ಎರಡನೇ ಟೆಸ್ಟ್ ಪಂದ್ಯಕ್ಕೆ ಜೊಪ್ರಾ ಆರ್ಚರ್ ಡೌಟ್
ಎರಡನೇ ಟೆಸ್ಟ್ ಪಂದ್ಯಕ್ಕೆ ಜೋಫ್ರಾ ಆರ್ಚರ್ ಡೌಟ್

ಕೇಪ್ ಟೌನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಅಚ್ಚರಿಯ ಸೋಲುಂಡ ಇಂಗ್ಲೆಂಡ್ ತಂಡಕ್ಕೆ, ಇದೀಗ ಸರಣಿಯ 2ನೇ ಪಂದ್ಯದ ಆರಂಭಕ್ಕೂ ಮೊದಲೇ ಭಾರಿ ಆಘಾತ ಎದುರಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡದ ಮುಖ್ಯ ವೇಗದ ಬೌಲರ್ ಜೋಫ್ರಾ ಆರ್ಚರ್ ಮೊಣಕೈ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಜ.3ರಂದು ಇಲ್ಲಿ ಆರಂಭವಾಗಲಿರುವ 4 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳನ್ನು ಅಲ್ಪ ಮೊತ್ತಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ದಕ್ಷಿಣ ಆಫ್ರಿಕಾ ತಂಡ 107 ರನ್ಗಳ ಅಮೋಘ ಜಯದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಸತತ ಸೋಲಿನ ಕೊಂಡಿಯನ್ನು ಕಳಚಿಟ್ಟಿತು. ಇದೀಗ 2ನೇ ಪಂದ್ಯದಲ್ಲೂ ಗೆದ್ದು 2-0 ಅಂತರದಲ್ಲಿ ಸರಣಿ ಮುನ್ನಡೆ ಪಡೆಯುವತ್ತ ಎದುರು ನೋಡುತ್ತಿದೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿರುವ ಪ್ರಕಾರ, ಬಲಗೈ ವೇಗದ ಬೌಲರ್ ಜೋಫ್ರಾ ಆರ್ಚರ್ ನೆಟ್ಸ್ನಲ್ಲಿ ಕೇವಲ 6 ಎಸೆತಗಳನ್ನು ಮಾತ್ರವೇ ಎಸೆಯಲು ಶಕ್ತರಾಗಿದ್ದಾರೆ. ಬಳಿಕ ಮೊಣಕೈ ನೋವಿನ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
Recent comments