Skip to main content
ರಾಜ್ಯ ರಾಜಕಾರಣದಲ್ಲಿ ಮಹಿಳೆಯರು ಮುಂದೆ ಬರಬೇಕು -.  ಚಿತ್ರನಟಿ ಪೂಜಾ ರಮೇಶ್

ರಾಜ್ಯ ರಾಜಕಾರಣದಲ್ಲಿ ಮಹಿಳೆಯರು ಮುಂದೆ ಬರಬೇಕು -. ಚಿತ್ರನಟಿ ಪೂಜಾ ರಮೇಶ್

ರಾಜ್ಯ ರಾಜಕಾರಣದಲ್ಲಿ ಮಹಿಳೆಯರು ಮುಂದೆ ಬರಬೇಕು -. ಚಿತ್ರನಟಿ ಪೂಜಾ ರಮೇಶ್

Kannada

ರಾಯಚೂರು ಅ.20. ನಮ್ಮ ರಾಜ್ಯದಲ್ಲಿ ಕೈ ಬೆರಳೆಣಿಕೆಯಷ್ಟು ಮಾತ್ರ ಮಹಿಳಾ ಶಾಸಕರಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಮಹಿಳಾ ಮತದಾರರ ಸಂಖ್ಯೆ ಇದ್ದು. ಅವರನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಸೆಳೆಯಲು ಭರವಸೆ ನೀಡಿ ತಿರುಗಿ ನೋಡಲ್ಲ ರಾಜಕಾರಣಿಗಳು... ಆದರೆ ಅವರಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಧಿಕಾರ ಸ್ಥಾನಮಾನಗಳು ನೀಡುವುದರಲ್ಲಿ ಸಂಪೂರ್ಣವಾಗಿ ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ. ಇಂದಿಗೂ ನಮ್ಮ ರಾಜ್ಯದಲ್ಲಿ ಉನ್ನತ ಮಟ್ಟದಲ್ಲಿ ಯಾರು ಮಹಿಳೆಯರು ಸಚಿವರು ಇರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಲ್ಲಾಂದ್ರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವೆರಡೇ ಮಹಿಳೆಯರಿಗೆ ಕೊಡುತ್ತಿದ್ದಾರೆ.

