ಜನವರಿ 25 ಕ್ಕೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ.
ಜನವರಿ 25 ಕ್ಕೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ.
![Kannada new film](/sites/default/files/inline-images/IMG-20210120-WA0067.jpg)
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಸಮಾರಂಭವನ್ನು ಈ ಬಾರಿ 25.1.21ರಂದು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಜನವರಿ 25 ಸಂಸ್ಥೆ ಸ್ಥಾಪಕರಾದ ದಿ.ಡಿ.ವಿ.ಸುಧೀಂದ್ರ ಅವರ ಹುಟ್ಟುಹಬ್ಬ.
ಅದೇದಿನ ಪ್ರಶಸ್ತಿ ಸಮಾರಂಭ ನಡೆಸುವುದು ವಾಡಿಕೆ. ಪ್ರತಿವರ್ಷ 11ಪ್ರಶಸ್ತಿಗಳನ್ನು ನಮ್ಮ ಸಂಸ್ಥೆ ಮೂಲಕ ನೀಡುತ್ತಿದ್ದೆವು. ಆದರೆ ಕಳೆದವರ್ಷ ಕೊರೋನ ಹಾವಳಿಯಿಂದ ಹೆಚ್ಚು ಚಿತ್ರಗಳು ತೆರೆಕಂಡಿಲ್ಲ.
![Kannada new film](/sites/default/files/inline-images/IMG-20210120-WA0070.jpg)
ಹಾಗಾಗಿ ಈ ಬಾರಿ ಕೇವಲ ನಾಲ್ಕು ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, 25.1.21 ರ ಸೋಮವಾರ ಸಂಜೆ 5ಕ್ಕೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋ ದಲ್ಲಿ ಈ ಸಲದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗುತ್ತಿದೆ.
![Kannada new film](/sites/default/files/inline-images/IMG-20210120-WA0071.jpg)
ಈ ಸಲದ ಪ್ರಶಸ್ತಿಗಳ ವಿವರ ಶ್ರೀ ಎನ್ ಕುಮಾರ್ (ನಿರ್ಮಾಪಕರು) ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ.
ಶ್ರೀ ಬಾಬು ಕೃಷ್ಣಮೂರ್ತಿ (ಹಿರಿಯ ಪತ್ರಕರ್ತರು) ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ.
![Kannada new film](/sites/default/files/inline-images/IMG-20210120-WA0069.jpg)
ಶ್ರೀಮತಿ ಇಂದು ವಿಶ್ವನಾಥ್ (ಗಾಯಕಿ) ಡಾ||ರಾಜಕುಮಾರ್ ಪ್ರಶಸ್ತಿ .
ಶ್ರೀ ಇಂದ್ರಜಿತ್ ಲಂಕೇಶ್ (ನಿರ್ದೇಶಕರು) ನಿರ್ದೇಶಕ ದಿ.ಆರ್.ಶೇಷಾದ್ರಿ ಪ್ರಶಸ್ತಿ.
![Kannada new film](/sites/default/files/inline-images/IMG-20210120-WA0068.jpg)
ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರಿಂದ ಸ್ವೀಕರಿಸಲಿದ್ದಾರೆ.
Recent comments