Skip to main content
ಒಡೆಯರ್ ಮೂವೀಸ್ (Wadeeyar movies) ಸಂಸ್ಥೆಯಿಂದ ನಿರ್ಮಾಣ ಆಗ್ತಿರೋ ಮೊದಲನೆಯ ಸಿನಿಮಾ, ಡೊಳ್ಳು.

ಒಡೆಯರ್ ಮೂವೀಸ್ (Wadeeyar movies) ಸಂಸ್ಥೆಯಿಂದ ನಿರ್ಮಾಣ ಆಗ್ತಿರೋ ಮೊದಲನೆಯ ಸಿನಿಮಾ, ಡೊಳ್ಳು.

ಒಡೆಯರ್ ಮೂವೀಸ್ (Wadeeyar movies) ಸಂಸ್ಥೆಯಿಂದ ನಿರ್ಮಾಣ ಆಗ್ತಿರೋ ಮೊದಲನೆಯ ಸಿನಿಮಾ, ಡೊಳ್ಳು.

Kannada new film

ಈ ಸಿನಿಮಾದಲ್ಲಿ ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಪುರೋಹಿತ್, ನಿರ್ಮಾಪಕರಾಗಿ ನಿಮ್ಮ ಮುಂದೆ ಮೊದಲ ಬಾರಿಗೆ ಬರುತ್ತಿದ್ದಾರೆ. ಈ ಚಿತ್ರ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಸಾಗರ್ ಪುರಾಣಿಕ್ ಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಡೊಳ್ಳು 2020ರಲ್ಲಿ CBFC ಇಂದ U ಸರ್ಟಿಫಿಕೇಟ್ ಪಡೆದಿದ್ದು, ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅಮೇರಿಕಾದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್ ನಲ್ಲಿ ಅದರ ಮೊದಲ ಪ್ರದರ್ಶನ ಕಂಡು, ಎಲ್ಲಾ ಪ್ರೇಕ್ಷಕರ ಗಮನ ಸೆಳೆಯದರೊಂದಿಗೆ ಎಲ್ಲರ ಪ್ರಶಂಸೆಯನ್ನು ಪಡೆದಿದೆ. ಡೊಳ್ಳು, ಹೀಗೆ ಇನ್ನೂ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ. ಢಾಕಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್ ಗಳಲ್ಲಿ ಈಗಾಗಲೇ ಆಯ್ಕೆಯಾಗಿದೆ.

ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಎಂಬ ಒಂದು ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ, ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಎಂಬ ಪ್ರಶಸ್ತಿ ಡೊಳ್ಳಿಗೆ ದೊರಕಿದೆ. ಹಾಗೆಯೇ, ದಾದಾಸಾಹೇಬ್ ಫಾಲ್ಕೆ ಎಂ.ಎಸ್.ಕೆ ಟ್ರಸ್ಟ್ ವತಿಯಿಂದ 1 ಲಕ್ಷ ನಗದು ಬಹುಮಾನ ಸಿಕ್ಕಿದೆ. ಇದು ನಮಗೆ ಬಹಳ ಹೆಮ್ಮೆಯ ವಿಷಯ. ಇನ್ನೂ ಹಲವಾರು ಪ್ರಶಸ್ತಿಗಳು, ಬಹುಮಾನಗಳು ಹಾಗೂ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತೆ ಎಂಬ ವಿಶ್ವಾಸ ಹೊಂದ್ದಿದ್ದು, ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ|| ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರಮನು ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಭಿಲಾಷ್ ಕಳತ್ತಿ - ಛಾಯಾಗ್ರಹಣ, ಎಂ ಅನಂತ್ ಕಾಮತ್ - ಸಂಗೀತ ಸಂಯೋಜನೆ, ಬಿ ಎಸ್ ಕೆಂಪರಾಜು - ಸಂಕಲನ, ಶ್ರೀನಿಧಿ ಡಿ ಎಸ್ - ಚಿತ್ರಕಥೆ & ಸಂಭಾಷಣೆ, ದೇವಿ ಪ್ರಕಾಶ್- ಕಲೆ ನಿತಿನ್ ಲೂಕೋಸ್ - ಶಬ್ದ ವಿನ್ಯಾಸ ಮಾಡಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.