Skip to main content
ಅಪರಾಧಿ ಯಾರು.?

ಅಪರಾಧಿ ಯಾರು.?

ಅಪರಾಧಿ ಯಾರು.?

ಅದೋ…

ಅಲ್ಲಿ ಕಾಣುತ್ತಿರುವುದೇ ಶಂಕರ-ಭವಾನಿ ದೇವಸ್ಥಾನ ನಗರ ವ್ಯಾಪ್ತಿಯಿಂದ ಮೂರು ಮೈಲು ದೂರವಿರುವ ಬೆಳ್ಳನೆಯ ಬಿಳಿ ಗೋಪುರಕ್ಕೆ ಕೆಂಪು ಶಾಂತಿಯ ಧ್ವಜ ಕಾಶದಲ್ಲಿ ಹಾರಾಡುತ್ತದೆ.ಸುತ್ತಲೂ ಭದ್ರವಾದ ರಕ್ಷಣೆ ಗೋಡೆಯನ್ನು ನಿರ್ಮಿಸಿಕೊಂಡು ಪೂಜಾ ಸಮಯವಲ್ಲದ ವೇಳೆಯಲ್ಲಿ ಯಾವ ನೆರಪಿಳ್ಳಿಯನ್ನೂ ಒಳಗೆ ಕರೆದುಕೊಳ್ಳದೆ ಭಕ್ತ ಸಮೂಹವನ್ನು ಹೊರಗಡೆ ನಿಲ್ಲಿಸಿ ಕಾಯಿಸುತ್ತದೆ,ಬೆಳೆಗಿನ ಜಾವ ಐದು ಗಂಟೆಗೆ ದೇವಲಾಯದ ಬಾಗಿಲು ತೆರೆದರೆ ಅದು ಮುಕ್ತಾಯಗೊಳ್ಳುವುದು ಸಂಜೆ ಐದಕ್ಕೆ ,ಸಂಜೆ ಐದರಿಂದ ಮುಂಜಾನೆ ಐದು ಗಂಟೆಯವರೆಗೆ ದೇವಾಲಯದ ಹೊರಗೂ-ಒಳಗೂ ಯಾರೂ ವಾಸ ಮಾಡುವ ಹಾಗೆ ಇಲ್ಲ.

ಅಪರಾಧಿ ಯಾರು.?

ಅದು ಇಂದಿನವರೆಗೆ ನಡೆದುಕೊಂಡು ಬಂದ ನಿಯಮ. ದೇವಾಲಯ ನೋಡಿದರೆ ಕಣ್ಣು ಕೋರೈಸುವ ಬಂಗಾರ ವರ್ಣದ ಅದ್ಭುತ ನವೀನ ಮಾದರಿ ಕಟ್ಟಡ!! ಆದರೆ ಅದೋಂದು ಹುತ್ತ. ಅದರೋಳಗೆ ವಾಸಿಸುವ ಎಲ್ಲಾ ಸಾಧು-ಸಂತರು,ಸ್ವಾಮಿಗಳು ನಾಗರಹಾವಿನಂತೆ ಬಹುದಿನಗಳಿಂದ ಅಜ್ಞಾನ-ಮೂಢನಂಬಿಕೆ ಅಷಾಢಭೂತಿಗಳ ಗರ್ಭದಲ್ಲಿ ಉಸಿರಾಡಿಸುತ್ತ ಬಂದ ಭಕ್ತಾದಿಗಳು ನಂಬಿದ ದೇವರು ತಮ್ಮ ಸರ್ವಸ್ವವನ್ನು ಅರ್ಪಿಸಲು ಸಿದ್ದವಾಗಿರೋ ಭಕ್ತರು ನಿಜವಾದ ಭಕ್ತರಲ್ಲ .ಅಲ್ಲಿರುವ ದೇವರು ದೇವರಲ್ಲ. “ಅದೇಗೆ ಹೇಳುತ್ತೀರಿ? ಅದು ದೇವಾಲಯವಲ್ಲವೆಂದು,ಅಲ್ಲಿಯ ದೇವರು ದೂಪ-ದೀಪ ಬೆಳಗಿನ ಪರಂಜ್ಯೋತಿಯ ಬೆಳಕಿನಲ್ಲಿ ಭಕ್ತಾದಿಗಳ ಮನದ ಕತ್ತಲೆಯನ್ನು ಕಳೆಯುತ್ತದೆ,ಧ್ಯಾನದಿಂದ ಪರಿಪೂರ್ಣ ಅರಿವಿನಲ್ಲಿ ಕರಗಿಸಿ ಭಕ್ತರ ವಿಕಾಸಕ್ಕೆ ಮೂಲಕಾರಣವಾಗಿದೆ. ಪ್ರಸಾದವು ದೇವರಿಂದಲೇ ಬರುವಂತಹದ್ದಾಗೆದೆ ಹೀಗಿರುವಾಗ ದೇವಾಲಯವು ಹುತ್ತ,ಅದರೊಳಗಿರುವವರು ಹಾವುಗಳೆಂದು ಹೇಳುವುದು ಯಾವ ನ್ಯಾಯ.? ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುತ್ತದೆ ಅನುಭವ ವಾಣಿ,ಬನ್ನಿ.ಒಳ ಹೊಕ್ಕು ನಿಜ ಸ್ಥಿತಿ ಏನು ಎನ್ನುವುದನ್ನು ಅರಿಯೋಣ.

