Skip to main content
ಅಮೆಜಾನ್ ಪ್ರೈಮ್ ನಲ್ಲಿ ಕೈ ಹಿಡಿದ ಪ್ರೇಕ್ಷಕ ”ಮನರೂಪ” ಚಿತ್ರಕ್ಕೆ ಪ್ರಶಸ್ತಿಯ ಗರಿ.

ಅಮೆಜಾನ್ ಪ್ರೈಮ್ ನಲ್ಲಿ ಕೈ ಹಿಡಿದ ಪ್ರೇಕ್ಷಕ ”ಮನರೂಪ” ಚಿತ್ರಕ್ಕೆ ಪ್ರಶಸ್ತಿಯ ಗರಿ.

ಅಮೆಜಾನ್ ಪ್ರೈಮ್ ನಲ್ಲಿ ಕೈ ಹಿಡಿದ ಪ್ರೇಕ್ಷಕ ”ಮನರೂಪ” ಚಿತ್ರಕ್ಕೆ ಪ್ರಶಸ್ತಿಯ ಗರಿ.

Manaroopa

ಬುದ್ದಿಮಾಂದ್ಯರಿಗೆ ಅಮೆಜಾನ್ ಪ್ರೈಮ್ ನಲ್ಲಿ ಮನರೂಪ ಕೈ ಹಿಡಿದ ಪ್ರೇಕ್ಷಕ ಮನರೂಪ ಕೈ ಹಿಡಿದ ಪ್ರೇಕ್ಷಕ ಮನರೂಪ ಚಿತ್ರಕ್ಕೆ ಒಲಿದ ಕೆಫೆ ಇರಾನಿ ಅಂತಾರಾಷ್ಟ್ರೀಯ ಚಲನ ಚೊತ್ರೋತ್ಸವ ಪ್ರಶಸ್ತಿಯ ಗರಿ. ಜೀವನವನ್ನೇ ಆಟವನ್ನಾಗಿಸಿ ಕೊಳ್ಳುವ ಯುವಕರ ದುರಂತ ಮಯ ಚಿತ್ರಣ ಮನರೂಪ ಚಿತ್ರದಲ್ಲಿದೆ ತಂದೆ ತಾಯಿ ಮತ್ತು ಯುವ ಪೀಳಿಗೆ ತಾಳ್ಮೆಯಿಂದ ನೋಡಲೇ ಬೇಕಾದ ಚಿತ್ರ “ಮನರೂಪ”. ಬೆಂಗಳೂರು ಮಾರ್ಚ್ 19 2020 ಬಹುತೇಕ ಸಿನಿ ಪ್ರೇಮಿಗಳಿಗೆ “ಮನರೂಪ” ಸಿನಿಮಾವೊಂದು ಚಿತ್ರ ಮಂದಿರಕ್ಕೆ ಬಂದಿದ್ದೆ ಗೊತ್ತಾಗಿರಲಿಲ್ಲ.ಹೊಸ ಬಗೆಯ ನಿರೂಪಣೆ ಮತ್ತು ವಿಕ್ಷೀಪ್ತಮನೋಭಾವವನ್ನು ಅನಾವರಣಗೊಳಿಸುವ ಮನರೂಪ ಕಾಡಿನಲ್ಲೇ ಚಿತ್ರೀಕರಣಗೊಂಡು ಚಿತ್ರ ಹೊಸ ತಲೆಮಾರಿನ ಒಂದು ವರ್ಗದ ಯುವಕರ ವಿಭಿನ್ನ ಆಸಕ್ತಿಯನ್ನು ವಿವರಿಸುವ ಡಾರ್ಕ್ ಪರಿಕಲ್ಪನೆ ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಇದಾಗಿದ್ದು ವಿಮರ್ಶಕರಿಂದ ಉತ್ತಮ ಪ್ರಕ್ರಿಯೆಗೆ ಒಳಪಟ್ಟಿತ್ತು.

