ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ "ಸುರಾರೈ ಪೊಟ್ಟರು " ಕನ್ನಡದಲ್ಲೂ ಬಿಡುಗಡೆ
ನಾಲ್ಕು ಕಾಲ ಘಟ್ಟದ ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸೂರರೈ ಪೊಟ್ಟರು’ ಕನ್ನಡದಲ್ಲೂ ಬಿಡುಗಡೆ.

ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸೊರರೈ ಪೊಟ್ಟರು’ ನಾಲ್ಕು ಕಾಲ ಘಟ್ಟದಲ್ಲಿ ಜರಗುವ ಸಿನಿಮಾ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡಯಗಡೆಯಾಗಿದ್ದು, ಚಿತ್ರ ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆ. ಈ ಚಿತ್ರ ಕನ್ನಡದಲ್ಲೂ ಏಕ ಕಾಲದಲ್ಲಿ ಡಬ್ ಆಗಿ ರಾರಾಜಿಸಲಿದೆ. ಈ ಚಿತ್ರ ಕನ್ನಡದ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಶೀರ್ಷಿಕೆಯನ್ನು ಸದ್ಯದಲ್ಲೇ ತಿಳಿಸಲಾಗುವುದು.
ಹೆಸರಾಂತ ಜಿ ಆರ್ ಗೋಪಿನಾಥ್ ಏರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪಕರ ಆವದಿಯಲ್ಲಿ ನಡೆದ ಘಟನೆಗಳು ಈ ಚಿತ್ರಕ್ಕೆ ಸ್ಪೂರ್ತಿ. ನಟ ಸೂರ್ಯ ಅರ್ಪಿಸುವ 2ಡಿ ಎಂಟರ್ಟೈನ್ಮೇಂಟ್ ಪ್ರೊಡಕ್ಷನ್ ತಮಿಳು ಸಿನಿಮಾ ‘ಸೊರರೈ ಪೊಟ್ಟರು’ ಚಿತ್ರವನ್ನು ಜನಪ್ರಿಯ ಸಿನಿಮಾ ‘ಇರುಧಿ ಸುಟ್ರು’ ಮಹಿಳಾ ನಿರ್ದೇಶಕಿ ಸುಧಾ ಕೊಂಗಾರ ನಿರ್ದೇಶನ ಮಾಡಿರುವರು. ಸೂಪರ್ ಸ್ಟಾರ್ ಸೂರ್ಯ ಜೊತೆ ಅಪರ್ಣ ಬಾಲಮುರಲಿ, ಮೋಹನ್ ಬಾಬು, ಪರೇಶ್ ರಾವಲ್, ಊರ್ವಶಿ, ಕರುಣಾಸ್ ಮುಖ್ಯ ಪಾತ್ರವನ್ನು ಅಭಿನಯಿಸಿದ್ದಾರೆ. ಜಿ ವಿ ಪ್ರಾಕಾಶ್ ಸಂಗೀತ ಒದಗಿಸಿರುವ ಈ ಚಿತ್ರದ ವಿಶೇಷಗಳಲ್ಲಿ ಸಹಾಸವನ್ನು ಹಾಲವುಡ್ ಅಲ್ಲಿ ‘ಫಾಸ್ಟ್ ಅಂಡ್ ಫ್ಯೂರಿಯಸ್’ ‘ಜೇಮ್ಸ್ ಬಾಂಡ್’ ಸಿನಿಮಾಗಳಿಗೆ ಕೌಶಲ್ಯವನ್ನು ತೋರಿದ ಗ್ರೆಗ್ ಪೊವೆಲ್ ಹಾಗೂ ವಿಕ್ಕಿ ನೀಡಿದ್ದಾರೆ.

ನಂದಗೋಪಾಲ್ ಉಸ್ತುವಾರಿಯಲ್ಲಿ ಸಾಹಸ ಸನ್ನಿವೇಶಗಳ ಚಿತ್ರಣ ನಡೆದಿದೆ. ನಿಕೇತ್ ಬೊಮ್ಮಿರೆಡ್ಡಿ ಈ ಚಿತ್ರದ ಛಾಯಾಗ್ರಾಹಕರು. ಸುಮಾರು 70 ಸ್ಥಳಗಳಲ್ಲಿ ಈ ‘ಸೊರರೈ ಪೊಟ್ಟರು’ ಸಿನಿಮಾಕ್ಕೆ ಚಿತ್ರೀಕರಣ ಮಾಡಿರುವುದು ಸಹ ವಿಶೇಷ. ಚೆನ್ನೈ, ಹೈದರಾಬಾದ್, ಹೊಸೂರು, ಛತ್ತೀಸ್ಗಢ ಮಧುರೈ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಸತೀಶ್ ಸೂರ್ಯ ಸಂಕಲನ ಹಾಗೂ ಜಾಕಿ ಕಲಾ ನಿರ್ದೇಶನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
Recent comments