ರೇಖಾ ಬಡಿಗೇರರಿಗೆ ಅಪ್ಪಟ ಕನ್ನಡತಿ ಪ್ರಶಸ್ತಿ.
ರೇಖಾ ಬಡಿಗೇರರಿಗೆ ಅಪ್ಪಟ ಕನ್ನಡತಿ ಪ್ರಶಸ್ತಿ.

ರಾಯಚೂರ ನ.3. ಕಲಾ ಸಂಕಲ ಸಂಸ್ಥೆ ಹಾಗೂ ಕನ್ನಡ ಉಪನ್ಯಾಸಕಿ. ರಾಯಚೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಶ್ರೀಮತಿ ರೇಖಾ ಬಡಿಗೇರ್ ಅವರಿಗೆ ಮುಂಬೈ ರಾಧಾಕೃಷ್ಣ ನೃತ್ಯ ಅಕಾಡೆಮಿ ದಿಂದ ರಾಷ್ಟ್ರಮಟ್ಟದ ಅಪ್ಪಟ ಕನ್ನಡತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಯಚೂರು ನಗರದಲ್ಲಿ ಕಳೆದ 12 ವರ್ಷಗಳಿಂದ ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾಗಿ ಶ್ರೀಮತಿ ರೇಖಾ ಬಡಿಗೇರ್ ಅವರು ಸಾಕಷ್ಟು ಕನ್ನಡಪರ ಕೆಲಸಗಳನ್ನು ಮಾಡಿ ಐದು ಕೃತಿಗಳನ್ನು ರಚಿಸಿದ್ದಾರೆ.
ರಾಯಚೂರು ನಗರದಲ್ಲಿ ರಾಜ್ಯಮಟ್ಟದ ಚಿತ್ರಸಂತೆ ಸ್ಲಂ ನಕ್ಷತ್ರಗಳು. ದೇಶಿ ಸಂಭ್ರಮ. ಕಲೆ ಸಾಹಿತ್ಯ ಸಂಸ್ಕೃತಿಯ ನೆಲಗಟ್ಟಿನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಾ ಹೆಸರು ಮಾಡಿರುವ ರೇಖಾ ಬಡಿಗೇರ್ ಅವರಿಗೆ ಮುಂಬೈಯಲ್ಲಿ ಇದೆ 13 ರಂದು ಮುಂಬೈ ಉತ್ಸವದಲ್ಲಿ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು. ಎಂದು ಸ್ನೇಹ ಯುವ ಸಂಸ್ಕೃತಿಕ ಸಂಘದ ಅಧ್ಯಕ್ಷರಾದ ಎಮ್ ರಂಜಿತ್ ಕುಮಾರ್ ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರದ ರಂಗಣ್ಣ ಪಾಟೀಲ್ ಅಳ್ಳುoಡಿ ಅವರು ಇಂದು ಕನ್ನಡ ಭವನದಲ್ಲಿಅಪ್ಪಟ ಕನ್ನಡತಿ ಪ್ರಶಸ್ತಿ ಗೆ ಆಯ್ಕೆಯಾದ ರೇಖಾ ಬಡಿಗೇರ್ ಅವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಾ ಕ ಸಾ ಪ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಇದ್ದರು.
Recent comments