ಗುವಾಹಾಟಿಗೆ ಆಗಮಿಸಿದ ಶ್ರೀಲಂಕಾ ಕ್ರಿಕೆಟ್ ತಂಡ
ಗುವಹಾಟಿಗೆ ಆಗಮಿಸಿದ ಶ್ರೀಲಂಕಾ ಕ್ರಿಕೆಟ್ ತಂಡ
ಗುವಾಹಟಿ: ಭಾರತ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲು ಲಸಿತ್ ಮಲಿಂಗಾ ನಾಯಕತ್ವದ ಶ್ರೀಲಂಕಾ ತಂಡ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಗುರುವಾರ ಅಸ್ಸಾಂನ ಗುವಾಹಟಿಗೆ ಆಗಮಿಸಿದೆ. ಕಳೆದ ತಿಂಗಳು ಪೌರತ್ವ ಕಾಯಿದೆ ವಿರುದ್ಧ ಇಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಈ ಹಿನ್ನೆೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಶ್ರೀಲಂಕಾ ತಂಡ ನೇರವಾಗಿ ಹೊಟೇಲ್ಗೆ ಆಗಮಿಸಿತು.