ಡಣ್…..

ಶಂಕರ -ಭವಾನಿ ದೇವಾಲಯದ ಪ್ರಾರಂಭದ ಪೂಜೆ ಗಂಟೆ ಬಾರಿಸಿತು,ಗಂಟೆಯನಾದ ಕೇಳಿದ ಭಕ್ತ ಸಮೂಹವು ಆ ದಾರಿಯಿಂದ ಕುರಿಮುಂದೆ ನುಗ್ಗಿದಂತೆ ನೂಕಿಕೊಂಡು ಒಳ ಪ್ರವೇಶಿಸಿ ಆವರಣದಲ್ಲಿ ಕಿಕ್ಕಿರಿದು ಸೇರಿದರು.ದೇವಾಲಯದೊ ಒಳಭಾಗದಲ್ಲಿರುವ ಭವ್ಯ ಪುಷ್ಕರಿಣಿಯ ಸುತ್ತಲೂ ಭಕ್ತಾದಿಗಳು ಕುಳಿತುಕೊಂಡು ಗರ್ಭ ಗುಡಿಯಲ್ಲಿ ನಡೆಯುವ ಪೂಜಾ ವಿಧಾನಗಳನ್ನು ವೀಕ್ಷಿಸತೊಡಗಿದರು.ಎತ್ತರವಾದ ಸ್ಥಂಭದಲ್ಲಿ ಅವರ ಕೈಯನ್ನು ಒಂದರ ಮೇಲೊಂದು ಹಾಕಿಕೊಂಡು ಧ್ಯಾನ ಮುನ್ನನಾಗಿ ಶಂಕರನು ಅವರ ಪಕ್ಕದಲ್ಲಿ ಭವಾನಿ ದೇವಿಯ ಮೂರ್ತಿಗಳು ತೇಜೋಮಯವಾಗಿ ಕಂಗೊಳಿಸುತ್ತವೆ.ಕೆಳಗಡೆ ಸ್ಥಂಭದಲ್ಲಿಯ ಸುಖಾಸನದಲ್ಲಿ ಕುಮಾರಸ್ವಾಮಿಗಳು.ಅವರ ಪಕ್ಕದಲ್ಲಿ ಸಹಾಯಕ ಸ್ವಾಮಿಗಳಾಗಿ ಮುನಿಸ್ವಾಮಿಗಳು ಆಸೀನರಾಗಿರುವರು.

ಇವರುಗಳ ಎದುರುಗಡೆಯಲ್ಲಿ ಭಕ್ತಾದಿಗಳ ಭಾರಿ ಜನಸ್ತೋಮ ಕೈಮುಗಿದುಕೊಂಡು ಕುಳಿತುಕೊಂಡಿದೆ.ಪೂಜೆಗೆ ಮೊದಲು ಬಹುಕಾಲದಿಂದಲೂ ನಡೆಸಿಕೊಂಡುಬಂದ ಪದ್ದತಿಯಂತೆ ದೇವದಾಸಿಯಾದ ನಾಗಿ,ದೇವರ ಸ್ತೋತ್ರದೊಂದಿಗೆ ನೃತ್ಯ ಪ್ರಾರಂಭಿಸಿದಳು.ಕುಮಾರಸ್ವಾಮಿಗಳು,ಮುನಿಸ್ವಾಮಿಗಳು ಮತ್ತು ಭಕ್ತ ಜನ ಅವಳ ವಿಶೇಷ ಭಂಗಿಯ ನೃತ್ಯವನ್ನು ಕಣ್ಣು ರೆಪ್ಪೆ ಮಿಟಿಕಿಸದೆ ನೋಡಿ ಕೈತಾಳ ಹಾಕುತ್ತದೆ. ನಾಗಿಯು ನೃತ್ಯ ಮುಗಿಸಿ, ಬಾಗಿ ಕೈಮುಗಿದುಕೊಂಡೇ ಹಿಂದೆ ಸರಿಯುತ್ತ ಜನ ಸಮೂಹದೊಳಗೆ ಸೇರಿಕೊಂಡಳು.

