ದಕ್ಷಿಣ ಆಫ್ರಿಕಾ ತಂಡಕ್ಕೆ ಜಾಕ್ ಕಾಲಿಸ್ ಬ್ಯಾಟಿಂಗ್ ಸಲಹೆಗಾರ.
ದಕ್ಷಿಣ ಆಫ್ರಿಕಾ ತಂಡಕ್ಕೆ ಜಾಕ್ ಕಾಲಿಸ್ ಬ್ಯಾಟಿಂಗ್ ಸಲಹೆಗಾರ.

ಜೋಹನ್ಸ್ಬರ್ಗ್:ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್ರೌಂಡರ್ ಜಾಕ್ ಕಾಲಿಸ್ ಅವರು ಬೇಸಿಗೆ ಆವೃತ್ತಿಗೆ ಹರಿಣಗಳ ಪಡೆಗೆ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಬುಧವಾರ ಜಾಕ್ ಕಾಲಿಸ್ ಕೋಚಿಂಗ್ ಸಿಬ್ಬಂದಿ ವಿಭಾಗಕ್ಕೆೆ ಸೇರ್ಪಡೆಯಾದರು. ಕಾಲಿಸ್ ವಿಶ್ವದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದಾರೆ. ಇವರ ನೇಮಕವಾಗುವ ಮೂಲಕ ಸಿಎಸ್ಎ ಕೋಚಿಂಗ್ ಸಿಬ್ಬಂದಿ ವಿಭಾಗದಲ್ಲಿ ನಾಲ್ಕನೇ ಪ್ರಮುಖ ಬದಲಾವಣೆಯಾಗಿದೆ.

ಇದಕ್ಕೂ ಮುನ್ನ ಜಾಕ್ ಫೌಲ್ ಸಿಇಓ, ಗ್ರೇಮ್ ಸ್ಮಿತ್ ನಿರ್ದೇಶಕರಾಗಿ ಹಾಗೂ ಮಾರ್ಕ್ ಬೌಷರ್ ದಕ್ಷಿಣ ಆಫ್ರಿಕಾ ತಂಡದ ಮುಖ್ಯಕೋಚ್ ಆಗಿ ನೇಮಕವಾಗಿದ್ದರು. ಇದೀಗ. ಜಾಕ್ ಕಾಲಿಸ್ ಕೂಡ ಕೋಚಿಂಗ್ ವಿಭಾಗ ಸೇರ್ಪಡೆಯಾಗಿದ್ದಾರೆ. ಜಾಕ್ ಕಾಲಿಸ್ ದಕ್ಷಿಣ ಆಫ್ರಿಕಾ ಪರ 519 ಅಂತಾರಾಷ್ಟ್ರೀಯ ಪಂದ್ಯಗಳಾಡಿದ್ದು, 25,534 ರನ್ ಹಾಗೂ 577 ವಿಕೆಟ್ ಕಬಳಿಸಿದ್ದಾರೆ. ಇವರು 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಟೆಸ್ಟ್ ನಲ್ಲಿ 45 ಹಾಗೂ 17 ಏಕದಿನ ಪಂದ್ಯಗಳು ಸೇರಿ ಒಟ್ಟು 62 ಶತಕಗಳನ್ನು ಪೂರೈಸಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ. ಮೊದಲ ಎರಡು ಪಂದ್ಯಗಳಿಗೆ ಕಳೆದ ಸೋಮವಾರ ತಂಡವನ್ನು ಪ್ರಕಟಿಸಲಾಗಿದೆ. ಆರು ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
Recent comments