Manaroopa ,Prime video

ನಿಧಾನವಾಗಿ ಪ್ರಾರಂಭವಾಗುವ ಮನರೂಪ ನಿರೂಪಣೆ ಹಂತ ಹಂತವಾಗಿ ಪ್ರೇಕ್ಷಕರನ್ನು ಥ್ರಿಲ್ ಮಾಡುತ್ತದೆ. ಆದರೆ ಚಿತ್ರಮಂದಿರಕ್ಕೆ ಬಂದು ಮನರೂಪವನ್ನು ಪ್ರೇಕ್ಷಕರು ನೋಡಿರಲಿಲ್ಲ. ಆದರೆ ಈಗ ಮನರೂಪ ಅಮೆಜಾನ್ ಪ್ರೈಮ್ ನಲ್ಲಿ ಪ್ರದರ್ಶನಗೊಳ್ಳುತ್ತಿದಂತೆ, ಆನೇಕರು ಈ ಚಿತ್ರವನ್ನು ನೋಡಿ ವಿಭಿನ್ನ ಕಥಾಹಂದರದ ಸಿನಿಮಾ ಇದಾಗಿದೆ ಎನ್ನುತ್ತಿದ್ದಾರೆ.ಎಲ್ಲೂ ಕಥೆಯ ಜಾಡನ್ನು ಬಿಡದೇ ನಿರೂಪಣೆ ಗೊಂಡ ಚಿತ್ರ ಮತ್ತು ಹೊಸ ತಂಡ ಮಾಡಿದ್ದಾರೆ ಎಂದು ಅನಿಸದಂತೆ ಮ್ಯಾಚ್ಯುರ್ಡ ಆಗಿ ಅಭಿನಯಿಸಿದ್ದಾರೆ ಎಂಬಂತಹ ಕಾಮೆಂಟ್ಗಳು ಬರುತ್ತಿವೆ ಸೋಷಿಯಲ್ ಮಿಡಿಯಾದಲ್ಲಿ “ಮನರೂಪ” ಪೋಸ್ಟರ್ ಗಳನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಥೀಯೆಟರ್ ನಲ್ಲಿ ಸಿಗದ ಮಾನ್ಯತೆ, ಅಮೆಜಾನ್ ಪ್ರೈಮ್ ನಲ್ಲಿ ಸಿಗುತ್ತಿರುವುದಕ್ಕೆ ಮರೂಪ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಕಿರಣ್ ಹೆಗೆಡೆ ಥ್ರಿಲ್ ಆಗಿದ್ದಾರೆ.

Manaroopa ,Prime video

“ನಾನೇ ಬಂಡವಾಳ ಹೂಡಿ ಮನರೂಪ ಮಾಡಿದೆ.ಆದರೆ ಚಿತ್ರಮಂದಿರದ ಮೂಲಕ ಜನರಿಗೆ ತಲುಪಿಸುವಲ್ಲಿ ಬಹುಶಃ ನಮ್ಮ ಚಿತ್ರತಂಡ ಸೋತಿತ್ತು.ಮುಖ್ಯವಾಗಿ,ಮನರೂಪ ಖಾಸಗಿಯಾಗಿ ಕೂತು ನೋಡಲು ಹೆಚ್ಚು ಆಪ್ತವಾದ ಸಿನಿಮಾ ಎಂದು ಈಗ ನನಗೆ ಅನಿಸುತ್ತಿದೆ,ಯಾಕೆದಂರೆ ವ್ಯಕ್ತಿ ಒಂಟಿಯಾಗಿದ್ದಾಗ,ಒಂದು ಸಿನಿಮಾ ನೋಡಲು ಸಂದರ್ಭದಲ್ಲಿ ಚಿತ್ರದಲ್ಲಿ ಎರಡನೇ ಸಂಗತಿಗಳು ಮನಸನ್ನು ನಾಟುತ್ತವೆ. ಮನರೂಪ ಚಿತ್ರದಲ್ಲಿ ಎರಡನೇ ಭಾಗದಲ್ಲಿ ಬರುವ ಅನೇಕ ಸಂಗತಿಗಳು ಒಂದು ಸಿನಿಮಾ ವರ್ಗದ ಯುವಕರು ಮತ್ತು ಕುಟುಂಬವನ್ನು ತಟ್ಟುತ್ತವೆ.ಜೀವನವನ್ನೇ ಆಟವನ್ನಾಗಿಸಿ ಕೊಳ್ಳುವ ಯುವಪೀಳಿಗೆಯ ದುರಂತಮಯ ಚಿತ್ರಣ ಮನರೂಪದಲ್ಲಿದೆ.

