Skip to main content
ಸೈನಿಕರು ಸೆಲ್ಫಿ ಕೇಳೋಕೆ ಬಂದ್ರೆ ಯಶ್ ಹೇಳಿದ್ದೇನು ಗೊತ್ತಾ.?

ಸೈನಿಕರು ಸೆಲ್ಫಿ ಕೇಳೋಕೆ ಬಂದ್ರೆ ಯಶ್ ಹೇಳಿದ್ದೇನು ಗೊತ್ತಾ.?

ಸೈನಿಕರು ಸೆಲ್ಫಿ ಕೇಳೋಕೆ ಬಂದ್ರೆ ಯಶ್ ಹೇಳಿದ್ದೇನು ಗೊತ್ತಾ .?

ಯಶ್ ಜೊತೆ ಸೈನಿಕರು

ಯಶ್ ಅವರು ನೇರ ಮಾತುಗಳಿಗೆ ಹೆಸರುವಾಸಿ.. ಇದ್ದದ್ದನ್ನು ಇದ್ದ ಹಾಗೆ ಆಡಿಬಿಡುವ ಮನುಷ್ಯ  ಸ್ಟಾರ್ ಎಂಬ ಅಹಂಕಾರ ಪಡದೇ, ನಿನ್ನೆ ನನ್ನ ಮಗಳಿಗೆ ಯಾರೂ ಗೌರವ ಕೊಡಬೇಡಿ.. ಅವರು ಏನಾದರೂ ಸಾಧನೆ ಮಾಡಿದಾಗ ಮಾತ್ರ ಗೌರವಿಸಿ ಎಂದು ನೇರವಾಗಿಯೇ ಹೇಳಿದ್ದರು.

ಸೈನಿಕರ ಜೊತೆ ಯಶ್

ಅದೇ ರೀತಿ ನಿನ್ನೆ ನಮ್ಮ ಸೈನಿಕರೊಂದಿಗೂ ಯಶ್ ಅವರ ನಡುವೆಯೂ ಸಣ್ಣ ಮಾತುಕತೆಯೊಂದು ನಡೆದಿದೆ ಇಲ್ಲಿದೆ ನೋಡಿ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ.

ಅದು ನಮ್ಮ ಸೈನಿಕರು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ತೆಗೆಸಿಕೊಂಡಿರುವ ಫೋಟೋ ಹೌದು ಕಾರ್ಯಕ್ರಮವೊಂದನ್ನು ಮುಗಿಸಿ ಯಶ್ ಬೆಂಗಳೂರಿಗೆ ಮರಳಿದ ವೇಳೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬೇರೆ ಊರಿಗೆ ತೆರಳುತ್ತಿದ್ದ ನಮ್ಮ ಕೆಲ ಸೈನಿಕರು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಯಶ್ ಅವರನ್ನು ನೋಡಿ ಅವರನ್ನು ಮಾತನಾಡಿಸಲೆಂದು ಹತ್ತಿರಕ್ಕೆ ಬಂದರು.. ಬಂದವರು ಯಶ್ ಅವರಿಗೆ ವಿಶ್ ಮಾಡಿ ಒಂದು ಸೆಲ್ಫಿ ಕೇಳಿದರು.

ಸೈನಿಕರ ಜೊತೆ ಯಶ್

ತಕ್ಷಣ ಯಶ್ ಆಡಿದ ಮಾತೇನು ಗೊತ್ತಾ? ಸರ್ ನಿಮ್ಮ ಜೊತೆ ನಾವು ಸೆಲ್ಫಿ ಕೇಳಬೇಕು ನಮ್ಮ ಜೊತೆ ನೀವಲ್ಲಾ.. ನಮ್ಮ ದೇಶದ ವೀರರು ನೀವು ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳೋದು ಅದೃಷ್ಟ ನಿಮ್ಮಗಳ ಮುಂದೆ ನಾವ್ ಏನೂ ಅಲ್ಲ ಅಂತ ಯಶ್ ತಮ್ಮದೇ ರೀತಿಯಲ್ಲಿ ಹೇಳಿದರಂತೆ.

ಆನ್ ಸ್ಕ್ರೀನ್ ಮಾತ್ರ ಹೀರೋ ಎಂದುಕೊಂಡಿದ್ದ ಯಶ್ ಅವರು ನಿಜ ಜೀವನದಲ್ಲಿ ಸೈನಿಕರ ಬಗ್ಗೆ ಆಡಿದ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿ‌… ಫೋಟೋ ಕ್ಲಿಕ್ಕಿಸಿಕೊಂಡು ಆತ್ಮೀಯವಾಗಿ ಮಾತನಾಡಿದರು.. ಹೋಗುವ ಮುನ್ನ ಯಶ್ ಅವರು ಸೈನಿಕರಿಗೆ ಸೆಲ್ಯೂಟ್ ಮಾಡಿದ್ದಾರೆ.. ಸೈನಿಕರು ಕೂಡ ಯಶ್ ಅವರ ಸೆಲ್ಯೂಟ್ ಗೆ ಪ್ರತಿ ಸೆಲ್ಯೂಟ್ ಮಾಡಿ ಧನ್ಯವಾದ ತಿಳಿಸುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು.. ಸೂಪರ್ ಸ್ಟಾರ್ ಆದರೇನು ಸಿನಿಮಾ ಸ್ಟಾರ್ ಆದರೇನು ನಮ್ಮ ಸೈನಿಕರೇ ನಿಜವಾದ ಹೀರೋಗಳು.

ಸೈನಿಕರ ಜೊತೆ ಯಶ್

ಅಂತಹ ಹೀರೋಗಳಿಗೆ ಗೌರವ ಕೊಟ್ಟವರೇ ನಿಜವಾದ ಸೂಪರ್ ಸ್ಟಾರ್.. ಯಶ್ ಅವರು ಸೈನಿಕರೊಂದಿಗೆ ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚುವಂತದ್ದು.. ಧನ್ಯವಾದಗಳು ಯಶ್ ಸರ್..

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.