Skip to main content
ಏಮ್ಸ್ ಮಂಜೂರಾತಿಗೆ ಮತ್ತು ರಾಯಚೂರು ವಿ.ವಿ ಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ SFI ಪ್ರತಿಭಟನೆ

ಏಮ್ಸ್ ಮಂಜೂರಾತಿಗೆ ಮತ್ತು ರಾಯಚೂರು ವಿ.ವಿ ಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ SFI ಪ್ರತಿಭಟನೆ

ಏಮ್ಸ್ ಮಂಜೂರಾತಿಗೆ ಮತ್ತು ರಾಯಚೂರು ವಿ.ವಿ ಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ SFI ಪ್ರತಿಭಟನೆ.

Raichur

ರಾಯಚೂರು : ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಯನ್ನು ಮಂಜೂರು ಮಾಡಲು ಮತ್ತು ರಾಯಚೂರು ನೂತನ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ( SFI) ರಾಯಚೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಯನ್ನು ಮಾಡಿದರು. ದೇಶದಲ್ಲೆ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಯಲ್ಲಿ ಹಿಂದುಳಿದ ರಾಯಚೂರು ಜಿಲ್ಲೆಗೆ ಅಗತ್ಯ ಮತ್ತು ಅನಿವಾರ್ಯತೆ ಇದ್ದರು ಹಿಂದೆ ಕಾರಣಾಂತರ ಹಾಗೂ ರಾಜಕೀಯ ಇಚ್ಛಾ ಶಕ್ತಿ ಮತ್ತು ಮೋಸಗಾರಿಕೆಯಿಂದ ಐಐಟಿ ಎಂಬ ಶಿಕ್ಷಣ ಸಂಸ್ಥೆ ಕೈ ತಪ್ಪಿತು ಈಗ ಆ ಸರದಿಯಲ್ಲಿ ಏಮ್ಸ್ ಸೇರುವ ಸಾಧ್ಯತೆ ಎದ್ದು ಕಾಣುತ್ತಿದೆ.

ರಾಯಚೂರು ಜಿಲ್ಲೆ ಬಡತನದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಈಗಲೂ ಈ ಭಾಗದ ಜನತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಶಿಕ್ಷಣ ಲಭಿಸುತ್ತಿಲ್ಲ, ಉತ್ತಮ ಚಿಕಿತ್ಸೆ ಮತ್ತು ವೈದ್ಯಕೀಯ ವಿದ್ಯಾಭ್ಯಾಸ ಕ್ಕಾಗಿ ದೂರದ ಹೈದ್ರಾಬಾದ್, ಬೆಂಗಳೂರು, ಚೆನೈ, ಪುಣೆ ಮತ್ತು ಬಾಂಬೆ ಯಂತಹ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದ ಈ ಭಾಗದ ಜನತೆಯು ಅನಾರೋಗ್ಯ ಕ್ಕೆ ತುತ್ತಾದ ಮೇಲೆ ಚೇತರಿಸಿಕೊಳ್ಳುವ ಬದಲು ಸಾವಿಗೆ ತುತ್ತಾಗೊದೆ ಹೆಚ್ಚಿದೆ. ಇನ್ನೂ ವೈದ್ಯಕೀಯ ಶ ಚಿಕಿತ್ಸೆ ಶಿಕ್ಷಣ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಬಡತನ, ಭಾಷೆ ಮತ್ತು ಪ್ರಾದೇಶಿಕ ಸಮಾನತೆ ಹಾಗೂ ಭೌಗೋಳಿಕ ಪ್ರದೇಶದ ವಾತವರಣದ ಕಾರಣದಿಂದ ಕಲಿಕೆಯಿಂದ ದೂರ ಉಳಿಯುವಂತಾಗಿದೆ. ಇನ್ನೂ ನಂಜುಡಪ್ಪ ವರದಿ ಸೇರಿ ಅನೇಕ ಅಧ್ಯಯನ ವರದಿಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಬೇಕು ಅನ್ನುವ ಅಂಶವನ್ನು ಹೇಳಿವೆ ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ರು ಸೇರಿ ಕೇಂದ್ರದ ತಂಡ ಸ್ಥಳ ಪರಿಶೀಲನೆ ಸೇರಿ ಒಂದಷ್ಟು ಸಮಾಲೋಚನೆ ಯನ್ನು ಮಾಡಿದೆ. ನಂತರ ಏಮ್ಸ್ ಮಂಜೂರಾತಿಗಾಗಿ ಜಿಲ್ಲೆಯ ಜನಾಗ್ರಹವು ಇದೆ.

ಇದನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ ಜಿಲ್ಲೆಗೆ ಏಮ್ಸ್ ಸಂಸ್ಥೆ ಯನ್ನು ಮಂಜೂರು ಮಾಡಬೇಕು. ಹಾಗೂ ಅನೇಕ ಹೋರಾಟ ಗಳ ಪ್ರತಿಫಲವಾಗಿ ಕಳೆದ ಕೆಲವು ತಿಂಗಳ ಹಿಂದೆ ಯರಗೇರಾ ಸ್ನಾತಕೋತ್ತರ ಅಧ್ಯಯನ ಕೇಂದ್ರ ವು ರಾಯಚೂರು ನೂತನ ವಿಶ್ವವಿದ್ಯಾಲಯ ವಾಗಿ ಘೋಷಣೆ ಆಗಿದೆ ‌ ಆದರೆ ಘೋಷಣೆ ಆಗಿ ಐದು ತಿಂಗಳು ಕಳೆದರು ಇಂದಿಗೂ ವಿಶ್ವವಿದ್ಯಾಲಯದ ನೂತನ ಪ್ರಕ್ರಿಯೆ ಸೇರಿ ಅಭಿವೃದ್ಧಿಯ ಯಾವ ಕೆಲಸಗಳು ನಡೆಯುತ್ತಿಲ್ಲ ಕಾರಣ ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಯುಜಿಸಿ ಯಿಂದ ಬರಬೇಕಾದ ಅನುದಾನ ಬಂದಿಲ್ಲ ಇದರಿಂದ ಯೂನಿವರ್ಸಿಟಿ ಶೈಕ್ಷಣಿಕ ಚಟುವಟಿಕೆ ಗಳು ಸೇರಿ ಎಲ್ಲಾದಕ್ಕೂ ಗ್ರಹಣ ಹಿಡಿದಂತೆ ಆಗಿದೆ ಆದ ಕಾರಣ ಕೂಡಲೇ ತಾವುಗಳು ಅನುದಾನವನ್ನು ಬಿಡುಗಡೆ ಮಾಡಿ ಶೈಕ್ಷಣಿಕ ಚಟುವಟಿಕೆ ಗಳು ಸೇರಿ ವಿದ್ಯಾರ್ಥಿ ಗಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಮತ್ತು ಈ ಮನವಿಯಲ್ಲಿ ಗುರುತಿಸಿದ ಈ ಮೇಲಿನ ಎರಡು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಸಂಬಂಧಿಸಿದಂತೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಚರ್ಚಿಸಿ ಪೂರಕ ನಿರ್ಣಯ ಕೈಗೊಂಡು ಶೀಘ್ರವೇ ಜಾರಿಗೆ ಮುಂದಾಗಬೇಕು ನಿರ್ಲಕ್ಷ್ಯ ತೋರಿದರೆ ಜಿಲ್ಲೆ ಸೇರಿ ರಾಜ್ಯವ್ಯಾಪಿ SFI ನೇತೃತ್ವದಲ್ಲಿ ವಿದ್ಯಾರ್ಥಿ ಸಮುದಾಯಯೊಂದಿದೆ ಉಗ್ರವಾದ ಹೋರಾಟ ಕ್ಕೆ ಮುಂದಾಗಬೇಕಾಗುತ್ತೆ ಎಂದು ಪ್ರತಿಭಟನಾ ಮನವಿ ಮೂಲಕ ಒತ್ತಾಯಿಸಿ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿ ಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳ ಕಳುಹಿಸಿ ಕೊಡಲಾಯಿತು.

Raichur

ಈ ಸಂಧರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಉಪಾಧ್ಯಕ್ಷರಾದ ಬಸವರಾಜ ದೀನಸಮುದ್ರ, ಮಹಾಲಿಂಗ ದೊಡ್ಡಮನಿ, ಸಹ ಕಾರ್ಯದರ್ಶಿ ಗೌರಿ ರಾಯಚೂರು, ಮುಖಂಡರಾದ ಬಸವಂತ್ ಮಸ್ಕಿ, ಮಹೇಶ್ವರಿ, ಮೌನೇಶ ಬುಳ್ಳಾಪುರ, ವೆಂಕಟೇಶ ಕವಿತಾಳ, ನಾಗಮೋಹನ್ ಸಿಂಗ್, ಅಮರೇಶ್ ಸೇರಿ ಇತರರಿದ್ದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.