Skip to main content
ಬಹದ್ದೂರ್ ಗಂಡು "ಈಗ ಭರ್ಜರಿ ಗಂಡು.

ಬಹದ್ದೂರ್ ಗಂಡು "ಈಗ ಭರ್ಜರಿ ಗಂಡು.

"ಬಹದ್ದೂರ್ ಗಂಡು" ಈಗ 'ಭರ್ಜರಿ ಗಂಡು".

Kannada

ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಚಿತ್ರ "ಭರ್ಜರಿ ಗಂಡು". ಈ ಮೊದಲು " ಬಹದ್ದೂರ್ ಗಂಡು" ಎಂಬ ಹೆಸರಿನಿಂದ ಆರಂಭವಾದ ಈ ಚಿತ್ರದ ಶೀರ್ಷಿಕೆ ಈಗ "ಭರ್ಜರಿ ಗಂಡು" ಎಂದು ಬದಲಾಗಿದೆ.‌ ಕಿರಣ್ ರಾಜ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಇನ್ನಷ್ಟು ಸ್ಲಿಮಾಗಿ ಕಾಣಿಸಿಕೊಂಡಿದ್ದಾರೆ.

Kannada

ದೊಣ್ಣೆ ವರಸೆ ಮುಂತಾದ ಸಾಹಸ ವಿದ್ಯೆಗಳ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರ ಉತ್ತಮವಾಗಿ ಬರಲು ನಾಯಕ‌ನೊಬ್ಬ ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಈ ಚಿತ್ರದಲ್ಲಿ ಅವರು ಎರಡು ಲುಕ್ ಗಳಲ್ಲಿ ಗಮನ‌ ಸೆಳೆಯಲಿದ್ದಾರೆ. ಎರಡು ರೀತಿಯ ಪಾತ್ರಗಳಿಗೂ ಬೇಕಾದ ಪೂರ್ವ ತಯಾರಿ ಮಾಡಿಕೊಂಡು ಸೈ ಅನಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲ ಜಲಕ್ ನೋಡಿಯೇ ಕಿರಣ್ ರಾಜ್ ಅವರಿಗೆ ಸಾಕಷ್ಟು ಆಫರ್ ಬರುತ್ತಿದೆ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರದ ‌ಚಿತ್ರೀಕರಣ ಬಹುತೇಕ ಮುಗಿದಿದೆ.

ಪ್ರಸಿದ್ದ್ ಸಿನಿಮಾಸ್, ಮದನ್ ಗೌಡ ಹಾಗೂ ಅನಿಲ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸುಮಧುರ ಹಾಡುಗಳಿಗೆ ಗುಮ್ಮಿನೇನಿ‌ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಈ‌ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ಇದ್ದಾರೆ. ರಮೇಶ್ ಭಟ್ , ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.