Manaroopa

ಬಿಡಿಬಿಡಿಯಾಗಿ ಕಾಣುವ ಮನರೂಪ ಚಿತ್ರದ ಪಾತ್ರದಾರಿಗಳಾದ ಗೌರವ್ ಮನರೂಪ ಆಕರ್ಷಣೆಗಳು.ಕಿರಣ್ ಹೆಗೆಡೆ ಅವರ ವಿಭಿನ್ನ ಕಥೆ ಮತ್ತು ನಿರೂಪಣೆ, ಗೋವಿಂದರಾಜ್ ಅವರ ಕ್ಯಾಮೆರಾ ಕೈಚಳಕ,ಸರವಣ ಅವರ ಥ್ರಿಲ್ ಮೂಡಿಸುವ ಸಂಗೀತ,ಲೋಕಿ ಮತ್ತು ಸೂರಿ ಅವರ ಸಂಕಲನ ಮತ್ತು ನಾಗರಾಜ್ ಅವರ ಶಬ್ದ ವಿನ್ಯಾಸ ಮನರೂಪದ ಅಂದವನ್ನು ಹೆಚ್ಚಿಸಿದೆ.ಗಜಾ ನೀನಾಸಂ ಒಂದೇ ಟೇಕ್ ನಲ್ಲಿ 7 ನಿಮಿಷದ ಅಭಿನಯ ಮಾಡಿರುವುದು,ಮುಖ್ಯವಾಗಿ ಕಟ್ ಇಲ್ಲದ ದೃಶ್ಯ ಇದು.ಕ್ಯಾಮೆರಾ ಓಡಾಡುವ ಬದಲು ನಟ ಇಡೀ ಅರಣ್ಯವನ್ನು ಓಡಾಡಿ ಅಭಿನಯಿಸಿರುವುದು ಮತ್ತು ಎಮೋಷನ್ನನ್ನು ಕಟ್ಟಿಕೊಟ್ಟಿರುವುದು. ದಿಲೀಪ್ ಕುಮಾರ್ ಮತ್ತು ಅಮೋಘ್ ಸಿದ್ದಾರ್ಥ್ ಅವರ ಮನೋಜ್ಞಅಭಿನಯ ಮತ್ತು ಭಯಂಕರ ಕಾಡು ಈ ಕಾಲದ ಹುಡುಗರ ಒಂಟಿತನ,ಅ ಸಹಜತೆ ,ನೆಮ್ಮದಿಯ ಹುಡುಕಾಟದ ಛಾಯೆ ಮನರೂಪದ ಆ ಕರ್ಷಣೆ. ಉಜ್ವಲಾ, ಪೂರ್ಣ,ಶಶಾಂಕ್ ಮತ್ತು ಶರವಣ್ ಅವರ ಮನಷ್ಯನ ಮನಸಿನ ಜಾಡು ಹಿಡಿದು ಸಾಗುವ ಮನರೂಪ ಇದೀಗ ಅಮೇಜಾನ್ ಪ್ರೈಮ್ ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ.

Manaroopa ,amazon prime video

ಎಂದು ಖುಷಿಯನ್ನು ಹಂಚಿಕೊಡರು.ಇದಲ್ಲದೇ,ಮನರೂಪ ಅಂತಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿಕೊಂಡಿದೆ. “ ಉತ್ತಮ ಪ್ರಯೋಗಾತ್ಮಕ ಸಿನಿಮಾ ‘ಎಂದು ಮುಂಬೈನಲ್ಲಿ ನಡೆದ ಕೆಫೆ ಇರಾನಿ ಅಂತಾರಾಷ್ಟೀಯ ಚಲನಚಿತ್ರೋತ್ಸವ ಬಣ್ಣಿಸಿದೆ.ಇದಲ್ಲದೇ ಅಮೆರಿಕಾದ ಮಿಯಾಮಿ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವ ಮತ್ತು ಟರ್ಕಿಯ ಇಸ್ತಾನ್ ಬುಲ್ ಫಿಲ್ ಅವಾರ್ಡ್ಸ್ ಚಿತ್ರೋತ್ಸವಗಳಲ್ಲೂ ಮನರೂಪ ಆಯ್ಕೆಯಾಗಿದೆ.ಮನರೂಪ ಚಿತ್ರದಲ್ಲಿ ಹೊಸಬರೇ ಬಣ್ಣ ಹಚ್ಚಿದ್ದರು, ದಿಲೀಪ್ ಕುಮಾರ್ ,ಅನೂಷಾ ರಾವ್, ನಿಷಾ ಯಶ್ ರಾಮ್, ಆರ್ಯನ್,ಶಿವಪ್ರಸಾದ್,ಅಮೋಘ್ ಸಿದ್ದಾರ್ಥ್,ಪ್ರಜ್ವಲ್ ಗೌಡ,ಗಜಾ ನೀನಾಸಂ,ರಮಾನಂದ ಐನಕೈ,ಬಿ.ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.ಗೋವಿಂದರಾಜ್ ಛಾಯಗ್ರಾಹಣ,ಸರ್ವಣ ಅವರ ಸಂಗೀತ,ಲೋಕಿ-ಸುರಿ ಅವರ ಛಾಯಾಗ್ರಹಣ, ಸರ್ವಣ ಅವರ ಸಂಗೀತ, ಲೋಕಿ-ಸೂರಿ ಅವರ ಸಂಕಲನ ಮತ್ತು ಹುಲಿವಾನ್ ನಾಗರಾಜ್ ಅವರ ಸೌಂಡ್ ಡಿಸೈನ್ ಈ ಚಿತ್ರಕ್ಕಿದೆ.ಸಾಹಿತಿ ಮತ್ತು ಪತ್ರಕರ್ತ ಮಹಾಬಲ ಸೀತಾಳಭಾವಿ ಅವರ ಸಂಭಾಷಣೆ ಬರೆದಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.