ರಾಜ್ಯಭಾರ ಮಾಡಲು ಹೊರಟವರು.
ರಾಜ್ಯಭಾರ ಮಾಡಲು ಹೊರಟವರು.
ಈ ಹಿಂದೆ ರಾಜಧಾನಿ ಚಿತ್ರದಲ್ಲಿ ಅಭಿನಯಿಸಿದ್ದ ನಟ ರವಿತೇಜ ಈಗ *ರಾಜ್ಯಭಾರ* ಮಾಡಲು ಹೊರಟಿದ್ದಾರೆ. ಅಂದರೆ *ರಾಜ್ಯಭಾರ* ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಎ.ಸಿ.ವೆಂಕಟೇಶ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು. ರವಿತೇಜ ಅವರ ಭಾಮೈದ ಆರ್.ಕಾರ್ತೀಕ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.