Skip to main content
ಅಮೇರಿಕಾದಲ್ಲಿ " ಅಕ್ಕ ಸಮ್ಮೇಳನ " ದ ಕಹಳೆ .

ಅಮೇರಿಕಾದಲ್ಲಿ " ಅಕ್ಕ ಸಮ್ಮೇಳನ " ಕಹಳೆ .

ಅಮೇರಿಕಾದಲ್ಲಿ  " ಅಕ್ಕ ಸಮ್ಮೇಳನ " ಕಹಳೆ .

ಕನ್ನಡ ಸಮ್ಮೇಳನ

ಉದ್ಯೋಗ ಹರಸಿ ವಿದೇಶದಲ್ಲಿ ನೆಲೆಸಿರುವ ನಮ್ಮ ಕರುನಾಡ ಮಕ್ಕಳು ಒಗ್ಗೂಡಿ ಸಾಗರಾದಾಚೆ ನಮ್ಮ ನಾಡು ನುಡಿ ಸಂಸ್ಕೃತಿ ರಾರಾಜಿಸಲು ಸಾಕ್ಷಿಯಾಗಿದ್ದಾರೆ. ಅಮೆರಿಕ ದಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರು ಒಗ್ಗೂಡಿ ಅಮೆರಿಕ ಕನ್ನಡ ಕೂಟಗಳ ಅಗರ (ಅಕ್ಕ) ಸಂಘಟನೆ ಕನ್ನಡ ಭಾಷೆಯ ಅಕ್ಕರೆಯ ಮಕ್ಕಳಾಗಿ,ಕರ್ನಾಟಕ ಸರ್ಕಾರ ,ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯ ಗೌರವ ರಾಯಬಾರಿಗಳಾಗಿ ಸತತ 20 ವರ್ಷಗಳಿಂದ ನಮ್ಮ ಕರುನಾಡ ಹೆಗ್ಗಳಿಕೆಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು. ಅಕ್ಕ ಸಂಘವು ನೆಡೆಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನೆಡೆಸುವ "ವಿಶ್ವ ಕನ್ನಡ ಸಮ್ಮೇಳನ"ವು ನಮ್ಮ ಕರ್ನಾಟಕದಿಂದ ಸಾವಿರಾರು ಜನರು ಸೇರಿ ಕರುನಾಡ ಧೀಮಂತ ಸಂಸ್ಕೃತಿ ಮತ್ತು ಅಮೇರಿಕೆಯ ಅಧುನಿಕ ಸಂಸ್ಕೃತಿಗಳ ನಡುವೆ ಮಧುರ ಸ್ನೇಹವನ್ನು ನಿರ್ಮಿಸುವ ಸೇತುವಾಗಿದೆ.

ಕನ್ನಡ ಸಮ್ಮೇಳನ

ಪ್ರತಿ ಭಾರಿಯಂತೆ ಈ ಭಾರಿಯು ಸಹ ಅಷ್ಟೇ ವೈಭವ ಪೂರ್ಣ ಹನ್ನೊಂದನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು, ಆದರೆ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಹೆಮ್ಮಾರಿ ಯಿಂದಾಗಿ ಈ ಭಾರಿಯ ಕನ್ನಡ ಸಮ್ಮೇಳನವನ್ನು ಆಯೋಜಿಸುವ ಯೋಜನೆ ಕೈ ಬಿಡಲಾಗಿದ್ದು. ಅದಾಗಿಯೂ ಅಕ್ಕ ಸಂಘವು ಈ ಭಾರಿಯ ಸಮ್ಮೇಳನವನ್ನು ಸವಾಲಾಗಿ ಸ್ವೀಕರಿಸಿ ತಂತ್ರಜ್ಞಾನ ದ ಬಳಕೆಯ ಮೂಲಕ ಜಗತ್ತಿನ ಎಲ್ಲಾ ದೇಶದ ಕನ್ನಡಿಗರನ್ನು ತಲುಪುವ ಧ್ಯೇಯ ದೊಂದಿಗೆ " ಅಕ್ಕ ವಾಸ್ತವ ವಿಶ್ವ ಕನ್ನಡ ಸಮ್ಮೇಳನ" ಸೆಪ್ಟೆಂಬರ್ 4 ರಿಂದ 6 ರವರೆಗೆ ಮೂರು ದಿನಗಳ ವಿಶೇಷ ಸಮ್ಮೇಳನ ಏರ್ಪಡಿಸಿದೆ.

ಈ ಹಿಂದಿನ ಸಮ್ಮೇಳನದ ಎಲ್ಲಾ ಯಶಸ್ವಿ ಕಾರ್ಯಕ್ರಮಗಳನ್ನು ಈ ಭಾರಿಯು ಅಳವಡಿಸಲಾಗಿದ್ದು 11ನೇ ಕನ್ನಡ ಸಮ್ಮೇಳನವು ತುಮಕೂರು ದಯಾನಂದ ರವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಈ ಭಾರಿಯ ಸಮ್ಮೇಳನಕ್ಕೆ ನೋಂದಣಿ ಉಚಿತ ಎಂದು ಅಕ್ಕ ಬೋರ್ಡ್ ಆಫ್ ಟ್ರಸ್ಟಿಸ್ ನ ಅಧ್ಯಕ್ಷ ರಾದ ಅಮರನಾಥ್ ಗೌಡರು ಮತ್ತು ತುಮಕೂರು ದಯಾನಂದ್ "ಅಕ್ಕ ಅಧ್ಯಕ್ಷ 11ನೇ ವಿಶ್ವ ಕನ್ನಡ ಸಮ್ಮೇಳನ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.