ಕುಮಾರಸ್ವಾಮಿಗಳು ಪಕ್ಕದ ಬುಟ್ಟಿಯೊಳಗೆ ಕೈಹಾಕಿ ಹಣ್ಣು ಹೂ ಪ್ರಸಾದವನ್ನು ನೀಡಿ ಆಶೀರ್ವದಿಸಲು ಮುಂದಾದರು. ನಾಗಿಯು ತನ್ನ ಮಡಿಲಲ್ಲಿ ಹಾಕಿಸಿಕೊಳ್ಳಲು ಬಾಗಿದಾಗ ಅವಳು ಮುಡಿದ ಮೈಸೂರ ಮಲ್ಲಿಗೆ ಹೂವಿನ ಮಧುರ ಸುವಾಸನೆಯು ಸ್ವಾಮಿಗಳ ಮೂಗಿಗೆ ಬಡಿದು ಮೈ ಪಳುಕಿತಗೊಂಡು ಇಬ್ಬರು ಸ್ವಾಮಿಗಳು ಅನಿವಾರ್ಯವಾಗಿ ತಲೆ ಎತ್ತಿ ಅವಳನ್ನು ದಿಟ್ಟಿಸಿದರು.ಅವರ ಕಣ್ಣಿಗೆ ನಾಗಿಯು ಸ್ವರ್ಗಲೋಕದ ತಿಲೋತ್ತಮೆಯಂತೆ ಕಂಡಳು.

ಇಬ್ಬರು ಬಾಯಿ-ತುಟಿಗಳನ್ನು ಸವರಿಸಿಕೊಂಡರು.ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಕುಮಾರಸ್ವಾಮಿಗಳು ಶಂಕರ-ಭವಾನಿ ದೇವಿಗೆ ದೂಪಾರಾಧನೆ ಮಾಡಿ ಮುಗಿಸಿ ಮಂತ್ರ ಪಠಿಸಿದರು. ಓಂ ನಮಃ ಶಿವಾಯ ಶಿವಾಯ ನಮಃಓಂ! ನಾರಾಯಣ ನಮಃ ಓಂ ಕುಮಾರಸ್ವಾಮಿಗಳು ಮಂತ್ರ ಪಠಣ ಮಾಡುತ್ತ ಒಂದೊಂದು ಹೂ ಶಂಕರನಿಗೆ ಮತ್ತೋಂದು ಭವಾನಿ ದೇವಿಗೂ ಎಸೆಯುತ್ತ ಉಚ್ಚರಿದರು,ಅವರ ಜೊತೆಯಾಗಿ ಭಕ್ತ ಸಮೂಹವೂ “ಓಂ ನಮಃಶಿವಾಯ” ಎಂದು ಜಯಘೋಷ ಮಾಡತೊಡಗಿತು. “ನೀಲಾಕಂಠಯ ನಮಃ” “ಓಂ ನಮಃ ಶಿವಾಯ” “ದಾಮೋದರ ನಮಃ” “ಓಂ ನಮಃ ಶಿವಾಯ” “ಮುಕ್ಕಣ್ಣಾಯ ನಮಃ” “ಓಂ ನಮಃ ಶಿವಾಯ” ಸ್ವಾಮಿಗಳ ಮಂತ್ರ ಪಠಿಸುವುದು ನಿಲ್ಲಿಸಿದರು.ಭಕ್ತಾದುಗಳು ಜಯಘೋಷವು ನಿಂತಿತು.ಗರ್ಭಗುಡಿಯ ಬಾಗಿಲು ತೆರೆಯಿತು.ಎರಡು ಮೂರ್ತಿಗಳು ಕಣ್ಣು ಕೋರೈಸುವ ಪರಿ ಬೆಳಕಿನಲ್ಲಿ ಕಂಡವು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.