3000 ರನ್ ಗಳಿಸಿ ಏಕದಿನ ಕ್ರಿಕೆಟ್ ನಲ್ಲಿ ದಾಖಲೆ ಬರೆದ ಹೋಪ್ .
3,000 ರನ್ ಗಳಿಸಿ ಏಕದಿನ ಕ್ರಿಕೆಟ್ನಲ್ಲಿ ವಿಶಿಷ್ಠ ದಾಖಲೆ ಬರೆದ ಹೋಪ್ .

ಕಟಕ್: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 3,000 ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎಂಬ ಸಾಧನೆಗೆ ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಶಾಯ್ ಹೋಪ್ ಭಾಜನರಾಗಿದ್ದಾರೆ. ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ ಆಟಗಾರ ಈ ಸಾಧನೆ ಮಾಡಿದರು. ಆರಂಭಿಕರಾಗಿ ಕಣಕ್ಕೆೆ ಇಳಿದ ಹೋಪ್ ಐದು ಬೌಂಡರಿಯೊಂದಿಗೆ 42 ರನ್ ಗಳಿಸಿದರು.
ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಇವರನ್ನು ಮೊಹಮ್ಮದ್ ಶಮಿ 20ನೇ ಓವರ್ನಲ್ಲಿ ಔಟ್ ಮಾಡಿದರು. ವೆಸ್ಟ್ ಇಂಡೀಸ್ ಪರ 67 ಏಕದಿನ ಇನಿಂಗ್ಸ್ಗಳಲ್ಲಿ ಹೋಪ್ 3,000 ರನ್ ಗೆರೆ ದಾಟಿದರು. ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಹಾಶೀಮ್ ಆಮ್ಲಾ ಅವರು 57 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಅವರು 68 ಇನಿಂಗ್ಸ್ಗಳಲ್ಲಿ 3,000 ರನ್ ಗಳಿಸಿ ಮೂರನೇ ಸ್ಥಾನ ಹಾಗೂ 69 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿರುವ ವಿಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್ ನಂತರದ ಸ್ಥಾನದಲ್ಲಿ ಉಳಿದಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 50 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 315 ರನ್ ಗಳಿಸಿದೆ. ಭಾರತಕ್ಕೆೆ 316 ರನ್ ಗುರಿ ನೀಡಿದೆ.
Recent comments