Skip to main content
2019ರಲ್ಲಿಪಾಕಿಸ್ತಾನ ಪಾಲಿಗೆ ಟೆಸ್ಟ್‌ ಕ್ರಿಕೆಟ್ ಕಠಿಣವಾಗಿತ್ತು: ಮಿಸ್ಬಾ-ಉಲ್-ಹಕ್

2019ರಲ್ಲಿಪಾಕಿಸ್ತಾನ ಪಾಲಿಗೆ ಟೆಸ್ಟ್‌ ಕ್ರಿಕೆಟ್ ಕಠಿಣವಾಗಿತ್ತು: ಮಿಸ್ಬಾ-ಉಲ್-ಹಕ್

2019ರಲ್ಲಿಪಾಕಿಸ್ತಾನ ಪಾಲಿಗೆ ಟೆಸ್ಟ್‌ ಕ್ರಿಕೆಟ್ ಕಠಿಣವಾಗಿತ್ತು: ಮಿಸ್ಬಾ-ಉಲ್-ಹಕ್

mis bha ul hak

ಲಾಹೋರ್: ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪ್ರದರ್ಶನ ಗಮನಿಸಿದಾಗ ಪಾಕಿಸ್ತಾನ ಟೆಸ್ಟ್‌ ಕ್ರಿಕೆಟ್‌ಗೆ 2019ನೇ ವರ್ಷ ಅತ್ಯಂತ ಕಠಿಣವಾಗಿತ್ತು ಎಂದು ಪಾಕ್ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಮಿಸ್ಬಾ-ಉಲ್-ಹಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರನ್ ಸರಾಸರಿ ಕಡಿಮೆ ಇದ್ದ ಕಾರಣ ಪಾಕಿಸ್ತಾನ ತಂಡ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ನಂತರ, ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ತವರು ಏಕದಿನ ಸರಣಿ ಜಯ ಸಾಧಿಸಿತ್ತು. ಆದರೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆೆಂಡ್ ವಿರುದ್ಧ ಸೋಲು ಅನುಭವಿಸಿತ್ತು.

ಇತ್ತೀಚೆಗೆ ಮುಕ್ತಾಯವಾಗಿದ್ದ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ 1-0 ಅಂತರದಲ್ಲಿ ಜಯ ಸಾಧಿಸಿತ್ತು. ಕರಾಚಿ ಪಂದ್ಯದಲ್ಲಿ 263 ರನ್ ಗಳಿಂದ ಜಯ ಸಾಧಿಸಿತ್ತು. ಇದಕ್ಕೂ ಮುನ್ನ ಮೊದಲನೇ ಪಂದ್ಯ ಡ್ರಾ ಆಗಿತ್ತು. ‘‘ ಶ್ರೀಲಂಕಾ ವಿರುದ್ಧ ಭಾರಿ ಅಂತರದಲ್ಲಿ ಜಯ ಸಾಧಿಸಿ ಪಾಕಿಸ್ತಾನ ತಂಡ 2019 ವರ್ಷವನ್ನು ಮುಗಿಸಿದೆ. ಆದರೆ, ಒಟ್ಟಾರೆ, ಟೆಸ್ಟ್‌ ಕ್ರಿಕೆಟ್ ಪಾಕ್ ಪಾಲಿಗೆ 2019ನೇ ವರ್ಷ ಕಠಿಣವಾಗಿತ್ತು. ದೀರ್ಘ ಅವಧಿ ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡ ಇನ್ನೂ ಸಾಕಷ್ಟು ಸುಧಾರಣೆ ಕಾಣಬೇಕು,’’ ಎಂದು ಮಿಸ್ಬಾ-ಉಲ್-ಹಕ್ ಅಭಿಪ್ರಾಯಪಟ್ಟಿದ್ದಾರೆ. ‘‘ಫಖಾರ್ ಝಮನ್, ಹಸನ್ ಅಲಿ ಹಾಘೂ ಶದಾಬ್ ಖಾನ್ ಅವರನ್ನೊಳಗೊಂಡ ಸೀಮಿತ ಓವರ್‌ಗಳ ಮಾದರಿಯಲ್ಲಿ ಪಾಕಿಸ್ತಾನ ತಂಡ, 2017ರಲ್ಲಿ ತವರಿಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯ ಸಾಧಿಸಿತ್ತು. ಆದರೆ, ಐಸಿಸಿ ಏಕದಿನ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಸೋಲು ಅನುಭವಿಸಿತ್ತು. ಒಂದು ವರ್ಷ ತಂಡ ಚುಟುಕು ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದೇವೆ,’’ ಎಂದು ಮಿಸ್ಬಾ ತಿಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.