Skip to main content
ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.

ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.

ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಸಿದ್ದತೆಯಲ್ಲಿ ತೊಡಗಿರುವ ಜೆಡಿಎಸ್, ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಾರ್ವಜನಿಕರಿಂದ ಆಹ್ವಾನಿಸಿದ್ದ ಸಲಹೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದ್ದು,ಅದರಲ್ಲಿ ಎರಡು ಸಂಗತಿಗಳನ್ನು ‘ಜನತ ಪ್ರಣಾಳಿಕೆಯಲ್ಲಿ’ ಸೇರಿಸಲು ತೀರ್ಮಾನಿಸಿದೆ. ಪ್ರಜಾಸತ್ತಾತ್ಮಕ ಮಾದರಿ ಅನುಸರಿಸಿದ ಜೆಡಿಎಸ್ ಪತ್ರಿಕಾ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಪ್ರತಿಯೊಬ್ಬರ ಅಭಿಪ್ರಾಯ ಕೇಳಿತ್ತು,ಇದಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಹಸ್ರಾರು ಜನರು ತಮ್ಮ ಸಲಹೆಗಳನ್ನು ನೀಡಿದ್ದಾರೆ.

ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.
ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.

ಅದರಲ್ಲಿ ಪ್ರಮುಖ ಎರಡು ಸಲಹೆಗಳು:

1.ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿಲಾಗುವುದು, ವೇತನದಲ್ಲಿರುವ ತಾರತಮ್ಯವನ್ನು ಸರಿಪಡಿಸುವ ಬೇಡಿಕೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಪರಿಗಣಿಸಲಾಗಿದೆ.

2.ಗುತ್ತಿಗೆ ಪದ್ದತಿಯು ಆಧುನಿಕ ಜೀತ ಪದ್ದತಿಯೇ ಸರಿ.ಸರಕಾರದ ಎಲ್ಲ ಇಲಾಖೆಗಳಲ್ಲಿನ ಗುತ್ತಿಗೆ,ತಾತ್ಕಾಲಿಕ ನೌಕರರನ್ನು ಈ ಸಮಸ್ಯೆಯಿಂದ ಮುಕ್ತರನ್ನಾಗಿಸುವ ಸಲುವಾಗಿ ಗುತ್ತಿಗೆ,ಹೊರಗುತ್ತಿಗೆ,ದಿನಗೂಲಿ,ಅತಿಥಿ,ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಎಲ್ಲ ಬಗೆಯ ತಾಕ್ಕಾಲಿಕ ನೌಕರರಿಗೆ .

60 ವರ್ಷದವರೆಗೆ ಸೇವಾ ಭದ್ರತೆಯನ್ನು ಒದಗಿಸಲಾಗುವುದು

ಗುತ್ತಿಗೆ ನೌಕರರ ಮತ್ತು ಸಮಾನ ಕೆಲಸ ಮಾಡುವ ಸರಾಕಾರಿ ನೌಕರ ವೇತನದ ವ್ಯತ್ಯಾಸವನ್ನು ಹೋಗಲಾಡಿಸಿ” ಸಮಾನ ಕೆಲಸಕ್ಕೆ ಸಮಾನ ವೇತನ” ನೀಡಾಲಾಗುವುದು. ಎಲ್ಲ ಗುತ್ತಿಗೆ ನೌಕರರನ್ನು ಹಂತ ಹಂತವಾಗಿ ಕಾಯಂಗೊಳಿಸಲು ಇರುವ ಕಾನೂನು ಅಡ್ಡಿಗಳನ್ನು ನಿವಾರಿಸಲು ಸರ್ವಕ್ರಮಗಳನ್ನು ಕೈಗೊಳ್ಳಲಾಗುವುದು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.