನ‌‌ ಮುಂದಿನ‌ ಚಿಕಿತ್ಸೆಗಾಗಿ ಧನ ಸಹಾಯ ಮಾಡಿ ರೀಮ್ಸ ಅಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮತ್ತು‌ ಮಕ್ಕಳ‌ ಕಲ್ಯಾಣ ಇಲಾಖೆಗೆ ಸಹಕರಿಸಲು ಅವರು ಮನವಿ‌ ಮಾಡಿದ್ದರು. ಅದೆ ರೀತಿ ಆ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಅವರು ತಿಳಿಸಿದರು.ಮಾನವಿಯ ಮೌಲ್ಯವುಳ್ಳ ರಾಯಚೂರಿನ ಎಸ್ ಪಿ ವೇದಮೂರ್ತಿಯವರ ಔದಾರ್ಯ ಅವರೊಬ್ಬ ಮಾದರಿಯ ಮೌಲ್ಯವುಳ್ಳ ನಿಷ್ಟಾವಂತ ಅಧಿಕಾರಿಗಳು ನಮ್ಮ ರಾಯಚೂರ ನಗರಕ್ಕೆ ಬಂದಿರವದು ರಾಯಚೂರ ನಾಗರೀಕರ ಸೌಭಾಗ್ಯ ಎಂದು ಜಿಲ್ಲೆಯ ಜನರು ಅವರನ್ನು ಅರಸಿ ಹಾರೈಸಿಸುತ್ತಿದ್ದಾರೆ .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.