ಕಾಂಗ್ರೆಸ್ ಇರಬಹುದು ಬಿಜೆಪಿ ಪಕ್ಷದಲ್ಲಿರಬಹುದು ಜೆಡಿಎಸ್ ಪಕ್ಷದಲ್ಲಿ ಕೂಡ ಇದೆ ಆಗಿದೆ. ಮಹಿಳೆಯರನ್ನು ಮುಖ್ಯಮಂತ್ರಿ ಮಾಡುವುದು ದೂರ ಉಳಿತು. ಗೃಹಮಂತ್ರಿ ಸಹ ಮಾಡುವುದಿಲ್ಲ ಉಪಮುಖ್ಯಮಂತ್ರಿಸಹ ಮಾಡುವುದಿಲ್ಲ. ರಾಜ್ಯಮಟ್ಟದ ಯಾವುದಾದರೂ ಬೋರ್ಡಿಗೆ ಚೇರ್ಮನ್ ಆಗಿ ಮಾಡುವುದರಲ್ಲಿ ತಾರತಮ್ಯ ಇದೆ. ಮಹಿಳಾ ಆಯೋಗದ ಅಧ್ಯಕ್ಷರು ಮಹಿಳೆಯರನ್ನು ಮಾಡುತ್ತಾರೆ ಅಷ್ಟೇ ಅನಿವಾರ್ಯ ಮಹಿಳೆಯರೇ ಆಗಬೇಕಾಗುತ್ತೆ. ಬೇರೆಬೇರೆ ನಿಗಮ-ಮಂಡಳಿಗಳಿಗೆ ರಾಜ್ಯಮಟ್ಟದ ಅಧ್ಯಕ್ಷರನ್ನು ಮಹಿಳೆಯರನ್ನು ಮಾಡುವುದರಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿವೆ. ಇವತ್ತು ಈ ರಾಜ್ಯದಲ್ಲಿ ಮಹಿಳೆಯರೇ ಮುಂಬರುವ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದಾಗ ಮಾತ್ರ ಎಲ್ಲರ ಕಣ್ಣು ತೆರೆಯುತ್ತದೆ. ಅದಕ್ಕೆ ಅತಿ ಹೆಚ್ಚು ಮಹಿಳೆಯರು ಸ್ಪರ್ಧೆಗೆ ರಾಜ್ಯದಲ್ಲಿ ಬರಬೇಕಿದೆ. 224 ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಜನ ಮಹಿಳಾ ಸದಸ್ಯರು ಶಾಸಕರಾಗಿ ಆಯ್ಕೆಯಾಗಬೇಕು. ಅವಾಗ ಎಲ್ಲ ರಾಜಕೀಯ ಪಕ್ಷದವರಿಗೆ ಕಣ್ಣು ತೆರೆಯುತ್ತವೆ ಉತ್ತಮ ಸ್ಥಾನಮಾನಗಳನ್ನು ನೀಡುತ್ತಾರೆ ಈ ನಿಟ್ಟಿನಲ್ಲಿ ನಾನು ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದೇನೆ ಚುನಾವಣೆಗೆ ಖಂಡಿತವಾಗಿ ಸ್ಪರ್ಧಿಸುತ್ತೇನೆ. ಮಹಿಳಾ ಮತದಾರರ ಸೆಳೆಯಲು ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತಿದ್ದೇನೆ.. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸಮುಖ ಹೊಸ ಬದಲಾವಣೆಗೆ ಜನ ಕಾಯುತ್ತಿದ್ದು ನನಗೆ ಜನ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ನನಗಿದೆ .. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಆ ಸಮಸ್ಯೆಗಳಿಗೆ ಸ್ಪಂದಿಸಲು ಇಲ್ಲಿವರೆಗೆ ಯಾರಿಗೂ ಆಗುತ್ತಿಲ್ಲ. ನಾನು ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿ ಹೋರಾಟ ಮಾಡುತ್ತೇನೆ ಪ್ರತಿಭಟನೆ ಮಾಡುತ್ತೇನೆ. ರಾಯಚೂರು ಜನರಿಗೆ ಒಂದು ಒಳ್ಳೆಯ ಕೆಲಸ ಮಾಡಬೇಕು ಅನ್ನೋದು ನನ್ನ ಉದ್ದೇಶ. ನಾನು ನಿಸ್ವಾರ್ಥ ರಾಜಕಾರಣಿಯಾಗಿ ಜನರ ಸೇವೆ ಮಾಡಬೇಕು... ರಾಯಚೂರು ನಗರದಲ್ಲಿ ಸಾಕಷ್ಟು ಜನ ನನ್ನ ಪರವಾಗಿ ಬೆಂಬಲ ಸೂಚಿಸಿದ್ದಾರೆ ಖುಷಿಯಾಗ್ತಿದೆ. ಡಿಸೆಂಬರ್ ತಿಂಗಳಿನಿಂದ ರಾಯಚೂರು ನಗರದಲ್ಲಿ ನಾನು ವಾಸಮಾಡುತ್ತೇನೆ. ಪ್ರತಿ ವಾರ್ಡಿಗೆ ನಾನು ಭೇಟಿ ನೀಡಿ ಪ್ರತಿ ವಾರ್ಡಿನ ಸಮಸ್ಯೆಗಳ ಬಗ್ಗೆ ಕುಲಂಕುಶವಾಗಿ ಚರ್ಚೆ ಮಾಡುತ್ತೇನೆ. ಈ ರಾಜ್ಯದಲ್ಲಿ ರಾಯಚೂರು ಒಂದು ಮಾದರಿಯ ವಿಧಾನಸಭಾಕ್ಷೇತ್ರ ಆಗಬೇಕು ಅನ್ನೋದೇ ನನ್ನ ಆಶಯಾಗಿದೆ .... ನನಗೆ ಹೊಂದಾಣಿಕೆ ರಾಜಕಾರಣ ಇಷ್ಟ ಇಲ್ಲ. ಅದರಿಂದ ಅಭಿವೃದ್ಧಿಯಾಗುವುದು ತುಂಬಾ ಕಷ್ಟ. ಇಡೀ ರಾಜ್ಯದಲ್ಲಿ ಮಹಿಳೆಯರು ಸ್ಪರ್ಧೆಗೆ ಮುಂದೆ ಬರಬೇಕಾಗಿದೆ... ಎಂದು ಚಿತ್ರನಟಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಡಾ. ಪೂಜಾ ರಮೇಶ್ ಹೇಳಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.