Skip to main content
ನಮ್ಮ ಫ್ಲೀಕ್ಸ್ ಓಟಿಟಿ ವೇದಿಕೆಯಲ್ಲಿ ಭೂಮಿಕಾ ಸಿನಿಮಾ ರಿಲೀಸ್

ನಮ್ಮ ಫ್ಲೀಕ್ಸ್ ಓಟಿಟಿ ವೇದಿಕೆಯಲ್ಲಿ ಭೂಮಿಕಾ ಸಿನಿಮಾ ರಿಲೀಸ್

ನಮ್ಮ ಫ್ಲೀಕ್ಸ್ ಓಟಿಟಿ ವೇದಿಕೆಯಲ್ಲಿ ಭೂಮಿಕಾ ಸಿನಿಮಾ ರಿಲೀಸ್.

Kannada new film

ಬೆಸ್ತರ ಹುಡುಗಿಯ ಕಥೆಯೇ ಚಿತ್ರದ ಜೀವಾಳ ಇದೇ 25ಕ್ಕೆ ಸಿನಿಮಾ ಬಿಡುಗಡೆ ಹೀರಾ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ತಯಾರಾದ ಭೂಮಿಕಾ ಸಿನಿಮಾ ಕನ್ನಡದ ಜತೆಗೆ ತುಳುವಿನಲ್ಲಿಯೂ ಸಿದ್ಧವಾಗಿ ಬಿಡುಗಡೆಗೆ ಬಂದಿದೆ. ಡಿ.25ರ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಮ್ಮ ಫ್ಲೀಕ್ಸ್ ಓಟಿಟಿ ಫ್ಲಾಟ್ಫಾರ್ಮ್ ನಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಳ್ಳಲು ತಂಡ ಮಾಧ್ಯಮದ ಮುಂದೆ ಬಂದಿತ್ತು.

ವಿಶೇಷ ಏನೆಂದರೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪಿಕೆಎಚ್ ದಾಸ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. 'ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಮಂಗಳೂರು ಸುತ್ತ 28ದಿನ ಶೂಟಿಂಗ್ ಮಾಡಿದ್ದೇವೆ. ಬೆಸ್ತರ ಹುಡುಗಿಯ ಜೀವನದಲ್ಲಿ ನಡೆಯುವ ಏರಿಳಿತದ ಕಥೆ. ಇದೇ 25ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು. ಇನ್ನು ಚಿತ್ರಕ್ಕೆ ನರೇಂದ್ರ ನಾಯ್ಕ್ ನಿರ್ಮಾಪಕರು, ಮೂಲತಃ ಸಾಗರದವರಾದ ನರೇಂದ್ರ ವೃತ್ತಿಯಲ್ಲಿ ಡಾಕ್ಟರ್. ' ನಾನು ಈ ಹಿಂದೆ ಹಲವು ಸಿನಿಮಾ ಮಾಡಿದ್ದೆ.

ವಜ್ರಮುಖಿ ಮಾಡುವಾಗ ದಾಸ್ ಅವರ ಪರಿಚಯವಾಯ್ತು. ಈ ಕಥೆ ಹೇಳಿದಾಗ ಇಷ್ಡವಾಯ್ತು. ಇದೀಗ ಸಿನಿಮಾ ರೆಡಿಯಾಗಿದೆ ಎಂದರು. ನಮ್ಮ ಫ್ಲಿಕ್ಸ್ ಓಟಿಟಿಯ ವಿಜಯ್ ಕುಮಾರ್ ಮಾತನಾಡಿ, ಕಂಟೆಂಟ್ ನೋಡಿಯೇ ತುಂಬ ಸೆಳೆಯಿತು. ವಿಭಿನ್ನ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮೊದಲ ಸಲ ನಮ್ಮ ಓಟಿಟಿಯಲ್ಲಿ ತುಳು ಸಿನಿಮಾವೊಂದನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಹಿಂದಿನ ಭ್ರಮೆ ಚಿತ್ರದ 10 ಸಾವಿರ ಟಿಕೆಟ್ ಮಾರಾಟವಾಗಿದ್ದವು. ತನಿಖೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ಇದೀಗ ಭೂಮಿಕ ಸರದಿ ಎಂದರು. ಚಿತ್ರಕ್ಕೆ ಸಂಭಾಷಣೆ ಬರೆದಿರುವ ಭವಾನಿ ಶಂಕರ್ ಮಾತನಾಡಿ, ಸಮಾಜ ಮತ್ತು ಬೆಸ್ತರ ಹೆಣ್ಣುಮಕ್ಕಳ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ ಮಂಗಳೂರು ಶೈಲಿಯಲ್ಲಿ ಇಡೀ ಸಿನಿಮಾ ಮೂಡಿಬಂದಿದೆ ಎಂದರು.

ತಾರಾಬಳಗದಲ್ಲಿ ನವೀನ್ ಡಿ ಪಡೀಲ್, ಆಲಿಷಾ ಅಂಡ್ರದೆ, ರವಿ ಕಿರಣ್ ಇತರರು ನಟಿಸಿದ್ದಾರೆ. ರಾಜ್ ಭಾಸ್ಕರ್ ಸಂಗೀತ ನೀಡಿದರೆ, ಕೆ.ಎಂ ಇಂದ್ರ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಹೀರಾ ಕ್ರಿಯೆಷನ್ಸ್ ಬ್ಯಾನರ್ ನಲ್ಲಿ ಗೀತಾ ನರೇಂದ್ರ ನಾಯಕ್ ಮತ್ತು ನರೇಂದ್ರ ನಾಯಕ್ ಈ ಚಿತ್ರ ನಿರ್ಮಿಸಿದ್ದಾರೆ. ಛಾಯಾಗ್ರಹಣದ ಜತೆಗೆ ನಿರ್ದೇಶನ ಮಾಡಿದ್ದಾರೆ ಪಿಕೆಎಚ್ ದಾಸ್.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.