ಮಹಿಳೆಯ ಮೇಲೆ ದೌರ್ಜನ್ಯ ವೇಸಗಿ ಜಮೀನಿನ ಮದ್ಯದಲ್ಲಿ ಮೊರಂ ಹಾಕಿ ರಸ್ತೆ ನಿರ್ಮಾಣ.
ಮಹಿಳೆಯ ಮೇಲೆ ದೌರ್ಜನ್ಯ ವೇಸಗಿ ಜಮೀನಿನ ಮದ್ಯದಲ್ಲಿ ಮೊರಂ ಹಾಕಿ ರಸ್ತೆ ನಿರ್ಮಾಣ.
ರಾಯಚೂರು : ಶ್ರೀಮತಿ ಲಕ್ಷ್ಮೀ ಗಂಡ ಯಂಕಣ್ಣ ವಯಸ್ಸು 65 ಸಾ ತಿಮ್ಮಾಪುರಪೇಟೆ. ರಾಯಚೂರು ತಾಲೂಕಿನ ಕಲಮಲ ಹೋಬಳಿಯ ನೆಲಹಾಳ ಗ್ರಾಮದ ಸರ್ವೇ ನಂ 73/**/** ವಿಸ್ತೀರ್ಣ 04-31 ಗುಂಟೆ ಜಮೀನು ಶ್ರೀಮತಿ ಲಕ್ಷ್ಮೀ ಗಂಡ ಯಂಕಣ್ಣ ಇವರು ಪಟ್ಟಧಾರಾರಗಿದ್ದು, ಸದರಿ ಸರ್ವೇ ನಂ ನಂಬರಿನ ಜಮೀನಿನಲ್ಲಿ 03 -00 ಎಕರೆ ಜಮೀನು ಶ್ರೀ ಸುಭಾಷ ತಂದೆ ಮಹಾದೇವಪ್ಪ ಸಾ : ನೆಲ್ಹಾಳ ಇವರ ಹೆಸರಿನಲ್ಲಿ ಪಟ್ಟವಿದ್ದು 1) ಸಣ್ಣ ಹುಸೇನಿ 2 ) ಜಂಬಣ್ಣ ರವರ ಭಾಗಕ್ಕೆ ಬಂದಿರುವುದರಿಂದ ಸದರಿ 03 -00 ಎಕರೆ ಜಮೀನಿನಲ್ಲಿ ಇವರುಗಳು ಕಬ್ಜ ಹಾಗೂ ಸಾಗುವಳಿಯನ್ನು ಮಾಡುತ್ತಿದ್ದು ಸದರಿ ಸರ್ವೇ ನಂಬರಿನ ಜಮೀನಿಗೆ ರಸ್ತೆಯೇ ಇರುವುದಿಲ್ಲ. ಲಕ್ಷ್ಮೀ ಯವರ ಜಮೀನಿಂದ , ಈಗ ಸದರಿ ಜಮೀನಿನಲ್ಲಿ ಏಕಾಕಿ ತಮ್ಮ ಮನಸೋ ಹಿಚ್ಚೆಯಂತೆ ಪಟ್ಟದಾರರ ಜಮೀನಿನ ಮದ್ಯದಲ್ಲಿ ಮೊರಂ ಹಾಕುವ ಮೂಲಕ ರಸ್ತೆ ನಿರ್ಮಾಣ ಮಾಡಿಕೊಂಡಿರುತ್ತಾರೆ.
ಈ ದೌರ್ಜನ್ಯವನ್ನು ಎಸಗಿದ 1 ) ಸುಭಾಷ 2) ಸಣ್ಣ ಹುಸೇನಿ ಇವರನ್ನು ಪ್ರಶ್ನಿಸಿದ ಮಹಿಳೆಯನ್ನು ಒಂದು ಹೆಣ್ಣು ಎಂದು ಕೂಡ ಭಾವಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಜೊತಗೆ ಭೂ ಧಾಖಾಲಾತಿ ನಕ್ಷೆ ಪ್ರಕಾರ ಲಕ್ಷ್ಮೀ ಯವರ ಜಮೀನಿನ ಮದ್ಯದಲ್ಲಿ ರಸ್ತೆ ಇರುವುದಿಲ್ಲ ಕಾನೂನಿ ಪ್ರಕಾರ ನೊಂದ ಮಹಿಳೆಗೆ ನ್ಯಾಯ ಬೇಕಾಗಿದ್ದು ಮೂರೂಜನ ಮಕ್ಕಳ ತಾಯಿಯಾಗಿರುವ ಇವರು ಜೀವ ಬೆದರಿಕಿಯಲ್ಲಿ ಜೀವನ ಸಾಗಿಸುತ್ತಿದ್ದು ಸಂಬಂಧಸಿದ ಇಲಾಖೆಯ ಅಧಿಕಾರಿಗಳು ದೌರ್ಜನ್ಯ ವೇಸಗಿದ ವೆಕ್ತಿಗಳ ಮೇಲೆ ಕಾನೂನಿನ ಮೂಲಕ ಕ್ರಮ ಗೊಳ್ಳಬೇಕಾಗಿದೆ.
ಹಾಗೂ ದೌರ್ಜನ್ಯ ಎಸಗಿರುವ ವೆಕ್ತಿಗಳಿಗೆ ನ್ಯಾಯ ಹೇಳಲು ಹೋಗುವ ಜನರಿಗೂ ಅವಚ್ಯಾ ಶಬ್ದಗಳಿಂದ ನಿಂಧಿಸುವುದಲ್ಲದೆ, ಗುಂಡಾ ಪ್ರವೃತ್ತಿ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
Recent comments