ಪ್ರೀಮಿಯರ್ ಪದ್ಮಿನಿ .
ಪ್ರೀಮಿಯರ್ ಪದ್ಮಿನಿ ..........
ಸ್ಯಾಂಡಲ್ ವುಡ್ ಗೆ “ಪ್ರೀಮಿಯರ್ ಪದ್ಮಿನಿ” ಅನ್ನೋ ಚಿತ್ರಕ್ಕೆ “ಶ್ರುತಿ ನಾಯ್ಡು” ನಿರ್ಮಾಪಕಿಯಾಗಿ ಎಂಟ್ರಿ ನಿಡಿದ್ದಾರೆ. ನಿನ್ನೆ ದೊಡ್ಡ ಗಣೇಶನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿನಿಮಾ ಚಿತ್ರಿಕರಣದ ಮಹೂರ್ತವನ್ನು ಚಿತ್ರದ ಮೊದಲ ದೃಶವನ್ನು ಕ್ಲ್ಯಾಪ್ ಮಾಡುವುದರ ಮೂಲಕ ಚಿತ್ರಿಕರಣವನ್ನು ಅರಂಭಿಸಲಾಯಿತು.
ಚಿತ್ರದಲ್ಲಿನ ತಾರಗಣ..............
“ಪ್ರೀಮಿಯರ್ ಪದ್ಮಿನಿ” ಚಿತ್ರಕ್ಕೆ ಶ್ರುತಿ ನಾಯ್ಡು ಅವರು ನಿರ್ಮಾಪಕಿಯಾಗಿ ಹೆಜ್ಜೆ ಇಟ್ಟಿದ್ದಾರೆ. ಮತ್ತು “ರಮೇಶ್ ಇಂದಿರಾ” ರವರು ಚಿತ್ರದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು. ಚಿತ್ರದ ಕಥೆಯ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರು, ಮಾತನಾಡಿ ಸಿನಿಮಾದಲ್ಲಿ ಎಲ್ಲರು ಇಷ್ಟಪಡುವಂತಹ ಪಾತ್ರಗಳು ಇವೆ ಈ ಚಿತ್ರದಲ್ಲಿ ವಿಶೇಷವಾಗಿ ಸಾಮಾಜಿಕ ಜೀವನದಲ್ಲಿ “ ಸಂಬಂಧಗಳು” ಎಷ್ಟು ಪ್ರಮುಖವಾಗಿರುತ್ತವೆ ಅನ್ನುವಂತಹ ವಿಷಯಾದರಿತ ಚಿತ್ರವಾಗಿದ್ದು, ಮುಖ್ಯವಾಗಿ ಸಿನಿಮಾದಲ್ಲಿ “ಒಂದು ಕಾರು” ಇಡಿ ಚಿತ್ರದಲ್ಲಿನ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳುತ್ತಾರೆ ನಿರ್ದೇಶಕರು. ಇನ್ನೂ ಚಿತ್ರದಲ್ಲಿ ನವರಸ ನಾಯಕ ಜಗ್ಗೆಶ್ ಸುಧರಾಣಿಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.ಚಿತ್ರದಲ್ಲಿನ ಪಾತ್ರದ ಬಗ್ಗೆ ಜಗ್ಗೆಶ್ ಮಾತನಾಡಿ ಈ ಸಿನಿಮಾದಲ್ಲಿ ಒಬ್ಬ ಅಲೆಮಾರಿ ಜೀವನ ಮಾಡುವ ವ್ಯೆಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಾರೆ.
Recent comments