Skip to main content
ಐಎಸ್ಎಲ್: ನಾರ್ತ್ ಈಸ್ಟ್ ಮಣಿಸಿದ ಬೆಂಗಳೂರು ಅಗ್ರ ಸ್ಥಾನಕ್ಕೆ

ಐಎಸ್ಎಲ್: ನಾರ್ತ್ ಈಸ್ಟ್ ಮಣಿಸಿದ ಬೆಂಗಳೂರು ಅಗ್ರ ಸ್ಥಾನಕ್ಕೆ

ಐಎಸ್ಎಲ್: ನಾರ್ತ್ ಈಸ್ಟ್ ಮಣಿಸಿದ ಬೆಂಗಳೂರು ಅಗ್ರ ಸ್ಥಾನಕ್ಕೆ

ಐಎಸ್ಎಲ್: ನಾರ್ತ್ ಈಸ್ಟ್ ಮಣಿಸಿದ ಬೆಂಗಳೂರು ಅಗ್ರ ಸ್ಥಾನಕ್ಕೆ

ಗುವಾಹಟಿ: ಭರವಸೆಯ ಆಟಗಾರ ಸುನಿಲ್ ಛೆಟ್ರಿ ಹಾಗೂ ಆಲ್ಬರ್ಟ್ ಸೆರಾನ್ ಅವರು ಬಾರಿಸಿದ ಗೋಲಿನ ಸಹಾಯದಿಂದ ಬೆಂಗಳೂರು ಎಫ್.ಸಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ನಾರ್ತ್ ಈಸ್ಟ್ ತಂಡವನ್ನು 2-0ಯಿಂದ ಮಣಿಸಿ, ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ತವರಿನಲ್ಲಿ ಮುಂಬೈ ವಿರುದ್ಧ ಸೋಲು ಕಂಡಿದ್ದ ಬೆಂಗಳೂರು, ಬುಧವಾರ ಅಮೋಘ ಆಟದ ಪ್ರದರ್ಶನ ನೀಡಿ ಗಮನ ಸೆಳೆಯಿತು. ಸ್ಟಾರ್ ಆಟಗಾರರು ತಂಡದ ಜಯದಲ್ಲಿ ಮಿಂಚಿದರು. ಸಿಕ್ಕ ಅವಕಾಶ ಬಳಸಿಕೊಂಡು ಬೆಂಗಳೂರು ಹುಡುಗರು ತಂಡಕ್ಕೆ ನೆರವಾದರು. ಇದರ ಪರಿಣಾಮ ಬೆಂಗಳೂರು ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಜಯ, ನಾಲ್ಕು ಡ್ರಾ ಹಾಗೂ ಒಂದು ಸೋಲು ಕಂಡಿದ್ದು 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರಂಭದಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟವನ್ನು ಆಡಿದವು. ಆದರೆ, ಸುಲಭವಾಗಿ ಅಂಕಗಳನ್ನು ಎದುರಾಳಿ ತಂಡಕ್ಕೆ ನೀಡಲಿಲ್ಲ.

ಪರಿಣಾಮ ಈ ಅವಧಿಯಲ್ಲಿ ಗೋಲುಗಳ ದಾಖಲಾಗಲಿಲ್ಲ. ಹೀಗಾಗಿ ಎರಡನೇ ಅವಧಿಯ ಮೇಲೆ ಎಲ್ಲರ ಚಿತ್ತ ನೆಟ್ಟಿತು. ಈ ಅವಧಿಯಲ್ಲಿ ಸಂಪೂರ್ಣ ಲಾಭ ಪಡೆದುಕೊಳ್ಳುವ ಆಸೆಯನ್ನು ಬೆಂಗಳೂರು ಹೆಣೆದುಕೊಂಡಿತು. ಎರಡನೇ ಅವಧಿಯ ಆರಂಭದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಸುನಿಲ್ ಛೆಟ್ರಿ ಗೋಲು ಸಿಡಿಸಿದರು. ಬಿ.ಎಫ್.ಸಿ ಮುನ್ನಡೆ ಸಾಧಿಸಿತು. ನಾರ್ತ್ ಈಸ್ಟ್ ಗೋಲು ಬಾರಿಸುವ ಯೋಜನೆ ಹೆಣೆದುಕೊಂಡರೂ, ಅದೃಷ್ಟ ಕೈ ಹಿಡಿಯಲಿಲ್ಲ. 81ನೇ ನಿಮಿಷದಲ್ಲಿ ಆಲ್ಬರ್ಟ್ ಸೆರಾನ್ ಮತ್ತೊಂದು ಗೋಲು ಬಾರಿಸಿ ಬೆಂಗಳೂರು ತಂಡದ, ಮುನ್ನಡೆಗೆ ಕಾರಣರಾದರು. ನಾರ್ತ್ ಈಸ್ಟ್ ತಂಡ ಈ ಅವಧಿಯಲ್ಲಿ ಗೋಲು ದಾಖಲಿಸುವ ಆಸೆ ಫಲಿಸಲಿಲ್ಲ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.