Skip to main content
ವಿಜಯ ರಾಘವೇಂದ್ರ ಅವರ 50ನೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್.

ವಿಜಯ ರಾಘವೇಂದ್ರ ಅವರ 50ನೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್.

ವಿಜಯ ರಾಘವೇಂದ್ರ ಅವರ 50ನೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್.

Kannada new film

ಎಲಿಫೆಂಟ್‌ ಪಾತ್‌ ಫಿಲಂ ಫ್ಯಾಕ್ಟರಿ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ, ದೇವಿ ಪ್ರಸಾದ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಸೀತಾರಾಮ್‌ ಬಿನೋಯ್‌ ಕೇಸ್‌ ನಂಬರ್‌ ೧೮. ಚಿತ್ರಕ್ಕೆ ದೇವಿ ಪ್ರಸಾದ್‌ ಶೆಟ್ಟಿ, ಸಾತ್ವಿಕ್‌ ಹೆಬ್ಬಾರ್ ಹಾಗು‌ ಎಂ ಆರ್‌ ಪಿ ಬಂಡವಾಳ ಹೂಡಿದ್ದು ವಿಜಯ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಚಿತ್ರದ ಇನ್ನೊಂದು ವಿಶೇಷ ಅಂದ್ರೆ ಇದು ವಿಜಯರಾಘವೇಂದ್ರ ಅವರ 50ನೇ ಚಿತ್ರ. ಕಳೆದ ವರ್ಷದ ಆಗಸ್ಟ್‌ನಲ್ಲಿ ಲಾಕ್‌ ಡೌನ್‌ ತೆರವಾದ ಕೂಡಲೇ ಕೇವಲ ಇಪ್ಪತ್ತು ದಿನಗಳಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ಕೋಣಂದೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

Kannada new film

ರಾಜ್ಯದಲ್ಲಿ ಪ್ರಥಮ ಬಾರಿಗೆ ಮೊದಲು ಖಾಸಗೀ ಚಾನಲ್ಲಿನಲ್ಲಿ ಬಿಡುಗಡೆಯಾಗಿ ಮರುದಿನ ಚಿತ್ರಮಂದಿರದಲ್ಲಿ ವಿಶೇಷವಾಗಿ ಬಿಡುಗಡೆಯಾದ ಹೆಗ್ಗಳಿಕೆ ಈ ಚಿತ್ರದ್ದು. ಚಿತ್ರ ಮೂರನೇ ವಾರ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಜಯರಾಘವೇಂದ್ರ ಪೋಲೀಸ್‌ ಇನ್ಸ್ಪಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದು, ವಿಜಯರಾಘವೇಂದ್ರ ಅವರ ನಟನೆಯ ಬಗ್ಗೆ ಈಗಾಗಲೇ ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ಮುಖ್ಯ ಭೂಮಿಕೆಯಲ್ಲಿ ವಿಜಯ ರಾಘವೇಂದ್ರ ಅವರೊಂದಿಗೆ ನಾಗರಾಜ್‌, ಶ್ರೀಹರ್ಷ ಗೋಭಟ್‌ ನೀನಾಸಂ, ಸಾತ್ವಿಕ್‌ ಹೆಬ್ಬಾರ್‌,ದೇವಿ ಪ್ರಕಾಶ್‌ ಮತ್ತಿತರರು ನಟಿಸಿದ್ದಾರೆ. ಸಿನಿಮಾಕ್ಕೆ ಹೇಮಂತ್‌ ಛಾಯಾಗ್ರಹಣವಿದ್ದು, ಶಶಾಂಕ್‌ ನಾರಾಯಣ ಸಂಭಾಷಣೆಯ ಜೊತೆಗೆ ಸಂಕಲನ ಮಾಡಿದ್ದಾರೆ. ಚಿತ್ರಕ್ಕೆ ಗಗನ್‌ ಬಡೇರಿಯ ಸಂಗೀತವಿದ್ದು ಭವಾನಿ ಶಂಕರ್‌ ಆನೇಕಲ್ಲು ಕಲಾನಿರ್ದೇಶನ ಮಾಡಿದ್ದಾರೆ. ರಾಜ್ಯದೆಲ್ಲಡೆ ಚಿತ್ರಕ್ಕೆ ಚಿತ್ರಮಂದಿರದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ನಿರ್ದೇಶಕರೂ ಒಳಗೊಂಡಂತೆ ಬಹುಪಾಲು ತಂತ್ರಜ್ಞರು ಮೊಟ್ಟಮೊದಲನೇ ಬಾರಿಗೆ ಮುಖ್ಯ ತಂತ್ರಜ್ಞರಾಗಿ ಕೆಲಸ ಮಾಡಿದ್ದರೂ ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿರಿವುದು ಚಿತ್ರದ ಹೆಗ್ಗಳಿಕೆ. ಸಿನಿಮಾ ಚಿತ್ರಮಂದಿರದ ನಂತರ ಓಟಿಟಿಯಲ್ಲಿ ಬಿಡುಗಡೆ ಮಾಡುವ ತಯಾರಿಗಳೂ ನೆಡೆಯುತ್ತಿದೆ. ವಿಜಯರಾಘವೇಂದ್ರ ಅವರ ಸಿನಿಬದುಕಿನ 50ನೇ ಚಿತ್ರದ ಭಾಗವಾಗಿ ಹಾಗು ಚಿತ್ರ ಅಭೂತಪೂರ್ವ ಯಶಸ್ಸು ಕಂಡಿರುವುದು ಚಿತ್ರತಂಡದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಪತ್ರಿಕಾಗೋಷ್ಠಿಯಲ್ಲಿ ವಿಜಯರಾಘವೇಂದ್ರ, ಹಿರಿಯ ನಿರ್ಮಾಪಕರಾದ ಚಿನ್ನೇಗೌಡರು, ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ‌, ನಿರ್ಮಾಪಕ ಸಾತ್ವಿಕ್‌ ಹೆಬ್ಬಾರ್‌, ಎಂ ಆರ್‌ ಪಿ, ಛಾಯಾಗ್ರಾಹಕ ಹೇಮಂತ್‌, ಸಂಕಲನಕಾರ ಶಶಾಂಕ್‌ ನಾರಾಯಣ, ಸಂಗೀತ ನಿರ್ದೇಶಕ ಗಗನ್‌ ಬಡೇರಿಯ, ನಟ ಶ್ರೀಹರ್ಷ, ಸ್ಟಿಲ್ಸ್‌ & ಮೇಕಿಂಗ್‌ನ ಶ್ರೀವತ್ಸ ಪಿ ಎಂ,ಪೋಸ್ಟರ್‌ ಡಿಸೈನರ್‌ ಅಶ್ವಿನ್‌ ರಮೇಶ್‌ ಪಾಲ್ಗೊಗೊಂಡಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.