Skip to main content
ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ "ಇಲಾಖೆ".

ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ "ಇಲಾಖೆ".

ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ "ಇಲಾಖೆ".

Kannada

ಖ್ಯಾತ ನಿರ್ದೇಶಕ, ನಟ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಹೆಸರಾಂತ ನಟ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ " ಇಲಾಖೆ" ಎಂದು ಶೀರ್ಷಿಕೆಯಿಡಲಾಗಿದೆ. ಇವರಿಬ್ಬರ ಕಾಂಬಿನೇಶನಲ್ಲಿ ಮೂಡಿಬರುತ್ತಿರುವ ಈ ಚತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಉಳಿದ ಭಾಗದ ಚಿತ್ರೀಕರಣ ಜೂನ್ ನಲ್ಲಿ ನಡೆಯಲಿದೆ. "ಲಾಕಪ್ ಡೆತ್", "ಎ ಕೆ 47 " ಚಿತ್ರಗಳ ತರಹದ ಕಥೆಯಿದು.

ನಾನು ಬಹಳ ವರ್ಷಗಳ ನಂತರ ನಾನೇ ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರವಿದು ಎನ್ನುತ್ತಾರೆ ನಿರ್ದೇಶಕ ಓಂಪ್ರಕಾಶ್ ರಾವ್. ಶ್ರೀರೇಣುಕಾ ಮೂವೀ ಮೇಕರ್ಸ್ ಲಾಂಛನದಲ್ಲಿನಿರ್ಮಾಣವಾಗುತ್ತಿರುರುವ ಈ ಚಿತ್ರಕ್ಕೆ ಎಂ.ಎಸ್. ರಮೇಶ್ ಸಂಭಾಷಣೆ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ , ರವಿಕುಮಾರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಲಕ್ಷ್ಮಣ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.