Skip to main content
ಜೆಡಿಎಸ್ ಶಾಸಕ ಮಧುಬಂಗಾರಪ್ಪ ಅಭ್ಯರ್ಥಿ ಪರ ಗೀತಾ ಶಿವರಾಜ್‌ಕುಮಾರ್ ಪ್ರಚಾರ

ಜೆಡಿಎಸ್ ಶಾಸಕ ಮಧುಬಂಗಾರಪ್ಪ ಅಭ್ಯರ್ಥಿ ಪರ ಗೀತಾ ಶಿವರಾಜ್‌ಕುಮಾರ್ ಪ್ರಚಾರ

ಜೆಡಿಎಸ್ ಶಾಸಕ ಮಧುಬಂಗಾರಪ್ಪ ಅಭ್ಯರ್ಥಿ ಪರ ಗೀತಾ ಶಿವರಾಜ್‌ಕುಮಾರ್ ಪ್ರಚಾರ

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ
ಶಿವಮೊಗ್ಗ  ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ

 

ಹ್ಯಾಟ್ರಿಕ್ ಹೀರೊ ಶಿವಣ್ಣನವರ ಪತ್ನಿ ಗೀತಾ  ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿ ಶಾಸಕ ಮಧುಬಂಗಾರಪ್ಪ ಪರ ಗೀತಾ ಶಿವರಾಜ್ ಕುಮಾರ್ ಪ್ರಚಾರ ನಡೆಸಲಿದ್ದಾರೆ . ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಧುಬಂಗಾರಪ್ಪ ನವರು, ಗೀತಾ ಶಿವರಾಜ್ ಕುಮಾರ್ ಅವರು ಮಾ.19 ರಿಂದ 4 ದಿನ ಮೊದಲ ಹಂತದ ಜಿಲ್ಲಾ ಪ್ರವಾಸ ನಡೆಸುತ್ತಾರೆ. ತೀರ್ಥಹಳ್ಳಿ, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ, ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.

ಜೆಡಿಎಸ್ ಶಾಸಕ ಮಧುಬಂಗಾರಪ್ಪ
ಜೆಡಿಎಸ್ ಶಾಸಕ ಮಧುಬಂಗಾರಪ್ಪ

ಅಲ್ಲದೆ 2ನೇ ಹಂತದಲ್ಲಿ ಕಾರವಾರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ ಹೇಳಿದರು. ಮಾ.25ರ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಜೊತೆಗೆ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮುಖಂಡರುಗಳಾದ ಹೆಚ್.ವಿಶ್ವನಾಥ್, ಪಿ.ಜಿ.ಆರ್.ಸಿಂದ್ಯಾ, ವೈ.ಎಸ್.ವಿ.ದತ್ತಾ, ಬಸವರಾಜ್ ಹೊರಟ್ಟಿ, ಶಶಿಭೂಷಣ್ ಹೆಗ್ಡೆ ಮತ್ತಿತರರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.ಇನ್ನೂ ನಟ ಶಿವಾರಜ್ ಕುಮಾರ ಅವರನ್ನು ಯಾವುದೇ ಕಾರಣಕಕ್ಕೂ ಪ್ರಚಾರಕ್ಕೆ ಎಳೆದುತರುವುದಿಲ್ಲ ಎಂದು ಮಧುಬಂಗಾರಪ್ಪ ತಿಳಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.