Skip to main content
NRBC 5A ಹೋರಾಟಕ್ಕೆ ಬೆಂಬವಾಗಿ ಜನತೆ ಸ್ವಯಂ ಪ್ರೇರಿತರಾಗಿ ಚುನಾವಣೆ ಬಹಿಷ್ಕಾರ.

NRBC 5A ಹೋರಾಟಕ್ಕೆ ಬೆಂಬವಾಗಿ ಜನತೆ ಸ್ವಯಂ ಪ್ರೇರಿತರಾಗಿ ಚುನಾವಣೆ ಬಹಿಷ್ಕಾರ.

NRBC 5A ಹೋರಾಟಕ್ಕೆ ಬೆಂಬವಾಗಿ ಜನತೆ ಸ್ವಯಂ ಪ್ರೇರಿತರಾಗಿ ಚುನಾವಣೆ ಬಹಿಷ್ಕಾರ.

Raichur

ಕವಿತಾಳ : ಪಾಮನಕಲ್ಲೂರಿನ ಬಸವೇಶ್ವರ ದೇವಸ್ಥಾನದ ಹತ್ತಿರ NRBC 5A ನಾಲಾ‌ ಯೋಜನೆ ಜಾರಿಗೆ ಆಗ್ರಹಿಸಿ ಕಳೆದ 27 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟವಾಧಿ ಹೋರಾಟಕ್ಕೆ ರಾಜ್ಯ ಸರ್ಕಾರದಿಂದ ಸೂಕ್ತ ಭರವಸೆ ಸಿಗದ ಕಾರಣ ಅಮೀನಗಡ, ವಟಗಲ್, ಪಾಮನಕಲ್ಲೂರು ಹಾಗೂ ಅಂಕುಶದೊಡ್ಡಿಯ ನಾಲ್ಕು ಗ್ರಾಮದ ಜನತೆ ಸ್ವಯಂ ಪ್ರೇರಿತರಾಗಿ ಚುನಾವಣೆ ಯನ್ನು ಬಹಿಷ್ಕಾರ ಮಾಡಿ ಬೇಡಿಕೆಯನ್ನು ಈಡೇರಿಸುವಂತೆ ಆಡಳಿತ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಹೋರಾಟದ ಸ್ಥಳಕ್ಕೆ ಇಂದು ಸಂಜೆಯ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ.ಎಸ್. ಬೋಸರಾಜು ಭೇಟಿ ನೀಡಿ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವಂತೆ ಒತ್ತಡ ಹಾಕಲಾಗುತ್ತದೆ ನಮ್ಮ ಸಂಪೂರ್ಣ ಬೆಂಬಲ ನಿಮ್ಮಗಿದೆ ಎಂದರು.

ನಂತರ ಮಾಜಿ ಶಾಸಕ ಹಂಪಯ್ಯ ನಾಯಕ, ಹೋರಾಟ ಸಮತಿಯ ಮುಖಂಡರಾದ ಬಸವರಾಜಪ್ಪಗೌಡ ಹರ್ವಾಪುರ, ನಾಗರೆಡ್ಡಪ್ಪ ದೇವರಮನಿ, ಶಿನಗಗೌಡ ವಟಗಲ್, SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಸ್ವಯಂ ಪ್ರೇರಿತರಾಗಿ ಚುನಾವಣೆ ಬಹಿಷ್ಕಾರ ಮಾಡಿದ ನಾಲ್ಕು ಗ್ರಾಮದ ಜನತೆಗೆ ಧನ್ಯವಾದಗಳು ನಮ್ಮ ಬೇಡಿಕೆ ಈಡೇರಿಸುವ ವರೆಗೂ ನಮ್ಮಗಳ ಹೋರಾಟ ನಿರಂತರವಾಗಿರುತ್ತದೆ. ಇದೆ ರೀತಿಯಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದರೆ‌ ನಾವು ಹೋರಾಟದ ಸ್ವರೂಪವನ್ನು ಬದಲಾಯಿಸಿಕೊಂಡು ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Raichur

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ದೊಟ್ಡಬಸ್ಸಪ್ಪ, ಸದಸ್ಯರಾದ ಕಿರಿಲಿಂಗಪ್ಪ ಕವಿತಾಳ, ಬಿ.ಎ ಕರೀಂ ಸಾಬ್, ಶಿವಣ್ಣ ವಕೀಲ, ಅಮರೇಗೌಡ ಅಮೀಗಡ, ದುರುಗೇಶ, ಬಸವರಾಜ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥರಾದ ಬಸವರಾಜ ಸಿರವಾರ, ಚನ್ನಪ್ಪ ಬೂದಿನಾಳ, ಮೌನೇಶ ದೊಡ್ಡಮನಿ, ಅಯ್ಯಣ್ಣ, ಮಂಜೂರು ಪಾಷ, ಸೇರಿ ಅಮೀನಗಡ, ಪಾಮನಕಲ್ಲೂರು, ವಟಗಲ್ ಮತ್ತು ಅಂಕುಶದೊಡ್ಡಿ ಗ್ರಾಮ ರೈತರು, ಮಹಿಳೆಯರು ಸೇರಿ ನೂರಾರು ಜನ ಇದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.