ಭಾರತ ಎ ತಂಡಕ್ಕೆ 5 ವಿಕೆಟ್ ಜಯ
ಮೊದಲನೇ ಪಂದ್ಯ : ಭಾರತ ಎ ತಂಡಕ್ಕೆೆ 5 ವಿಕೆಟ್ ಜಯ

ನವದೆಹಲಿ: ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ ಎ ತಂಡ ಮೊದಲನೇ ಅನಧಿಕೃತ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಎ ವಿರುದ್ಧ ಐದು ವಿಕೆಟ್ ಗಳಿಂದ ಜಯ ಸಾಧಿಸಿದೆ. ನ್ಯೂಜಿಲೆಂಡ್ ಎ ನೀಡಿದ 231 ರನ್ ಗುರಿ ಹಿಂಬಾಲಿಸಿದ ಗುರಿ ಹಿಂಬಾಲಿಸಿದ ಭಾರತ ಎ ತಂಡಕ್ಕೆೆ ಆರಂಭಿಕರಾದ ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ 79 ರನ್ ಗಳಿಸಿ ಉತ್ತಮ ಆರಂಭ ನೀಡಿತು. ಭಾರತ ಏಕದಿನ ತಂಡಕ್ಕೆೆ ಆಯ್ಕೆಯಾದ ಖುಷಿಯಲ್ಲಿ ಬ್ಯಾಟಿಂಗ್ ಮಾಡಿದ ಮುಂಬೈ ಯುವ ಆಟಗಾರ ಕೇವಲ 35 ಎಸೆತಗಳಲ್ಲಿ 48 ರನ್ ಚಚ್ಚಿದರು. ಮಯಾಂಕ್ 29 ರನ್ ಗಳಿಸಿ ಔಟ್ ಆದರು. ನಂತರ ಕ್ರೀಸ್‌ಗೆ ಬಂದ ನಾಯಕ ಶುಭಮನ್ ಗಿಲ್ (30), ಸಂಜು ಸ್ಯಾಮ್ಸನ್ (39) ಹಾಗೂ ಸೂರ್ಯ ಕುಮಾರ್ ಯಾದವ್ (35) ಸ್ಫೋಟಕ ಬ್ಯಾಟಿಂಗ್ ಮಾಡಿದರು. ಇವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ 29.3 ಓವರ್ ಗಳಿಗೆ ಐದು ವಿಕೆಟ್ ನಷ್ಟಕ್ಕೆೆ 231 ರನ್ ಗಳಿಸಿ ಬಹುಬೇಗ ಗೆಲುವಿನ ತೋರಣ ಕಟ್ಟಿತು. ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 48.3 ಓವರ್ ಗಳಿಗೆ 230 ರನ್ ಗಳಿಗೆ ಆಲೌಟ್ ಆಗಿತ್ತು. ಆರಂಭಿಕರಾದ ಜಾರ್ಜ್ ವಾರ್ಕರ್ (14) ಹಾಗೂ ರಚಿನ್ ರವೀಂದ್ರ (49) ಜೋಡಿ ಕಿವೀಸ್ ಗೆ 50 ಜತೆಯಾಟದ ಕೊಡುಗೆ ನೀಡುವ ಮೂಲಕ ಉತ್ತಮ ಆರಂಭ ನೀಡಿದ್ದರು.
ರಚಿನ್ ಕೇವಲ ಒಂದು ರನ್ ಗಳಿಂದ ಅರ್ಧಶತಕ ವಂಚಿರಾದರು. ನಾಯಕ ಟಾಮ್ ಬ್ರೂಸ್ 55 ಎಸೆತಗಳ್ಲಲಿ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಕೊಲ್ ಮೆಕ್‌ಕೊಂಚಿ 34 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರರದ ಪರ ಮಾರಕ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ 33 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.
ಖಲೀಲ್ ಅಹಮದ್ ಹಾಗೂ ಕೃನಾಲ್ ಪಾಂಡ್ಯ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ನ್ಯೂಜಿಲೆಂಡ್ ಎ : 48.3 ಓವರ್ ಗಳಿಗೆ 230/10 (ರಚಿನ್ ರವೀಂದ್ರ 49, ಟಾಮ್ ಬ್ರೂಸ್ 47, ಕೊಲ್ ಮೆಕ್‌ಕೊಂಚ್ ಔಟಾಗದೆ 34; ಮೊಹಮ್ಮದ್ ಸಿರಾಜ್ 33 ಕ್ಕೆೆ 3,ಖಲೀಲ್ ಅಹಮದ್ 46 ಕ್ಕೆೆ 2, ಕೃನಾಲ್ ಪಾಂಡ್ಯ 31 ಕ್ಕೆೆ 2) ಭಾರತ ಎ : 29.3 ಓವರ್ ಗಳಿಗೆ 231/5 (ಪೃಥ್ವಿ ಶಾ 48, ಸಂಜು ಸ್ಯಾಮ್ಸನ್ 39, ಸೂರ್ಯಕುಮಾರ್ ಯಾದವ್ 35, ಶುಭಮನ್ ಗಿಲ್ 30, ಮಯಾಂಕ್ ಅಗರ್ವಾಲ್ 29; ಜೇಮ್ಸ್ ನಿಶ್ಯಾಮ್ 25 ಕ್ಕೆೆ 2)
Recent comments